2022ರೊಳಗೆ ಭಾರತದ ಬತ್ತಳಿಕೆ ಸೇರಲಿವೆ 36 ರಫೇಲ್ ಯುದ್ಧ ವಿಮಾನಗಳು

ಈ ಸುದ್ದಿಯನ್ನು ಶೇರ್ ಮಾಡಿ

ಹೈದ್ರಾಬಾದ್,ಜೂ.19-ಮುಂದಿನ 2022ರ ವೇಳೆಗೆ ಭಾರತೀಯ ವೈಮಾನಿಕ ಪಡೆಗೆ 36 ರಫೇಲ್ ಯುದ್ಧ ವಿಮಾನಗಳ ಸೇರ್ಪಡೆಯಾಗಲಿದೆ ಎಂದು ಐಎಎಫ್ ಮುಖ್ಯಸ್ಥ ಆರ್‍ಕೆಎಸ್ ಬಡೋರಿಯಾ ತಿಳಿಸಿದ್ದಾರೆ.ಫ್ರಾನ್ಸ್‍ನಿಂದ ಸಕಾಲಕ್ಕೆ ರಫೇಲ್ ಯುದ್ಧ ವಿಮಾನಗಳು ಭಾರತದ ಬತ್ತಳಿಕೆಗೆ ಸೇರ್ಪಡೆಗೊಳ್ಳಲಿದೆ ಎಂದು ಅವರು ಭರವಸೆ ನೀಡಿದ್ದಾರೆ.

ಕೊರೊನಾ ಸೋಂಕಿನ ತೀವ್ರತೆ ಹಿನ್ನಲೆಯಲ್ಲಿ ಒಂದೇರಡು ವಿಮಾನಗಳ ಸೇರ್ಪಡೆ ವಿಳಂಭವಾಗಬಹುದು ಆದರೆ, 2022 ರವೇಳೆಗೆ 36 ರಫೇಲ್ ಯುದ್ಧ ವಿಮಾನಗಳನ್ನು ತರಿಸಿಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಅವರು ದುಂಡಿಗಲ್ ಏರ್‍ಫೋರ್ಸ್ ಅಕಾಡಮಿಯಲ್ಲಿ ಆಯೋಜಿಸಿದ್ದ ಸಂಯೋಜಿತ ಪದವಿ ಕಾರ್ಯಕ್ರಮದ ಪರೇಡ್‍ನಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಕಳೆದ 2016ರಲ್ಲಿ 59 ಸಾವಿರ ಕೋಟಿ ರೂ.ವೆಚ್ಚದಲ್ಲಿ 36 ರಫೇಲ್ ಯುದ್ಧ ವಿಮಾನ ಖರೀದಿಸಲು ಒಡಂಬಡಿಕೆ ಮಾಡಿಕೊಳ್ಳಲಾಗಿತ್ತು. ಕಳೆದ ಫೆಬ್ರವರಿಯಲ್ಲಿ ರಕ್ಷಣಾ ಸಚಿವ ರಾಜನಾಥ್‍ಸಿಂಗ್ ಅವರು 2022ರ ವೇಳೆಗೆ ಎಲ್ಲಾ ಯುದ್ಧ ವಿಮಾನಗಳು ಭಾರತದ ಬತ್ತಳಿಕೆ ಸೇರಲಿವೆ ಎಂದು ತಿಳಿಸಿದ್ದರು.

ಇದೀಗ ಬಡೋರಿಯಾ ಅವರು 2022 ರ ಅಂತ್ಯದೊಳಗೆ ರಫೇಲ್ ಯುದ್ಧ ವಿಮಾನಗಳು ರಕ್ಷಣಾ ಪಡೆಗೆ ಸೇರ್ಪಡೆಗೊಳ್ಳಲಿವೆ ಎಂದಿದ್ದಾರೆ.

Facebook Comments

Sri Raghav

Admin