ರಾಜ್ಯದಲ್ಲಿ ಇಂದು ಕೊರೋನಾ ಬ್ಲಾಸ್ಟ್ : ಬರೋಬ್ಬರಿ 317 ಮಂದಿಗೆ ಪಾಸಿಟಿವ್, 7 ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ಇಂದು ರಾಜ್ಯದಲ್ಲಿ 317 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಆ ಮೂಲಕ ರಾಜ್ಯದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 7530ಕ್ಕೆ ಏರಿಕೆಯಾಗಿದೆ. ಅಂತೆಯೇ ಇಂದೂ ಕೂಡ ರಾಜ್ಯದಲ್ಲಿ 7 ಸೋಂಕಿತರು ಮೃತಪಟ್ಟಿದ್ದು, ರಾಜ್ಯದಲ್ಲಿ ಕೊರೋನಾ ವೈರಸ್ ಗೆ ಬಲಿಯಾದವರ ಸಂಖ್ಯೆ 94ಕ್ಕೆ ಏರಿಕೆಯಾಗಿದೆ.

ಪತ್ತೆಯಾದ 317 ಹೊಸ ಪಾಸಿಟಿವ್ ಪ್ರಕರಣ ಗಳ ಪೈಕಿ ಬೆಂಗಳೂರಿನಲ್ಲಿ ಇಂದು 47 ಮಂದಿಗೆ ಸೋಂಕು ತಗುಲಿದ್ದು, ಕಲಾಸಿ ಪಾಳ್ಯದಲ್ಲಿ ಕರ್ತವ್ಯ ನಿರ್ವಹಿಸಿದ್ದ ಮಹಿಳಾ ಪೊಲೀಸ್ ಕಾನ್‍ಸ್ಟೇಬಲ್ ಗೆ ಸೋಂಕು ತಗುಲಿದೆ.

ಈ ಬಗ್ಗೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದ್ದು, ದಕ್ಷಿಣ ಕನ್ನಡ- 79,ಕಲಬುರಗಿ- 63,ಬಳ್ಳಾರಿ- 53, ಬೆಂಗಳೂರು ನಗರ- 47,ಧಾರವಾಡ- 08,ಉಡುಪಿ- 07,ಶಿವಮೊಗ್ಗ- 07,,ಯಾದಗಿರಿ- 06,ರಾಯಚೂರು- 06,ಉತ್ತರ ಕನ್ನಡ- 06,ಹಾಸನ- 05,ವಿಜಯಪುರ- 04,ಮೈಸೂರು- 04,ಗದಗ- 04,ರಾಮನಗರ- 04, ಚಿಕ್ಕಮಗಳೂರು- 04,ಕೊ ಪ್ಪಳ- 04,ಬೆಳಗಾವಿ- 03,
ಬೀದರ್- 02,ಹಾಗೂ ತುಮಕೂರು- 01 ಪ್ರಕರಣಗಳು ಪತ್ತೆಯಾಗಿವೆ.

317 ಪ್ರಕರಣಗಳಲ್ಲಿ 108 ಅಂತಾರಾಜ್ಯ ಹಾಗೂ 78 ಅಂತಾರಾಷ್ಟ್ರೀಯ ಪ್ರಯಾಣಿಕರು ಇದ್ದಾರೆ. ಉಡುಪಿ- 81,ಯಾದಗಿರಿ- 50,ರಾಯಚೂರು- 46,ಬೆಂಗಳೂರು ನಗರ- 32,ಮಂಡ್ಯ- 21,ವಿಜಯಪುರ- 18,ಕಲಬುರಗಿ- 15,ದಕ್ಷಿಣ ಕನ್ನಡ- 11,ಮೈಸೂರು- 10,ದಾವಣಗೆರೆ- 10,ಬೆಳಗಾವಿ- 09,ಚಿಕ್ಕಬಳ್ಳಾಪುರ- 08,ತುಮಕೂರು- 03,ಬಾಗಲಕೋಟೆ- 02, ಹಾಸನ- 02,ಗದಗ- 02,ಬೆಂಗಳೂರು ಗ್ರಾಮಾಂತರ- 01ಹಾಗೂ ಕೋಲಾರ- 01 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಒಟ್ಟು322ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಆ ಮೂಲಕ ರಾಜ್ಯದಲ್ಲಿ ಕೊರೋನಾ ವೈರಸ್ ನಿಂದ ಗುಣಮುಖರಾದವರ ಸಂಖ್ಯೆ 4456ಕ್ಕೆ ಏರಿಕೆಯಾಗಿದೆ. ಉಳಿದಂತೆ ರಾಜ್ಯದಲ್ಲಿ ಪ್ರಸ್ತುತ 2976 ಸಕ್ರಿಯ ಪ್ರಕರಣಗಳಿದ್ದು, ಈ ಪೈಕಿ ಗಂಭೀರ ಸ್ಥಿತಿಯಲ್ಲಿರುವ 72 ಮಂದಿ ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

78 ಮಂದಿ ಸೋಂಕಿತರು ಅಂತಾರಾಷ್ಚ್ರೀಯ ಪ್ರಯಾಣಿಕರಾಗಿದ್ದು, 108 ಮಂದಿ ಸೋಂಕಿತರು ಅಂತರ್ ರಾಜ್ಯ ಪ್ರಯಾಣ ಹಿನ್ನಲೆ ಹೊಂದಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

Facebook Comments

Sri Raghav

Admin