ರಾಜ್ಯದಲ್ಲಿ ಇಂದು 34 ಮಂದಿಗೆ ಕೊರೋನಾ ಪಾಸಿಟಿವ್, ಸೋಂಕಿತರ ಸಂಖ್ಯೆ 595ಕ್ಕೆ ಏರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ರಾಜ್ಯದಲ್ಲಿ ಬುಧವಾರ ಕೊರೊನಾ ಸೋಂಕು ಮತ್ತೆ ಇಬ್ಬರನ್ನು ಬಲಿ ಪಡೆದಿದ್ದು, ಹೊಸದಾಗಿ 34 ಪ್ರಕರಣಗಳು ಪತ್ತೆಯಾಗಿವೆ.

ಇದರಿಂದಾಗಿ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 595ಕ್ಕೆ ಏರಿಕೆಯಾಗಿದೆ. ಕಳೆದ ಮೂರು ದಿನಗಳಿಗೆ ಹೋಲಿಸಿದರೆ ಬುಧವಾರ ಸೋಂಕಿನ ಪ್ರಕರಣಗಳ ಸಂಖ್ಯೆ ಕೊಂಚ ಇಳಿಮುಖವಾಗಿದೆ.

ಬೀದರ್ 12, ಕಲಬುರಗಿಯಲ್ಲಿ 8, ಹಾಸನ 4, ಬೆಂಗಳೂರು ನಗರ 2, ಉತ್ತರ ಕನ್ನಡ 2, ದಾವಣಗೆರೆ 2, ವಿಜಯಪುರ 2, ದಕ್ಷಿಣ ಕನ್ನಡ 1, ಬಳ್ಳಾರಿಯಲ್ಲಿ 1 ಪ್ರಕರಣಗಳು ದೃಢಪಟ್ಟಿವೆ.

ಕಲಬುರಗಿಯಲ್ಲಿ ಮತ್ತು ದಕ್ಷಿಣ ಕನ್ನಡದಲ್ಲಿ ತಲಾ ಒಬ್ಬರು ಕೊರೋನಾಗೆ ಬಲಿಯಾಗಿದ್ದಾರೆ. ಈ ವರೆಗೂ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 959ಕ್ಕೆ ತಲುಪಿದ್ದು, 33 ಜನರು ಮೃತಪಟ್ಟಿದ್ದಾರೆ.

ಇಲ್ಲಿಯವರೆಗೆ 451 ಮಂದಿ ಗುಣಮುಖರಾಗಿದ್ದಾರೆ. ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

Facebook Comments

Sri Raghav

Admin