ಭದ್ರತಾ ಪಡೆ ಮೇಲೆ ಉಗ್ರರ ದಾಳಿ, ಮೂವರು ಯೋಧರು ಹುತಾತ್ಮ

ಈ ಸುದ್ದಿಯನ್ನು ಶೇರ್ ಮಾಡಿ

ಶ್ರೀನಗರ, ಆ.17- ಕಣಿವೆ ಪ್ರಾಂತ್ಯದಲ್ಲಿ ಭದ್ರತಾ ಪಡೆಗಳ ಉಗ್ರಗಾಮಿ ನಿಗ್ರಹ ಕಾರ್ಯಾಚರಣೆ ಭಿರುಸಾಗಿದ್ದರೂ ಭಯೋತ್ಪಾದಕರ ಅಟ್ಟಹಾಸ ಮುಂದುವರೆದಿದೆ.

ಜಮ್ಮು ಮತ್ತು ಕಾಶ್ಮೀರದ ಉತ್ತರ ಭಾಗದಲ್ಲಿರುವ ಭಾರಾಮುಲ್ಲಾದಲ್ಲಿ ಇಂದು ಬೆಳಗ್ಗೆ ಆತಂಕವಾದಿಗಳು ನಡೆಸಿದ ದಾಳಿಯಲ್ಲಿ ಸಿಆರ್‍ಪಿಎಫ್‍ನ ಇಬ್ಬರು ಯೋಧರು ಮತ್ತು ಓರ್ವ ಪೊಲೀಸ್ ಮೃತಪಟ್ಟಿದ್ದು, ಕೆಲವರು ಗಾಯಗೊಂಡಿದ್ದಾರೆ.

ಭಾರಾಮುಲ್ಲಾ ಜಿಲ್ಲೆಯ ಕ್ರಿರೀ ಪ್ರದೇಶದ ನಾಕಾ ಎಂಬಲ್ಲಿ ಉಗ್ರರು ಇಂದು ಬೆಳಗ್ಗೆ ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದರು. ಈ ಘಟನೆಯಲ್ಲಿ ಸಿಆರ್‍ಪಿಎಫ್‍ನ ಇಬ್ಬರು ಯೋಧರು ಮತ್ತು ಜಮ್ಮು-ಕಾಶ್ಮೀರ ಪೊಲೀಸ್ ವಿಭಾಗದ ವಿಶೇಷ ಪೊಲೀಸ್ (ಎಸ್‍ಪಿಒ) ಹುತಾತ್ಮರಾದರು ಎಂದು ಹಿರಿಯ ಪೊಲೀಸ್ ಅಕಾರಿಯೊಬ್ಬರು ತಿಳಿಸಿದ್ದಾರೆ.

ದಾಳಿ ನಡೆಸಿ ಪರಾರಿಯಾಗಿರುವ ಉಗ್ರಗಾಮಿಗಳಿಗಾಗಿ ಆ ಪ್ರದೇಶದ ಸುತ್ತಮುತ್ತ ತೀವ್ರ ಶೋಧ ಮುಂದುವರೆದಿದೆ.

# ಪುಲ್ವಾಮಾದಲ್ಲಿ ಮತ್ತೊಂದು ಘಟನೆ:
ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಭದ್ರತಾಪಡೆಗಳ ಕ್ಷಿಪ್ರ ಕಾರ್ಯಾಚರಣೆ ನಡುವೆಯೂ ಉಗ್ರಗಾಮಿಗಳ ಅಟ್ಟಹಾಸ ಹೆಚ್ಚಾಗುತ್ತಿದೆ.

ಪುಲ್ವಾಮಾ ಕಮ್ರಾಜಿಪೊರಾ ಪ್ರದೇಶದಲ್ಲಿ ಭದ್ರತಾಪಡೆಗಳ ಜೊತೆ ನಡೆದಗುಂಡಿನ ಕಾಳಗದಲ್ಲಿ ಭಯೋತ್ಪಾದಕನೊಬ್ಬ ಹತನಾಗಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಯೋಧರೊಬ್ಬರು ಹುತಾತ್ಮರಾಗಿದ್ದಾರೆ ಎಂದು ಹಿರಿಯ ಸೇನಾಕಾರಿಯೊಬ್ಬರು ತಿಳಿಸಿದ್ಧಾರೆ.

ಕಮ್ರಾಜಿ ಪೊರಾ ಪ್ರದೇಶದಲ್ಲಿ ಉಗ್ರರು ಅವಿತಿಟ್ಟು ಕೊಂಡಿದ್ದು ವಿಧ್ವಂಸಕಕೃತ್ಯಕ್ಕೆ ಸಜ್ಜಾಗುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆಯೋಧರು ಆ ಪ್ರದೇಶವನ್ನು ಸುತ್ತುವರಿದು ಶೋಧಖ ಕಾರ್ಯಾಚರಣೆ ನಡೆಸುತ್ತಿದ್ದರು.

ಇದೇ ಸಂದರ್ಭದಲ್ಲಿಉಗ್ರರುಯೋಧರ ಮೇಲೆ ಗುಂಡು ಹಾರಿಸಿದಾಗ ಭದ್ರತಾಪಡಗಳು ಪ್ರತಿದಾಲಿ ನಡೆಸಿದವು. ಈ ಸಂದರ್ಭದಲ್ಲಿಗುಂಡಿನ ಕಾಳಗ ನಡೆಯಿತು. ಉಗ್ರಗಾಮಿ ಹತನಾಗಿ, ಯೋಧರೊಬ್ಬರು ಬಲಿಯಾದರುಎಂದು ಹಿರಿಯ ಮಿಲಿಟರಿಅಕಾರಿ ತಿಳಿಸಿದ್ದಾರೆ.

ಹತ ಭಯೋತ್ಪಾದಕನ ಬಳಿ ಇದ್ದ ಎಕೆ-47 ರೈಫಲ್, ಸ್ಪೋಟಕ, ಪಿಸ್ತೂಲ್ ಮತ್ತು ಬುಲೆಟ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರದೇಶದಲ್ಲಿ ಅವಿತಿಟ್ಟು ಕೊಂಡಿರ ಬಹುದಾದಉಗ್ರರ ನಿಗ್ರಹ ಕಾರ್ಯಾಚರಣೆ ಮುಂದುವರಿದಿದೆ.

Facebook Comments

Sri Raghav

Admin