ಅಮೆರಿಕದ ನ್ಯೂಜೆರ್ಸಿಯಲ್ಲಿ ಒಂದೇ ಕುಟುಂಬದ ಮೂವರು ಭಾರತೀಯರ ನಿಗೂಢ ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

ನ್ಯೂಯಾರ್ಕ್, ಜೂ.24-ಅಮೆರಿಕದ ನ್ಯೂಜೆರ್ಸಿಯ ಮನೆಯೊಂದರ ಹಿಂಭಾಗದ ಕೊಳದಲ್ಲಿ 8 ವರ್ಷದ ಬಾಲಕಿ ಸೇರಿದಂತೆ ಭಾರತೀಯ ಮೂಲದ ಮೂವರು ನಿಗೂಢ ರೀತಿಯಲ್ಲಿ ಮೃತಪಟ್ಟಿದ್ದಾರೆ.

ಮೃತರನ್ನು ಭರತ್ ಪಟೇಲ್ (62), ಅವರ ಸೊಸೆ ನಿಶಾ ಪಟೇಲ್ (33) ಹಾಗೂ ಅವರ ಎಂಟು ವರ್ಷದ ಮಗಳು ಕೊಳದಲ್ಲಿ ಸಾವಿಗೀಡಾಗಿರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ನ್ಯೂಜೆರ್ಸಿಯ ಈಸ್ಟ್ ಬ್ರೂನ್ಸ್‍ವಿಕ್‍ನಲ್ಲಿ ಸೋಮವಾರ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಈ ಮನೆಯನ್ನು ಪಟೇಲ್ ಕುಟುಂಬ ಇತ್ತೀಚೆಗಷ್ಟೇ ಖರೀದಿಸಿತ್ತು. ಈ ಬಂಗಲೆಯ ಹಿಂಭಾಗದಲ್ಲಿ ಕೊಳವೊಂದು ಇದ್ದು ಹಲವು ಅಡಿಗಳಷ್ಟು ಅಳವಾಗಿದೆ. ಇದರಲ್ಲಿ ಈ ಮೂವರು ನೀರು ಪಾಲಾಗಿದ್ದಾರೆ.

ನೆಲಮಟ್ಟದಿಂದ ಎತ್ತರದಲ್ಲಿರುವ ಈ ಕೊಳದಲ್ಲಿ ಒಂದೇ ಕುಟುಂಬದ ಶವಗಳು ನಿನ್ನೆ ಪತ್ತೆಯಾದವು. ಕೊಳದಲ್ಲಿನ ನೀರಿಗೆ ವಿದ್ಯುತ್ ಪ್ರವಹಿಸಿ ಮೂವರು ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ಈ ಮೊದಲು ಆನುಮಾನ ವ್ಯಕ್ತಪಡಿಸಿದ್ದರು. ನಂತರ ಈ ಸಾಧ್ಯತೆಯನ್ನು ನಿರಾಕರಿಸಿದ್ಧಾರೆ.

ಕೊಳದಲ್ಲಿ ಪಟೇಲ್, ನಿಶಾ ಮತ್ತು ಬಾಲಕಿ ಈ ಮೂವರು ಮುಳುಗಿ ಸಾಯಲು ಕಾರಣವೇನು ಇದು ಆಕಸ್ಮಿಕವೋ ಅಥವಾ ಕೊಲೆಯೋ ಎಂಬ ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ.

Facebook Comments

Sri Raghav

Admin