ಚನ್ನಪಟ್ಟಣ ಬಳಿ ಭೀಕರ ಅಪಘಾತ, ಬೆಂಗಳೂರಿನ ಮೂವರ ದುರ್ಮರಣ

ಈ ಸುದ್ದಿಯನ್ನು ಶೇರ್ ಮಾಡಿ

ಚನ್ನಪಟ್ಟಣ,ಮಾ.21- ರಸ್ತೆಬದಿ ನಿಂತಿದ್ದವರ ಮೇಲೆ ಕ್ಯಾಂಟರ್ ಹರಿದ ಪರಿಣಾಮ ಬೆಂಗಳೂರುನಗರದ ಮೂವರು ಮೃತಪಟ್ಟು, ಮೂರು ಮಂದಿ ತೀವ್ರ ಗಾಯಗೊಂಡಿರುವ ಘಟನೆ ಸಂಚಾರಿ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ಸಂಭವಿಸಿದೆ. ಬೆಂಗಳೂರಿನ ಜೆಪಿನಗರದ ನಿವಾಸಿ ಮದನ್(23), ಅಂಜನಾನಗರದ ವಿಜಯ್(24), ಸುಂಕದಕಟ್ಟೆಯ ನಿವಾಸಿ ಪ್ರದೀಪ(22) ಮೃತಪಟ್ಟ ದುರ್ದೈವಿಗಳು.

ಬೆಂಗಳೂರಿನಿಂದ ಮೈಸೂರಿಗೆ ಮದುವೆಗಾಗಿ ಟಿಟಿ ವಾಹನದಲ್ಲಿ ತೆರಳುತ್ತಿದ್ದವರು. ರಾತ್ರಿ 11.45ರ ಸಮಯದಲ್ಲಿ ಇಲ್ಲಿನ ಯಾರಬ್‍ನಗರ ರಸ್ತೆ ಬಳಿ ಊಟ ಮಾಡಲು ಟಿಟಿಯನ್ನು ನಿಲ್ಲಿಸಿ ಮಾತನಾಡುತ್ತಾ ನಿಂತಿದ್ದರು. ಆಗ ಕ್ಯಾಂಟರ್‍ವೊಂದು ರಸ್ತೆಬದಿ ನಿಂತಿದ್ದ ಜೀಪು, ಕಾರು, ಎರಡು ಟಿಟಿಗಳಿಗೆ ಗುದ್ದಿ ಮಾತನಾಡುತ್ತಾ ನಿಂತಿದ್ದವರ ಮೇಲೆ ನುಗ್ಗಿದ ಪರಿಣಾಮ ಒಟ್ಟು ಆರು ಮಂದಿ ಗಾಯಗೊಂಡರು.

ಒಬ್ಬರು ಸ್ಥಳದಲ್ಲೇ, ಇನ್ನಿಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಗಾಯಗೊಂಡವರನ್ನು ಚಿಕಿತ್ಸೆಗಾಗಿ ಬೆಂಗಳೂರಿನ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಕ್ಯಾಂಟರ್ ಚಾಲಕ ವಾಹನಬಿಟ್ಟು ಪರಾರಿಯಾಗಿದ್ದಾನೆ. ಈ ಬಗ್ಗೆ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

 

Facebook Comments

Sri Raghav

Admin