ಗಡಿಯಲ್ಲಿ ಒಳನುಸುಳಲೇಟಿಸಿದ ಮೂವರು ಉಗ್ರರು ಖತಂ

ಈ ಸುದ್ದಿಯನ್ನು ಶೇರ್ ಮಾಡಿ

Firing--0141
ಶ್ರೀನಗರ, ಜೂ.6-ಪಾಕಿಸ್ತಾನದಿಂದ ಕಾಶ್ಮೀರ ಗಡಿ ಮೂಲಕ ದೇಶದೊಳಗೆ ನುಸುಳಿ ವಿಧ್ವಂಸಕ ಕೃತ್ಯಗಳನ್ನು ಎಸಗುವ ಭಯೋತ್ಪಾದಕರ ಮತ್ತೊಂದು ಯತ್ನವನ್ನು ಭದ್ರತಾ ಪಡೆಗಳು ವಿಫಲಗೊಳಿಸಿ ಮೂವರು ಉಗ್ರರನ್ನು ಹೊಡೆದುರುಳಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಮಚ್ಚಿಲ್ ವಲಯ ಗಡಿ ನಿಯಂತ್ರಣ ರೇಖೆ(ಎಲ್‍ಒಸಿ) ಬಳಿ ಇಂದು ಮುಂಜಾನೆ ಈ ಘಟನೆ ನಡೆದಿದೆ.

ಕುಪ್ವಾರ ಜಿಲ್ಲೆಯ ಮಚ್ಚಿಲ್ ಸೆಕ್ಟರ್‍ನ ಎಲ್‍ಒಸಿ ಬಳಿ ಉಗ್ರರ ಚಲನವಲನ ಕಂಡುಬಂತು. ಗಡಿ ಮೂಲಕ ಒಳನುಸುಳಲು ಉಗ್ರರು ಯತ್ನಿಸಿದಾಗ ಯೋಧರು ಎಚ್ಚರಿಕೆ ಗುಂಡುಗಳನ್ನು ಹಾರಿಸಿದರು. ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದಾಗ ಕೆಲಕಾಲ ಎನ್‍ಕೌಂಟರ್ ನಡೆಯಿತು. ಈ ಗುಂಡಿನ ಕಾಳಗದಲ್ಲಿ ಮೂವರು ಆತಂಕವಾದಿಗಳು ಹತರಾದರು. ಮೃತರಿಂದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರದೇಶದಲ್ಲಿ ಅಡಗಿರಬಹುದಾದ ಉಗ್ರರಿಗಾಗಿ ಮಾನವ ಬೇಟೆ ಮುಂದುವರಿದಿದೆ.

Facebook Comments

Sri Raghav

Admin