30,000ದ ಗಡಿ ದಾಟಿದ ಸಂವೇದಿ ಸೂಚ್ಯಂಕ, ಷೇರುಪೇಟೆಯಲ್ಲಿ ಸಾರ್ವಕಾಲಿಕ ದಾಖಲೆ ಸೃಷ್ಟಿ

ಈ ಸುದ್ದಿಯನ್ನು ಶೇರ್ ಮಾಡಿ

Sensex-001

ಮುಂಬೈ, ಏ.26-ಮುಂಬೈ ಷೇರು ಪೇಟೆ (ಬಿಎಸ್‍ಇ) ಸಂವೇದಿ ಸೂಚ್ಯಂಕವು  30,000ದ ಗಡಿ ದಾಟಿ ಮುಂದುವರಿದು ಸಾರ್ವಕಾಲಿಕ ದಾಖಲೆ ಸೃಷ್ಟಿ ಸಿದೆ. ಇದೇ ವೇಳೆ ರಾಷ್ಟ್ರೀಯ ಷೇರು ಪೇಟೆ ಸೂಚ್ಯಂಕ (ಎನ್‍ಎಸ್‍ಇ)- ನಿಫ್ಟಿ ಸಹ ಗರಿಷ್ಠ ಮಟ್ಟವಾದ 9,300 ಪಾಯಿಂಟ್ ಏರಿಕೆಯಲ್ಲೇ ಮುಂದುವರಿದಿದೆ.
ಬಿಎಸ್‍ಇ ಸೂಚ್ಯಂಕದಲ್ಲಿ ಒಂದು ಬೆಳಗ್ಗೆ 10.45ರ ಸಮಯದಲ್ಲಿ ಮೂರು ವಾರಗಳಲ್ಲೇ ಗರಿಷ್ಠ ಮಟ್ಟವಾದ 30.118.68 ತಲುಪಿತು. ಅಂದರೆ ಹಿಂದಿಗಿಂತಲೂ 155.28 ಪಾಯಿಂಟ್ ಅಥವಾ ಶೇ.0.52ರಷ್ಟು ಏರಿಕೆಯಾಗಿದೆ. ವ್ಯಾಪಕ ಖರೀದಿ ವಹಿವಾಟಿನಿಂದಾಗಿ ಈ ದಾಖಲೆ ಸೃಷ್ಟಿಯಾಗಿದೆ.ಈ ಹಿಂದೆ ಏಪ್ರಿಲ್ 5ರಂದು ಸೂಚ್ಯಂಕ 9,265 ಅಂಶಗಳಿಗೆ ತಲುಪಿತ್ತು, ಮಧ್ಯಂತರ ವಹಿವಾಟಿನಲ್ಲಿ 9,274 ಪಾಯಿಂಟ್‍ಗಳ ದಾಖಲೆ ಮಟ್ಟವನ್ನೂ ಮುಟ್ಟಿತ್ತು. ನಿನ್ನೆ ಬಿಎಸ್‍ಇ 287 ಪಾಯಿಂಟ್‍ಗಳಿಗೆ ಏರಿಕೆಯಾಗಿ ಮೂರು ವಾರಗಳ ಗರಿಷ್ಠ ಮಟ್ಟವಾದ 29,943 ಅಂಶಗಳಿಗೆ ಏರಿಕೆಯಾಗಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin