ಬಸ್ ಮತ್ತು ಟ್ರಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ 36 ಮಂದಿ ದುರ್ಮರಣ

ಈ ಸುದ್ದಿಯನ್ನು ಶೇರ್ ಮಾಡಿ

ಬೀಜಿಂಗ್, ಸೆ.29 (ಪಿಟಿಐ)- ಬಸ್ ಮತ್ತು ಟ್ರಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ 36 ಮಂದಿ ಮೃತಪಟ್ಟು, ಇತರ 36 ಜನರು ಗಾಯಗೊಂಡಿರುವ ದುರ್ಘಟನೆ ಪೋರ್ವ ಚೀನಾದಲ್ಲಿ ಸಂಭವಿಸಿದೆ.  ಜಿಯಾಂಗ್ಸು ಪ್ರಾಂತ್ಯದ ಎಕ್ಸ್‍ಪ್ರೆಸ್ ಹೆದ್ದಾರಿಯಲ್ಲಿ ಈ ಭೀಕರ ಘಟನೆ ಸಂಭವಿಸಿದೆ.

69 ಜನರಿದ್ದ ಬಸ್ ಟ್ರಾಫಿಕ್ ಸಿಗ್ನಲ್‍ನನ್ನು ಮುನ್ನವೇ ದಾಟಿ ಚಲಿಸುತ್ತಿದ್ದಾಗ ಎದುರು ದಿಕ್ಕಿನಿಂದ ಬರುತ್ತಿದ್ದ ಸರಕು ಸಾಗಣೆ ಟ್ರಕ್‍ಗೆ ಅಪ್ಪಳಿಸಿತು. ಎಂದು ಸರ್ವಜನಿಕ ಭದ್ರತೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹೈಟೆಕ್ ಬಸ್‍ನ ಎಡ ಮುಂಭಾಗದ ಚಕ್ರವೊಂದು ಪಂಕ್ಚರ್ ಆದ ಕಾರಣ ಬಸ್ ನಿಯಂತ್ರಣ ತಪ್ಪಿ ಟ್ರಕ್‍ಗೆ ಅಪ್ಪಳಿಸಿತು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಈ ದುರಂತದಲ್ಲಿ 35 ಮಂದಿ ಮೃತಪಟ್ಟಿದ್ದು, ಅಷ್ಟೇ ಸಂಖ್ಯೆಯ ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ ಒಂಭತ್ತು ಮಂದಿಯ ಸ್ಥಿತಿ ಶೋಚನೀಯವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕವಿದೆ.

Facebook Comments