ಕೊಟ್ಟಿಗೆಗೆ ಬೆಂಕಿ ಬಿದ್ದು 30 ಕುರಿ, 3 ಹಸುಗಳ ಜೀವಂತ ದಹನ

ಈ ಸುದ್ದಿಯನ್ನು ಶೇರ್ ಮಾಡಿ

Fire--01

ಮಾಗಡಿ, ಜು.15-ಆಕಸ್ಮಿಕವಾಗಿ ಕೊಟ್ಟಿಗೆಗೆ ಬೆಂಕಿ ಬಿದ್ದು 30 ಕುರಿಗಳು ಹಾಗೂ ಮೂರು ಹಸುಗಳು ಸುಟ್ಟು ಕರಕಲಾಗಿರುವ ಹೃದಯ ವಿದ್ರಾವಕ ಘಟನೆ ತಾಲೂಕಿನಲ್ಲಿ ನಡೆದಿದೆ. ತಾಲೂಕಿನ ಹಗಲಕೋಟೆಗೆ ಹೊಂದಿಕೊಂಡಿರುವ ಕಾಡು ಗೊಲ್ಲರಹಟ್ಟಿಯ ಕೆಂಪಣ್ಣ ಎಂಬುವರ ಮನೆಯಲ್ಲಿ ಈ ಘಟನೆ ನಡೆದಿದೆ.
ಕೆಂಪಣ್ಣ ಮನೆಗೆ ಹೊಂದಿಕೊಂಡಂತೆ ಜಾನುವಾರುಗಳನ್ನು ಕಟ್ಟಲು ತೆಂಗಿನ ಗರಿಗಳ ಕೊಟ್ಟಿಗೆಯನ್ನು ನಿರ್ಮಿಸಿಕೊಂಡಿದ್ದರು.

ನಿನ್ನೆ ಮಧ್ಯರಾತ್ರಿ ಆಕಸ್ಮಿಕವಾಗಿ ಕೊಟ್ಟಿಗೆಗೆ ಬೆಂಕಿ ಬಿದ್ದಿದೆ. ಇದರಿಂದ 30 ಕುರಿಗಳು ಹಾಗೂ 3 ಹಸುಗಳು ಸುಟ್ಟು ಕರಕಲಾಗಿವೆ. ಸ್ಥಳಕ್ಕೆ ತಹಸೀಲ್ದಾರ್ ಎಂ.ಶಿವಕುಮಾರ್ ಭೇಟಿ ನೀಡಿ ಪರಿಶೀಲಿಸಿ ಸರ್ಕಾರದಿಂದ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ. ಶಾಸಕ ಎ.ಮಂಜುನಾಥ್ ಕೂಡ ಭೇಟಿ ನೀಡಿ ಕೆಂಪಣ್ಣನನ್ನು ಸಮಾಧಾನಪಡಿಸಿ ಪರಿಹಾರ ಕೊಡಿಸುವುದಾಗಿ ಹೇಳಿ ಹೋಗಿದ್ದಾರೆ.

Facebook Comments

Sri Raghav

Admin