ಟ್ರ್ಯಾಕ್ಟರ್‌ಗೆ ವಿದ್ಯುತ್ ತಗುಲಿ ಅಪ್ಪ-ಮಗ ಸೇರಿ ಮೂವರ ದುರ್ಮರಣ..!

ಈ ಸುದ್ದಿಯನ್ನು ಶೇರ್ ಮಾಡಿ

ಕುಣಿಗಲ್, ಮೇ 2- ಉತ್ಸವಕ್ಕೆಂದು ಅಪ್ಪ-ಮಗ ಟ್ರ್ಯಾಕ್ಟರ್‍ನಲ್ಲಿ ಹೋಗುತ್ತಿದ್ದಾಗ ವಿದ್ಯುತ್ ವೈರ್ ಸ್ಪರ್ಶಿಸಿದ ಪರಿಣಾಮ ಇವರಿಬ್ಬರೂ ಕೆಳಗೆ ಬಿದ್ದು ಮೃತಪಟ್ಟರೆ, ಇವರನ್ನು ರಕ್ಷಿಸಲು ಬಂದ ಯುವಕನೂ ಸಹ ವಿದ್ಯುತ್ ಅವಘಡದಿಂದ ಸಾವನ್ನಪ್ಪಿರುವ ದಾರುಣ ಘಟನೆ ಅಮೃತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ನಾಗೇಗೌಡನಪಾಳ್ಯದ ಹನುಮಂತಯ್ಯ (54), ಹರೀಶ್ (24), ಸುನಿಲ್ (20) ಮೃತಪಟ್ಟ ದುರ್ದೈವಿಗಳು. ತುವ್ವೆಕೆರೆ ಗ್ರಾಮದ ವೆಂಕಟರಮಣ ದೇವಾಲಯದ ಪಾಣಿ ಉತ್ಸವಕ್ಕೆಂದು ರಾತ್ರಿ 10 ಗಂಟೆಗೆ ತಂದೆ ಹನುಮಂತಯ್ಯ, ಮಗ ಹರೀಶ್ ಇಬ್ಬರೂ ಟ್ರ್ಯಾಕ್ಟರ್‍ನಲ್ಲಿ ತೆರಳುತ್ತಿದ್ದರು.

ಈ ವೇಳೆ ಅಲಂಕಾರಕ್ಕೆ ಹಾಕಲಾಗಿದ್ದ ವಿದ್ಯುತ್ ದೀಪ (ಸೀರಿಯಲ್ ಸೆಟ್) ಟ್ರ್ಯಾಕ್ಟರ್‍ಗೆ ತಾಗಿದಾಗ ವಿದ್ಯುತ್ ಪ್ರವಹಿಸಿ ತಂದೆ-ಮಗ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಅದೇ ಮಾರ್ಗವಾಗಿ ಸುನಿಲ್ ತೆರಳುತ್ತಿದ್ದು, ರಸ್ತೆ ಬದಿಯಲ್ಲಿ ಒದ್ದಾಡುತ್ತಿದ್ದ ತಂದೆ-ಮಗನನ್ನು ರಕ್ಷಿಸಲು ಮುಂದಾಗಿದ್ದಾನೆ. ಆಗ ಸುನಿಲ್‍ಗೂ ವಿದ್ಯುತ್ ಪ್ರವಹಿಸಿ ಮೂವರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮೃತ ದೇಹವನ್ನು ಸಾರ್ವಜನಿಕ ಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ. ವಿಷಯ ತಿಳಿದ ಬಿಜೆಪಿ ತಾಲೂಕು ಅಧ್ಯಕ್ಷ ಡಿ.ಕೃಷ್ಣಕುಮಾರ್, ಮುಖಂಡರು ಭೇಟಿ ನೀಡಿ ಸಂಬಂಧಿಕರಿಗೆ ಸಾಂತ್ವನ ಹೇಳಿದ್ದಾರೆ.  ಈ ಸಂಬಂಧ ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin