ರಾಜ್ಯದಲ್ಲಿ ಇಂದು 308 ಜನರಿಗೆ ಕೊರೊನಾ ಪಾಸಿಟಿವ್, ಬೆಂಗಳೂರಲ್ಲಿ ಮೂವರ ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ರಾಜ್ಯದಲ್ಲಿ ಇಂದು ಹೊಸದಾಗಿ 308 ಜನರಿಗೆ ಕೊರೊನಾ ಸೋಂಕು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 5760ಕ್ಕೆ ಏರಿಕೆಯಾಗಿದೆ.ಇದೇ ವೇಳೆ ಕೊರೊನಾ ಸೋಂಕಿನಿಂದ ಇಂದು ಮೂವರು ಸಾವಿಗೀಡಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 64ಕ್ಕೆ ಏರಿಕೆಯಾಗಿದೆ.

4851ನೇ ಸೋಂಕಿತ 67 ವರ್ಷದ ವೃದ್ಧ, 5335ನೇ ಸೋಂಕಿತೆ 48 ವರ್ಷದ ಮಹಿಳೆ ಹಾಗೂ 5468ನೇ ಸೋಂಕಿತೆ 65 ವರ್ಷದ ವೃದ್ಧೆ ಕೊರೊನಾಗೆ ಬಲಿಯಾಗಿದ್ದಾರೆ. ಇಂದು ಮೃತಪಟ್ಟ ಮೂವರೂ ಬೆಂಗಳೂರು ನಿವಾಸಿಗಳಾಗಿದ್ದಾರೆ. ಇವರು ತೀವ್ರ ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು.

ಮತ್ತೊಂದು ಸಂತೋಷದ ವಿಷಯವೆಂದರೆ, ಇದೇ ಮೊದಲ ಬಾರಿಗೆ ಒಂದು ದಿನದಲ್ಲಿ ಕೊರೋನಾ ಸೋಂಕಿತರ ಸಂಖ್ಯೆಗಿಂತ ಗುಣಮುಖರಾದವರ ಸಂಖ್ಯೆ ಹೆಚ್ಚಾಗಿ ದಾಖಲಾಗಿದೆ.ಸೊಮವಾರದ ಅಂಕಿಸಂಖ್ಯೆ ಪ್ರಕಾರ ಒಂದು ದಿನದಲ್ಲಿ 387 ಮಂದಿ ಸೊಂಕಿನಿಂದ ಗುಣ ಹೊಂದಿದರೇ 308 ಮಂದಿಗೆ ಹೊಸದಾಗಿ ಸೊಂಕು ಕಾಣಿಸಿಕೊಂಡಿದೆ.

ನೆಮ್ಮದಿಯ ವಿಚಾರವೆಂದರೇ ರಾಜ್ಯದಲ್ಲಿಯೇ ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ಉಡುಪಿಯಲ್ಲಿ ಒಂದೇ ದಿನ 215 ಮಂದಿ ಆಸ್ಪತ್ರೆಗಳಿಂದ ಬಿಡುಗಡೆ ಹೊಂದಿದ್ದಾರೆ.ದಿನದಿಂದ ದಿನಕ್ಕೆ ರಾಜ್ಯದಲ್ಲಿ ಗುಣ ಹೊಂದುವವರ ಸಂಖ್ಯೆ ಏರುತ್ತಿದ್ದು ಇದು ಆಶಾದಾಯಕ ಬೆಳವಣಿಗೆ ಎಂದು ಆರೋಗ್ಯ ಇಲಾಖೆ ಹೇಳಿದೆ.

ಇಂದು ಕಲಬುರಗಿ 99, ಯಾದಗಿರಿ 66, ಬೀದರ್ 48, ಉಡುಪಿ 45, ಬೆಂಗಳೂರು ನಗರ 18, ಬಳ್ಳಾರಿ 8, ಗದಗ 6, ಶಿವಮೊಗ್ಗ 4, ಧಾರವಾಡ 4, ಹಾಸನ 3, ದಕ್ಷಿಣ ಕನ್ನಡ 3, ಬಾಗಲಕೋಟೆ 2, ಕೊಪ್ಪಳ, ರಾಮನಗರ ಜಿಲ್ಲೆಯಲ್ಲಿ ತಲಾ ಒಬ್ಬರಿಗೆ ಕೊರೊನಾ ಪಾಸಿಟಿವ್​ ಬಂದಿದೆ.

ರಾಯಚೂರು, ಮಂಡ್ಯ, ಬೆಳಗಾವಿ, ದಾವಣಗೆರೆ, ವಿಜಯಪುರ, ಚಿಕ್ಕಾಬಳ್ಳಾಪುರ, ಮೈಸೂರು, ಉತ್ತರ ಕನ್ನಡ, ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ, ಹಾವೇರಿ, ಚಿಕ್ಕಮಗಳೂರು, ಕೊಡಗಿನಲ್ಲಿ ಯಾವುದೇ ಪಾಸಿಟಿವ್ ಪ್ರಕರಣ ಬಂದಿಲ್ಲ. ಒಟ್ಟು 308 ಪ್ರಕರಣಗಳ ಪೈಕಿ 277 ಅಂತರಾಜ್ಯ ಪ್ರಯಾಣಿಕರಾಗಿದ್ದು ದಕ್ಷಿಣ ಕನ್ನಡದಲ್ಲಿ ದುಬೈನಿಂದ ಮರಳಿದ ಯುವಕನಿಗೆ ಸೋಂಕು ಬಂದಿದೆ.

# ಮೂರು ಮಂದಿ ಸಾವು:
ಬೆಂಗಳೂರಿನಲ್ಲಿ ಮೂರು ಮಂದಿ ಮೃತಪಟ್ಟಿದ್ದು ಒಟ್ಟು ಸಾವನ್ನಪ್ಪಿದವರ ಸಂಖ್ಯೆ 64ಕ್ಕೆ ಏರಿಕೆಯಾಗಿದೆ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ 67 ವರ್ಷದ ಪುರುಷ ಸೋಮವಾರ ಮೃತಪಟ್ಟಿದ್ದಾರೆ.

ಉಸಿರಾಟದ ತೊಂದರೆ, ಜ್ವರ, ನಿಶಕ್ತಿಯಿಂದ ಬಳಲುತ್ತಿದ್ದ ಬೆಂಗಳೂರು ನಗರದ 48 ವರ್ಷದ ಮಹಿಳೆ ಜೂನ್ 4 ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಜೂನ್ 5 ರಂದು ಮೃತಪಟ್ಟಿದ್ದಾರೆ.

ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ 65 ವರ್ಷದ ಬೆಂಗಳೂರಿನ ಮಹಿಳೆ ಜೂನ್ 4 ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಜೂನ್ 5 ರಂದು ಇನ್ನೊಂದು ಆಸ್ಪತ್ರೆಗೆ ಶಿಫ್ಟ್ ಆಗಿದ್ದು ಅಲ್ಲೇ ನಿಧನರಾಗಿದ್ದಾರೆ.

ರಾಜ್ಯದಲ್ಲಿ ಒಟ್ಟು 14 ಮಂದಿ ಐಸಿಯುನಲ್ಲಿ ಇದ್ದಾರೆ. ಬೆಂಗಳೂರಿನಲ್ಲಿ 7, ಕಲಬುರಗಿ 4, ಧಾರವಾಡ, ತುಮಕೂರು, ಮಂಡ್ಯದಲ್ಲಿ ತಲಾ ಒಬ್ಬಬ್ಬ ರೋಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಉಳಿದಂತೆ ಉಡುಪಿಯಲ್ಲಿ 215 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಕಲಬುರಗಿಯಲ್ಲಿ 47, ರಾಯಚೂರಿನಲ್ಲಿ 29, ವಿಜಯಪುರದಲ್ಲಿ 29, ಯಾದಗಿರಿ 23, ಹಾಸನ 16, ಮಂಡ್ಯ 11, ಧಾರವಾಡ 6, ತುಮಕೂರು 6, ಹಾವೇರಿ 5 ಮಂದಿ ಬಿಡುಗಡೆಯಾಗಿದ್ದಾರೆ.

ರಾಜ್ಯದಲ್ಲಿ 5760 ಸೋಂಕಿತರ ಪೈಕಿ ಇದುವರೆಗೆ 64 ಜನರು ಮೃತಪಟ್ಟಿದ್ದಾರೆ. 5,760 ಸೋಂಕಿತರ ಪೈಕಿ 2519 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ರಾಜ್ಯದಲ್ಲಿ 3175 ಸೋಂಕಿತರಿಗೆ ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

Facebook Comments

Sri Raghav

Admin