ಎನ್ಸೆಫಾಲಿಟೆಸ್ ಸೋಂಕಿನಿಂದ 48 ಗಂಟೆಗಳಲ್ಲಿ 36 ಮಕ್ಕಳ ದುರ್ಮರಣ..!

ಈ ಸುದ್ದಿಯನ್ನು ಶೇರ್ ಮಾಡಿ

ಮುಜಫರ್‍ಪುರ್, ಜೂ. 12- ಬಿಹಾರದ ಮುಜಫರ್‍ಪುರ್‍ನಲ್ಲಿ ಮಾರಕ ಎನ್ಸೆಫಾಲಿಟೆಸ್ ವೈರಾಣು ಸೋಂಕು ಮತ್ತಷ್ಟು ಉಲ್ಬಣಗೊಂಡಿದ್ದು, 48ಗಂಟೆಗಳಲ್ಲಿ 36 ಮಕ್ಕಳು ಮೃತಪಟ್ಟಿದ್ದಾರೆ.

133 ಮಕ್ಕಳಿಗೆ ಸೋಂಕು ತಗಲಿದ್ದು, ನಗರದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಕ್ಕಳಲ್ಲಿ ವೈರಾಣು ಸೋಂಕು ಹಬ್ಬುತ್ತಿರುವುದರಿಂದ ಪೋಷಕರು ಮತ್ತು ಜನರಲ್ಲಿ ಆತಂಕ ಉಂಟಾಗಿದೆ.

ಶ್ರೀ ಕೃಷ್ಣ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಅಕ್ಯೂಟ್ ಎನ್ಸೆಫಾಲಿಟೆಸ್ ಸಿಂಡ್ರೊಮ್ (ಎಇಎಸ್) ಸೋಂಕಿನಿಂದ 36 ಮಕ್ಕಳು ಸಾವಿಗೀಡಾಗಿದ್ದಾರೆ ಎಂದು ಆಸ್ಪತ್ರೆಯ ಸೂಪರಿಂಟೆಂಡೆಂಟ್ ಸುನಿಲ್ ಶಶಿ ತಿಳಿಸಿದ್ದಾರೆ.

ಹೈಪೋಗ್ಲಿಸಿಮಿಯಾ-ರಕ್ತದಲ್ಲಿನ ಸಕ್ಕರೆ ಪ್ರಮಾಣದಲ್ಲಿ ತೀವ್ರ ಕುಸಿತ ಉಂಟಾಗುವ ಜೊತೆಗೆ ಎನ್ಸೆಪಾಲಿಟೆಸ್ ಸೋಂಕಿನಿಂದ ಮಕ್ಕಳು ಮೃತಪಟ್ಟಿದ್ದಾರೆಂದು ಅವರು ಹೇಳಿದ್ದಾರೆ.

ಬಿಹಾರದಲ್ಲಿ ಇತ್ತೀಚೆಗೆ ಉಷ್ಣ ಹವೆ ಮತ್ತು ವಾತಾವರಣ ಆದ್ರ್ರತೆಯಿಂದಾಗಿ ಬೆವರು ಆವಿಯಾಗುತ್ತಿಲ್ಲ, ಇದರಿಂದ ವೈರಾಣುಗಳು ಕಾಣಿಸಿಕೊಂಡು ಸೋಂಕು ರೂಪದಲ್ಲಿ ರೋಗವನ್ನು ಹಬ್ಬಿಸುತ್ತಿದೆ.

ಎನ್ಸೆಫಾಲಿಟೆಸ್ ಕಂಡು ಬಂದಾಗ ಮಕ್ಕಳಲ್ಲಿ ತೀವ್ರ ಜ್ವರ, ತಲೆನೋವು ಕಾಣಿಸಿಕೊಳ್ಳುತ್ತದೆ. ಜೊತೆಗೆ ರಕ್ತದಲ್ಲಿನ ಗ್ಲುಕೋಸ್(ಸಕ್ಕರೆ ಅಂಶ) ಆತಂಕಕಾರಿ ಮಟ್ಟದಲ್ಲಿ ಕಡಿಮೆಯಾಗುತ್ತದೆ. ಈ ಸೋಂಕು 15ವರ್ಷಗಳಿಗಿಂತ ವಯೋಮಾನದ ಮಕ್ಕಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.

ಮಕ್ಕಳಿಂದ ಮಕ್ಕಳಿಗೆ ಬಹುಬೇಗ ಹಬ್ಬುತ್ತದೆಂದು ತೀವ್ರ ನಿಗಾ ಘಟಕದ ಉಸ್ತುವಾರಿ ವೈದ್ಯ ಡಾ. ಗೋಪಾಲ್ ಸಹಾನಿ ತಿಳಿಸಿದ್ದಾರೆ.133 ಮಕ್ಕಳಿಗೆ ಸೋಂಕು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ದಿನನಿತ್ಯ ಆಸ್ಪತ್ರೆ ಈ ಸೋಂಕಿನಿಂದ ಮಕ್ಕಳು ಸೇರ್ಪಡೆಯಾಗುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.

# ಮುಖ್ಯಮಂತ್ರಿ ಕಳವಳ:
ಎನ್ಸೆಪಾಲಿಟೆಸ್ ಸೋಂಕು ಉಲ್ಬಣಗೊಂಡು ಮಕ್ಕಳ ಸಾವು-ಸೋವು ಬಗ್ಗೆ ಬಿಹಾರ ಮುಖ್ಯಮಂತ್ರಿ ನಿತಿಶ್‍ಕುಮಾರ್ ಕಳವಳ ವ್ಯಕ್ತಪಡಿಸಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಈ ರೋಗದ ತೀವ್ರತೆ ಕಡಿಮೆಯಾಗಿತ್ತು.

ಈಗ ಮತ್ತೆ ಎಇಎಸ್ ಸೋಂಕು ಉಲ್ಬಣಗೊಂಡಿರುವ ಬಗ್ಗೆ ಆತಂಕಗೊಂಡಿರುವ ನಿತಿಶ್‍ಕುಮಾರ್ ಪೋಷಕರಲ್ಲಿ ಜಾಗೃತಿ ಮೂಡಿಸುವ ಜೊತೆಗೆ ವೈರಾಣು ಸೋಂಕು ಹರಡದಂತೆ ಕಟ್ಟೆಚ್ಚರ ವಹಿಸಬೇಕು ಎಂದು ವೈದ್ಯಕೀಯ ಇಲಾಖೆಗೆ ಸೂಚನೆ ನೀಡಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin