30 ಲಕ್ಷ ರೂ ವೆಚ್ಚದಲ್ಲಿ ಭೂಮಿ ಪೂಜೆ

ಈ ಸುದ್ದಿಯನ್ನು ಶೇರ್ ಮಾಡಿ

ee-sanje

ನಂಜನಗೂಡು, ಆ.16- ಈಗಿರುವ ತಾಲೂಕು ಕೃಷಿ ಮತ್ತು ವ್ಯವಸಾಯ ಉತ್ಪನ್ನ ಮಾರುಕಟ್ಟೆ ಕಟ್ಟಡವನ್ನು ನವೀಕರಣ ಮಾಡಿ ಮೊದಲನೆ ಅಂತಸ್ತಿನಲ್ಲಿ ಉತ್ತಮವಾದ ಕಾರ್ಯಕಾರಿ ಸಮಿತಿ ಸಭಾಂಗಣ ನಿರ್ಮಿಸಿ ವ್ಯಾಪಾರ ವಹಿವಾಟು ನಡೆಸಲು ಅನುಕೂಲ ಮಾಡಿಕೊಡುವುದಾಗಿ ಅಧ್ಯಕ್ಷ ಕುರಹಟ್ಟಿ ಕೆ.ಜಿ.ಮಹೇಶ್ ಹೇಳಿದರು.,
ಸುಮಾರು 30 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣ ಮಾಡಲು ಗುತ್ತಿಗೆದಾರ ಗೋವಿಂದರಾಜು ಅರಸುರವರಿಗೆ ವಹಿಸಲಾಗಿದೆ ಎಂದು ಭೂಮಿ ಸಂದರ್ಭದಲ್ಲಿ ಹೇಳಿದರು.ಗುಣಮಟ್ಟ ಕಾಪಾಡಿಕೊಂಡು ಕಾಮಗಾರಿ ನಡೆಸುವಂತೆ ನೋಡಿಕೊಳ್ಳಲಾಗುವುದು ಎಂದರು. ಕಾರ್ಯದರ್ಶಿ ಆರ್.ಪದ್ಮಾನಂದ ಉಪಾಧ್ಯಕ್ಷ ವಿ.ಆರ್. ವಿಜಯ್‍ಕುಮಾರ್, ನಿರ್ದೇಶಕರುಗಳಾದ ವೀರಭದ್ರಪ್ಪ, ಆರ್.ಸರ್ವೇಶ್, ಸಿಂಧುವಳ್ಳಿ ಕೆಂಪಣ್ಣ, ಗುರುಪ್ರಸಾದ್, ಮಹದೇವು, ಎನ್.ಎಸ್.ಶಿವಕುಮಾರ್, ಹೆಚ್.ಎಂ.ಮಂಜುಳಾ ಮಧು, ವಿಮಲ, ಜಿ.ಕಿಟ್ಟಪ್ಪ, ಸಂಗರಾಜು ಕಚೇರಿ ಸಿಬ್ಬಂದಿಗಳಾದ ಚಿನ್ನಸ್ವಾಮಿ, ಷಣ್ಮುಗ, ಮಲ್ಲು ಮುಂತಾದವರು ಇದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin