ಭಾರತದಲ್ಲಿ ಕೊರೋನಾರ್ಭಟ : 24 ಗಂಟೆಯಲ್ಲಿ 3.37 ಲಕ್ಷ ಕೇಸ್, 488 ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಜ.22- ಭಾರತದಲ್ಲಿ ಹೊಸದಾಗಿ 3,37,704 ಕೊರೊನಾ ವೈರಸ್ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಒಟ್ಟಾರೆ ಕೋವಿಡ್-19 ಸೋಂಕಿನ ಪ್ರಕರಣಗಳ ಸಂಖ್ಯೆ 3,89,03,731ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಇಂದು ಬೆಳಗ್ಗೆ 8 ಗಂಟೆಗೆ ತಿಳಿಸಿದೆ.

ಈ ಪೈಕಿ 1050 ಓಮಿಕ್ರಾನ್ ಪ್ರಕರಣಗಳಿವೆ ಎಂದು ಅದು ಹೇಳಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 21,13,365ಕ್ಕೆ ಏರಿದ್ದು , ಇದು 237 ದಿನಗಳಲ್ಲೇ ಅಧಿಕ ಪ್ರಮಾಣವಾಗಿದೆ. ಕಳೆದ 24 ಗಂಟೆಗಳಲ್ಲಿ 488 ಮಂದಿ ಕೊರೊನಾಕ್ಕೆ ಬಲಿಯಾಗಿದ್ದು, ಒಟ್ಟಾರೆ ಕೋವಿಡ್ ಮರಣಗಳ ಸಂಖ್ಯೆ 4,88,884ಕ್ಕೆ ತಲುಪಿದೆ.

ನಿನ್ನೆಯಿಂದೀಚೆಗೆ ಓಮಿಕ್ರಾನ್ ಪ್ರಕರಣಗಳಲ್ಲಿ ಶೇ.3.69ರಷ್ಟು ಏರಿಕೆಯಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ. ಸಕ್ರಿಯ ಪ್ರಕರಣಗಳು ಒಟ್ಟಾರೆ ಪ್ರಕರಣಗಳ ಶೇ|5.43ರಷ್ಟಿವೆ. ರಾಷ್ಟ್ರೀಯ ಕೋವಿಡ್ ಚೇತರಿಕೆ ಪ್ರಮಾಣ ಶೇ.93.31ಕ್ಕೆ ಇಳಿದಿದೆ. ದೈನಿಕ ಪಾಸಿಟಿವಿಟಿ ದರ 17.22 ಪ್ರತಿಶತರಷ್ಟು ದಾಖಲಾಗಿದೆ. ವಾರದ ಪಾಸಿಟಿವಿಟಿ ದರ ಶೇ.16.65ರಷ್ಟಿದೆ.

ಇದುವರೆಗೆ 71.34 ಕೋಟಿ ಪರೀಕ್ಷೆಗಳನ್ನು ನಡೆಸಲಾಗಿದೆ. ಕಳೆದ 24 ಗಂಟೆಗಳಲ್ಲಿ 19,60,954 ಪರೀಕ್ಷೆಗಳನ್ನು ಮಾಡಲಾಗಿದೆ. ಇಲ್ಲಿಯತನಕ 161.16 ಕೋಟಿ ಡೋಸ್ ಕೋವಿಡ್ ಲಸಿಕೆಗಳನ್ನು ಹಾಕಲಾಗಿದೆ ಎಂದು ಆರೋಗ್ಯ ಸಚಿವಾಲಯದ ಅಂಕಿ-ಅಂಶಗಳು ತಿಳಿಸಿವೆ.

Facebook Comments

Sri Raghav

Admin