ರಾಜ್ಯದಲ್ಲಿಂದು ಕಿಲ್ಲರ್ ಕೊರೋನಾಗೆ 349 ಮಂದಿ ಬಲಿ, 41664 ಹೊಸ ಕೇಸ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ರಾಜ್ಯದಲ್ಲಿ ಕೊರೋನಾ 2ನೇ ಅಲೆ ಆರ್ಭಟ ಮುಂದುವರೆದಿದ್ದು ಮಹಾಮಾರಿಗೆ ಇಂದು ರಾಜ್ಯದಲ್ಲಿ 349 ಜೀವಗಳು ಬಲಿಯಾಗಿವೆ. ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 41664 ಹೊಸ ಕೇಸ್ ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2171931 ಕ್ಕೇರಿಕೆಯಾದರೆ, ಒಟ್ಟು ಸಾವಿನ ಸಂಖ್ಯೆ 21434 ಕ್ಕೆ ಏರಿಕೆಯಾಗಿದೆ.

ಇಂದು ಬೆಂಗಳೂರಿನಲ್ಲಿ ಕೊರೋನಾ ಸ್ಪೋಟ ಮುಂದುವರೆದಿದ್ದು 13402 ಜನರಿಗೆ ಕೊರೋನಾ ತಗುಲಿದೆ, ನಗರದಲ್ಲಿ ಇಂದು 94 ಮಂದಿ ಮಹಾಮಾರಿಯಿಂದ ಪ್ರಾಣ ಕಳೆದುಕೊಂಡಿದ್ದಾರೆ. ಮಹಾನಗಿರಿಯೊಂದರಲ್ಲೇ ಈವರೆಗೆ 1042714 ಮಂದಿಗೆ ಕೊರೋನಾ ತಗುಲಿದೆ. ಬೆಂಗಳೂರಲ್ಲಿ ಈವರೆಗೆ ಒಟ್ಟು 9340 ಮಂದಿ ಕೊರೋನಾದಿಂದ ಮೃತಪಟ್ಟಿದ್ದಾರೆ.

ಇಂದು ರಾಜ್ಯಾದ್ಯಂತ 34425 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದು, ಈವರೆಗೆ ಒಟ್ಟು 1544982 ಮಂದಿ ಕೊರೋನಾದಿಂದ ಗುಣಮುಖರಾಗಿದ್ದಾರೆ.

ಜಿಲ್ಲಾವಾರು ಸೋಂಕಿತ ಸಂಖ್ಯೆ ಕೆಳಕಂಡಂತಿದೆ :

Facebook Comments

Sri Raghav

Admin