ಟಿಟಿಗೆ ಡಿಕ್ಕಿ ಹೊಡೆದ ಲಾರಿ, ಗೋಕರ್ಣಕ್ಕೆ ತೆರಳಿದ್ದ 3 ವಿದ್ಯಾರ್ಥಿಗಳ ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

ಚಿತ್ರದುರ್ಗ,ಏ.22- ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳಿದ್ದ ಟಿಟಿ ವಾಹನಕ್ಕೆ ಹಿಂದಿನಿಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಮೂವರು ಬಿಕಾಂ ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮೃತರನ್ನು ಬೆಂಗಳೂರು ಬಸವನಗುಡಿಯ ವಿಜಯ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಕಾರ್ತಿಕ್ ಗೌಡ(20), ಹರ್ಷ(20). ಶ್ರೀನಿಧಿ(20) ಎಂದು ಗುರುತಿಸಲಾಗಿದೆ.

ವಿಜಯ ಕಾಲೇಜಿನಲ್ಲಿ ಬಿಕಾಂ ಅಂತಿಮ ವರ್ಷದ 13 ಮಂದಿ ವಿದ್ಯಾರ್ಥಿಗಳು ಟಿಟಿ ವಾಹನದಲ್ಲಿ ಏ.19ರಂದು ಗೋಕರ್ಣ ಪ್ರವಾಸ ಕೈಗೊಂಡಿದ್ದರು.
ಪ್ರವಾಸ ಮುಗಿಸಿಕೊಂಡು ವಾಪಸ್ ಬೆಂಗಳೂರಿಗೆ ತಡರಾತ್ರಿ ಹಿಂದಿರುಗುತ್ತಿದ್ದರು.

ಚಿತ್ರದುರ್ಗ ನಗರದ ಜಿಎಂಟಿ ವೃತ್ತದ ಬಳಿ ವಿದ್ಯಾರ್ಥಿಗಳಿದ್ದ ಟಿಟಿ ವಾಹನದ ಟೈರ್ ಸ್ಫೋಟಗೊಂಡು ವಾಹನ ಕೆಟ್ಟು ನಿಂತಿತ್ತು. ವಿದ್ಯಾರ್ಥಿಗಳೆಲ್ಲ ವಾಹನದ ಬಳಿಯೇ ಕುಳಿತಿದ್ದರು ಈ ಸಂದರ್ಭದಲ್ಲಿ ರಸ್ತೆಬದಿ ಕೆಟ್ಟು ನಿಲ್ಲಿಸಲಾಗಿದ್ದ ಟಿಟಿವಾಹನ ಇರುವುದು ಗಮನಕ್ಕೆ ಬಾರದೆ ಅತಿ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಮೂವರು ವಿದ್ಯಾರ್ಥಿಗಳು ದಾರುಣವಾಗಿ ಮೃತಪಟ್ಟಿದ್ದಾರೆ.

ಸುದ್ದಿ ತಿಳಿದ ಕೋಟೆ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿ ಮೃತದೇಹಗಳನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷಗೆ ಒಳಪಡಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin