ಹಿಮಪಾತ, ಭೂ ಕುಸಿತ : 35 ಮಂದಿ ಮರಣ

ಈ ಸುದ್ದಿಯನ್ನು ಶೇರ್ ಮಾಡಿ

ಇಸ್ಲಾಮಾಬಾದ್,ಜ.14-ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಸೇರಿದಂತೆ ಕೆಲವೆಡೆ ಭಾರೀ ಮಳೆ, ಹಿಮಪಾತ ಮತ್ತು ಭೂಕುಸಿತಗಳಿಂದ 35ಕ್ಕೂ ಹೆಚ್ಚು ಮಂದಿ ಮೃತಪಟ್ಟು ಅನೇಕರು ಗಾಯಗೊಂಡಿದ್ದಾರೆ. ಈ ದುರ್ಘಟನೆಗಳಲ್ಲಿ ಇನ್ನು ಅನೇಕರು ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

ಪಿಒಕೆ, ಬಲೂಚಿಸ್ಥಾನ ಮತ್ತು ಪಾಕಿಸ್ತಾನ ಪಂಜಾಬ್ ಪ್ರದೇಶದಲ್ಲಿ ಧಾರಾಕಾರ ಮಳೆ, ಭಾರೀ ಹಿಮವರ್ಷಧಾರೆ ನಂತರ ಹಿಮಪಾತ ಮತ್ತು ಬಂಡೆಗಳ ಕುಸಿತದಿಂದ ಉಂಟಾದ ದುರಂತಗಳಲ್ಲಿ ಈವರೆಗೆ 35 ಮಂದಿ ಮೃತಪಟ್ಟಿದ್ದಾರೆ ಎಂದು ರಕ್ಷಣಾ ಕಾರ್ಯಾಚರಣೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಪ್ರದೇಶಗಳಲ್ಲಿ ಭೂ ಕುಸಿತದಿಂದ ಕೆಲವು ಮನೆಗಳು ಹಿಮಮಿಶ್ರಿತ ಮಣ್ಣಿನ ಅವಶೇಷಗಳಡಿ ಸಿಲುಕಿದ್ದು ಕೆಲವರು ನಾಪತ್ತೆಯಾಗಿದ್ದಾರೆ. ಅತ್ಯಂತ ಪ್ರತಿಕೂಲ ಹವಾಮಾನದಿಂದ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗೆ ಅಡ್ಡಿಯಾಗಿದೆ.

Facebook Comments