30 ಉಪಗ್ರಹಗಳೊಂದಿಗೆ ಪಿಎಸ್‍ಎಲ್‍ವಿ-ಸಿ38 ಉಡಾವಣೆಗೆ ಕ್ಷಣಗಣನೆ ಆರಂಭ

ಈ ಸುದ್ದಿಯನ್ನು ಶೇರ್ ಮಾಡಿ

PSLV-01

ಚೆನ್ನೈ, ಜೂ. 22-ಹಲವು ವಿಶ್ವವಿಕ್ರಮಗಳಿಂದ ವಿಶ್ವದ ಗಮನಸೆಳೆದಿರುವ ಭಾರತೀಯ ಬಾಹ್ಯಾಕಾಶ ಸಂಸ್ಥೆ-ಇಸ್ರೋ ಮತ್ತೊಂದು ಮಹತ್ಸಾಧನೆಗೆ ಸಜ್ಜಾಗಿದೆ. 30 ಸಹ ಉಪಗ್ರಹಗಳೊಂದಿಗೆ ಕಾರ್ಟೊಸ್ಯಾಟ್-2 ಸರಣಿ ಸ್ಯಾಟಲೈಟ್ ಉಡಾವಣೆಗೆ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಇಂದು ಬೆಳಗ್ಗೆ 5.29ರಿಂದ 28 ಗಂಟೆಗಳ ಕಾಲಗಣನೆ ಆರಂಭವಾಗಿದೆ. ನಾಳೆ ಬೆಳಗ್ಗೆ 09.20ಕ್ಕೆ ಇದು ನಭಕ್ಕೆ ಹಾರಲಿದೆ.   ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ತನ್ನ 40ನೇ ಹಾರಾಟದಲ್ಲಿ (ಪಿಎಸ್‍ಎಲ್‍ವಿ-ಸಿ38) 712 ಕೆಜಿ ತೂಕದ ಕಾರ್ಟೊಸ್ಯಾಟ್-2 ಸರಣಿ ಉಪಗ್ರಹವನ್ನು ಭೂಮಿ ವೀಕ್ಷಣೆಗಾಗಿ ಅಂತರಿಕ್ಷಕ್ಕೆ ಕೊಂಡೊಯ್ಯಲಿದೆ. ಇದರೊಂದಿಗೆ 243 ಕೆಜಿ ತೂಕದ 30 ಸಹ-ಪ್ರಯಾಣದ ಉಪಗ್ರಹಗಳನ್ನೂ 505 ಕಿ.ಮೀ. ಪೋಲಾರ್ ಸನ್ ಸಿಂಕ್ರೋನಸ್ ಆರ್ಬಿಟ್ (ಎಸ್‍ಎಸ್‍ಒ) ಕಕ್ಷೆಗೆ ಸೇರಿಸಲಿದೆ ಎಂದು ಇಸ್ರೋ ತಿಳಿಸಿದೆ.

ಈ ಎಲ್ಲ ಉಪಗ್ರಹಗಳ ಒಟ್ಟು ತೂಕ 995 ಕೆಜಿಯನ್ನು ಪಿಎಸ್‍ಎಲ್‍ವಿ-ಸಿ38 ಉಪಗ್ರಹ ಹೊತ್ತೊಯ್ಯುತ್ತಿರುವುದು ಹೊಸ ಪ್ರಯೋಗವಾಗಿದೆ. ಸಹ-ಪ್ರಯಾಣದ ಉಪಗ್ರಹಗಳು 14 ದೇಶಗಳ-ಆಸ್ಟ್ರಿಯ, ಬೆಲ್ಜಿಯಂ, ಚಿಲಿ, ಚೆಕ್ ರಿಪಬ್ಲಿಕ್, ಫಿನ್‍ಲೆಂಡ್, ಫಾನ್ಸ್, ಜರ್ಮನಿ, ಇಟಲಿ, ಜಪಾನ್, ಲಾಟ್ವಿಯಾ, ಲುಥುವೇನಿಯಾ, ಸ್ಲೋವಾಕಿಯ, ಬ್ರಿಟನ್ ಮತ್ತು ಅಮೆರಿಕದ 29 ನ್ಯಾನೋ ಸ್ಯಾಟಲೈಟ್‍ಗಳಾಗಿವೆ. ಇವುಗಳಲ್ಲಿ ಭಾರತದ ಪುಟ್ಟ ಉಪಗ್ರಹವೂ ಸೇರಿದೆ. ಸಂವಹನ, ಹವಾಮಾನ ಅಧ್ಯಯನ ಸೇರಿದಂತೆ ವಿವಿಧ ಧ್ಯೇಯೋದ್ಧೇಶಗಳನ್ನು ಈ ಉಪಗ್ರಹಗಳು ಹೊಂದಿವೆ. ಶ್ರೀಹರಿ ಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಪ್ರಥಮ ಉಡಾವಣಾ ವಾಹಕದಿಂದ ಪಿಎಸ್‍ಎಲ್‍ವಿ-ಸಿ38 ನಭಕ್ಕೆ ಚಿಮ್ಮುತ್ತಿರುವುದು ವಿಶೇಷ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin