36 ರಫಾಲ್ ಯುದ್ಧ ವಿಮಾನ ಖರೀದಿ : ಭಾರತ, ಫ್ರಾನ್ಸ್ ಒಪ್ಪಂದ

ಈ ಸುದ್ದಿಯನ್ನು ಶೇರ್ ಮಾಡಿ

India-France

ನವದೆಹಲಿ, ಸೆ.23-ಪ್ರಬಲ ವೈರಿ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡುವ ಅತ್ಯಾಧುನಿಕ ಕ್ಷಿಪಣಿಗಳು ಮತ್ತು ಶಸ್ತ್ರಾಸ್ತ್ರ ವ್ಯವಸ್ಥೆಯೊಂದಿಗೆ ಸಜ್ಜಾದ 59,000 ಕೋಟಿ ರೂ. ವೆಚ್ಚದ 36 ರಫಾಲ್ ಯುದ್ಧ ವಿಮಾನಗಳ ಖರೀದಿ ವ್ಯವಹಾರಕ್ಕೆ ಭಾರತ ಮತ್ತು ಫ್ರಾನ್ಸ್ ಇಂದು ಸಹಿ ಹಾಕಿವೆ.  ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಮತ್ತು ಭಾರತಕ್ಕೆ ಭೇಟಿ ನೀಡಿರುವ ಫ್ರಾನ್ಸ್ ರಕ್ಷಣಾ ಸಚಿವ ಜೀನ್ ಯೆವೆಸ್ ಲೆ ಡ್ರಿಯಾನ್ ಅವು ಈ ಮಹತ್ವದ ಒಪ್ಪಂದಕ್ಕೆ ದೆಹಲಿಯಲ್ಲಿ ಸಹಿ ಹಾಕಿದರು.  ಭಾರತದ ಪರಮ ಶತ್ರು ಪಾಕಿಸ್ತಾನದ ವಾಯುಪಡೆ ಸಾಮಥ್ರ್ಯವನ್ನು ಧೂಳಿಪಟ ಮಾಡುವ ರಫಾಲ್ ಫೈಟರ್ ಜೆಟ್‍ಗಳು ಅತ್ಯಾಧುನಿಕ ಕ್ಷಿಪಣಿಗಳು ಮತ್ತು ಶಸ್ತ್ರಾಸ್ತ್ರ ವ್ಯವಸ್ಥೆಯನ್ನು ಒಳಗೊಂಡಿವೆ. ಅಲ್ಲದೇ ಭಾರತದ ಬಹು ನಿರ್ದಿಷ್ಟ ಮಾರ್ಪಾಡುಗಳೊಂದಿಗೆ ಭಾರತೀಯ ವಾಯು ಪಡೆ ಸಾಮಥ್ರ್ಯವನ್ನು ಹೆಚ್ಚಿಸುತ್ತದೆ. ಇದು ಭಾರತದ ಬತ್ತಳಿಕೆಗೆ ಸೇರುವ ಅತ್ಯಂತ ಪ್ರಬಲ ಅಸ್ತ್ರವಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin