36 ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್‍ಗೆ 2ನೆ ಸ್ಥಾನ

ಈ ಸುದ್ದಿಯನ್ನು ಶೇರ್ ಮಾಡಿ

JDS--01
ಬೆಂಗಳೂರು, ಮೇ 17- ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ 36ವಿಧಾನಸಭಾ ಕ್ಷೇತ್ರಗಳಲ್ಲಿ ಎಡರನೇ ಸ್ಥಾನ ಪಡೆದಿದೆ. ಐದು ಸಾವಿರದಿಂದ 10 ಸಾವಿರದೊಳಗಿನ ಅಂತರದಲ್ಲಿ 9 ಕ್ಷೇತ್ರಗಳ ಅಭ್ಯರ್ಥಿಗಳು ಸೋಲನ್ನನು ಭವಿಸಿದ್ದಾರೆ. 10ರಿಂದ 15 ಸಾವಿರ ದೊಳಗಿನ ಅಂತರದಲ್ಲಿ 8 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಪರಾಭವಗೊಂಡಿದೆ.

ತುಮಕೂರು ಜಿಲ್ಲೆಯ ಪಾವಗಡ ಕ್ಷೇತ್ರದ ಮಾಜಿ ಶಾಸಕ ಮತ ಗಳಿಸಿ ಅತ್ಯಲ್ಪ ಮತಗಳ ಅಂತರದಿಂದ ಸೋತಿದ್ದಾರೆ. ಲಿಂಗಸಗೂರಿನ ಜೆಡಿಎಸ್ ಅಭ್ಯರ್ಥಿ ಬಂಡಿಸಿದ್ದು 4966 ಮತಗಳ ಅಂತರದಿಂದ ಸೋತರೆ, ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ ಮಾಜಿ ಶಾಸಕಿ ಶಾರದಾ ಪೂರ್ಯ ನಾಯಕ್ 3777 ಮತಗಳ ಅಂತರದಿಂದ, ತುರುವೆಕೆರೆ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ 2049 ಮತಗಳ ಅಂತರದಿಂದ ಸೋಲು ಕಂಡಿದ್ದಾರೆ.

ಐದರಿಂದ 10 ಸಾವಿರ ದೊಳಗಿನ ಅಂತರದಲ್ಲಿ ಇಂಡಿ ಕ್ಷೇತ್ರದ ಅಭ್ಯರ್ಥಿ ಪಾಟೀಲ್ 9938 ಮತಗಳು, ದೊಡ್ಡಬಳ್ಳಾಪುರದ ಬಿ.ಮುನೇಗೌಡ 9945 ಮತಗಳ ಅಂತರ. ತುಮಕೂರು ನಗರ ಎನ್.ಗೋವಿಂದು 5293 ಮತಗಳ ಅಂತರದಿಂದ, ಶಿಡ್ಲಘಟ್ಟದ ಬಿ.ಎನ್.ರವಿಕುಮಾರ್ 9709, ಮುಳಬಾಗಿಲಿನ ಜೆಡಿಎಸ್ ಅಭ್ಯರ್ಥಿ ಸಮೃದ್ಧಿ ಮಂಜುನಾಥ್ 6715 ಮತಗಳ ಅಂತರದಲ್ಲಿ ಸೋಲುಂಡಿದ್ದಾರೆ.

10ರಿಂದ 15 ಸಾವಿರದೊಳಗಿನ ಅಂತರದಲ್ಲಿ ಭದ್ರಾವತಿ ಮಾಜಿ ಶಾಸಕ ಎಂ.ಜೆ. ಅಪ್ಪಾಜಿ, ಚಳ್ಳಕೆರೆ ಅಭ್ಯರ್ಥಿ ರವೀಶ್‍ಕುಮಾರ್, ಚಿಕ್ಕನಾಯಕನಹಳ್ಳಿ ಮಾಜಿ ಶಾಸಕ ಸಿ.ಬಿ.ಸುರೇಶ್‍ಬಾಬು, ಹಾಸನ ಮಾಜಿ ಶಾಸಕ ಎಚ್.ಎಸ್.ಪ್ರಕಾಶ್, ಕಾರವಾರದ ಮಾಜಿ ಶಾಸಕ ಆನಂದ್ ಅಸ್ನೋಟಿಕರ್, ಕೂಡ್ಲಿಗಿಯ ಅಭ್ಯರ್ಥಿ ಜೆ.ಎನ್.ಬೊಮ್ಮಣ್ಣ, ಯಶವಂತಪುರದ ಜವರಾಯಿಗೌಡ, ಶ್ರೀನಿವಾಸಪುರದ ವೆಂಕಟಶಿವಾರೆಡ್ಡಿ, ಸೊರಬದ ಮಾಜಿ ಶಾಸಕ ಮಧುಬಂಗಾರಪ್ಪ ಪರಾಭವಗೊಂಡಿದ್ದಾರೆ.

ಉಳಿದವರು 15 ಸಾವಿರಕ್ಕಿಂತಲೂ ಹೆಚ್ಚು ಮತಗಳ ಅಂತರದಿಂದ ಸೋಲು ಕಂಡಿದ್ದು, ಹಳೇ ಮೈಸೂರು ಭಾಗದಲ್ಲಿ 22 ಕ್ಷೇತ್ರಗಳ ಜೆಡಿಎಸ್ ಅಭ್ಯರ್ಥಿಗಳು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಗಿದೆ. ಚುನಾವಣೆಯ ಪ್ರದೇಶವಾರು ಮತದಾನವಾದ ಅಂಕಿ-ಅಂಶಗಳನ್ನು ನೋಡಿದರೆ ಮುಸ್ಲಿಂ ಸಮುದಾಯ ಹೆಚ್ಚಿರುವ ಕಡೆಗಳಲ್ಲಿ ಜೆಡಿಎಸ್ ಪರವಾಗಿ ಮತ ಬಿದ್ದಿಲ್ಲದರಿವುದೂ ಹೆಚ್ಚು ಸ್ಥಾನ ಗೆಲ್ಲಲು ಸಾಧ್ಯವಾಗಿಲ್ಲ ಎಂಬುದು ಒಂದು ಕಾರಣವಾಗಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin