32 ಕಿ.ಮೀ.ವರೆಗೂ ವಿಸ್ತರಿಸಿದ ತೈಲ ಸೋರಿಕೆ, ಲಕ್ಷಾಂತರ ಜಲಚರಗಳ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Chennai--01

ಚೆನ್ನೈ, ಫೆ.3-ತಮಿಳುನಾಡು ಸಮುದ್ರದಲ್ಲಿ ಇತ್ತೀಚೆಗೆ ಎರಡು ಹಡಗುಗಳ ಡಿಕ್ಕಿಯಿಂದಾಗಿ ಸೋರಿಕೆಯಾಗಿರುವ ತೈಲ, ಚೆನ್ನೈ ಸೇರಿದಂತೆ ಕರಾವಳಿಯುದ್ದಕ್ಕೂ ಭಾರೀ ಸಮಸ್ಯೆ ಸೃಷ್ಟಿಸಿದೆ. ತೈಲವು ದಕ್ಷಿಣ ದಿಕ್ಕಿನಲ್ಲಿ 32 ಕಿ.ಮೀ.ತನಕ ಸೋರಿಕೆಯಾಗಿದ್ದು, ಪೂರ್ವ ಕರಾವಳಿ ರಸ್ತೆಯ ಪಳವಕ್ಕಂ ಕಡಲ ತೀರವನ್ನು ತಲುಪಿ ಆತಂಕ ಮೂಡಿಸಿದೆ.  ಸಾಗರದಲ್ಲಿ ಸೋರಿಕೆಯಾಗಿರುವ ತೈಲವನ್ನು ಸಂಪೂರ್ಣ ತೆರವುಗೊಳಿಸಲು ಕನಿಷ್ಠ ನಾಲ್ಕು ವಾರಗಳು ಬೇಕಾಗುತ್ತದೆ.  ತೈಲ ಸೋರಿಕೆಯಿಂದಾಗಿ ಒಂದೆಡೆ ಮೀನುಗಾರಿಕೆಗೆ ಕಷ್ಟವಾಗಿದ್ದರೆ, ಮತ್ತೊಂದೆಡೆ ಕಡಲ ಕಿನಾರೆಯ ಬಣ್ಣವೇ ಬದಲಾಗಿದೆ.

ಇದೇ ವೇಳೆ ತೈಲ ಸೋರಿಕೆಯಾಗಿ ಕಲುಷಿತಗೊಂಡ ವ್ಯಾಪ್ತಿಯಲ್ಲಿ ಹಲವು ಜಲಚರಗಳು ಸಾವಿಗೀಡಾಗಿವೆ ಎಂದು ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ಧಾರೆ.  ಸಮುದ್ರದಲ್ಲಿ ಸೋರಿಕೆಯಾಗಿರುವ ಭಾರೀ ಪ್ರಮಾಣದ ತೈಲವನ್ನು ಸೋಸಿ ಹೊರ ತೆಗೆಯುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin