ಮತ್ತೆ ಮೂವರು ಉಗ್ರರನ್ನು ಹೊಡೆದುರುಳಿಸಿದ ಸೇನೆ, ಎಎಸ್‌ಐ ಹುತಾತ್ಮ

ಈ ಸುದ್ದಿಯನ್ನು ಶೇರ್ ಮಾಡಿ

ಶ್ರೀನಗರ : ನಗರದ ಹೊರವಲಯದಲ್ಲಿರುವ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ನಡೆದ ಎನ್‌ಕೌಂಟರ್​ನಲ್ಲಿ ಮೂವರು ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ. ಎನ್‌ಕೌಂಟರ್‌ನಲ್ಲಿ ಓರ್ವ ಎಎಸ್‌ಐ ಕೂಡ ಹುತಾತ್ಮನಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ.

ನಿನ್ನೆ ತಡರಾತ್ರಿಯಿಂದ ಭದ್ರತಾ ಪಡೆಗಳು ಉಗ್ರರ ವಿರುದ್ಧ ಎನ್‌ಕೌಂಟರ್ ಆರಂಭಿಸಿದ್ದವು. ಇಂದು(ಭಾನುವಾರ) ಬೆಳಗಿನ ಜಾವ ಮೂವರೂ ಉಗ್ರರನ್ನು ಹೊಡೆದುರುಳಿಸುವಲ್ಲಿ ಭದ್ರತಾ ಪಡೆಗಳು ಯಶಸ್ವಿಯಾಗಿವೆ.
ಈ ಮೂಲಕ ನಿನ್ನೆ(ಶನಿವಾರ) ರಾತ್ರಿಯಿಂದ ನಡೆಯುತ್ತಿದ್ದ ಎನ್‌ಕೌಂಟರ್‌ ಮುಕ್ತಾಯವಾಗಿದೆ.

ಜಮ್ಮು ಮತ್ತು ಕಾಶ್ಮೀರ ಎಎಸ್ಐ ಬಾಬು ರಾಮ್ ಹುತಾತ್ಮರಾದವರು. ಪಂಥಾ ಚೌಕ್ ಪ್ರದೇಶದಲ್ಲಿ ಶನಿವಾರ ತಡರಾತ್ರಿ ಪೊಲೀಸರು ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಜಂಟಿ ‘ನಾಕಾ’ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದರು.

ಇದಕ್ಕೆ ಪ್ರತ್ಯುತ್ತರವಾಗಿ ಮೂವರು ಉಗ್ರರನ್ನು ಯೋಧರು ಬೇಟೆಯಾಡಿದ್ದಾರೆ.ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸುವಾಗ ಉಗ್ರರು ಗುಂಡು ಹಾರಿಸಿದರು, ತಕ್ಷಣ ಎಚ್ಚೆತ್ತುಕೊಂಡು ಭಯೋತ್ಪಾದಕರ ಹೆಡೆಮುರಿ ಕಟ್ಟಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರವನ್ನು ಭಯೋತ್ಪಾದಕ ಮುಕ್ತ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡುವ ಸೆನಾ ಪಡೆಗಳ ವಾಗ್ದಾನ ಈಡೇರುವ ಹಂತಕ್ಕೆ ಬಂದು ತಲುಪಿದಂತಿದೆ.

ಕಣಿವೆಯಲ್ಲಿ ಅಡಗಿ ಕುಳಿತಿರುವ ಭಯೋತ್ಪಾದಕರನ್ನು ಅಟ್ಟಾಡಿಸಿ ಹೊಡೆಯುತ್ತಿರುವ ಭದ್ರತಾ ಪಡೆಗಳು, ಕಣಿವೆಯನ್ನು ಭಯೋತ್ಪಾದಕ ಮುಕ್ತ ಮಾಡುವ ಸಂಬಂಧ ತೆಗೆದುಕೊಂಡಿರುವ ನಿರ್ಧಾರ ಹಂತಹಂತವಾಗಿ ನೆರವೇರುತ್ತಿದೆ.

Facebook Comments

Sri Raghav

Admin