ಹಿಮಾಚಲ ಪ್ರದೇಶದಲ್ಲಿ 37 ಅಭ್ಯರ್ಥಿಗಳ ಠೇವಣಿ ನಷ್ಟ

ಈ ಸುದ್ದಿಯನ್ನು ಶೇರ್ ಮಾಡಿ

ಶಿಮ್ಲಾ, ಮೇ 24-ಹಿಮಾಚಲ ಪ್ರದೇಶದ ನಾಲ್ಕು ಲೋಕಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಒಟ್ಟು 37 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡು ತೀವ್ರ ಮುಖಭಂಗಕ್ಕೆ ಒಳಗಾಗಿದ್ದಾರೆ. ಠೇವಣಿ ಕಳೆದುಕೊಂಡವರಲ್ಲಿ ಮಾಯಾವತಿ ನೇತೃತ್ವದ ಬಿಎಸ್‍ಪಿ ಪಕ್ಷದ ಅಭ್ಯರ್ಥಿಗಳೂ ಸೇರಿದ್ದಾರೆ.

ಠೇವಣಿ ಪಡೆಯಲು ಚಲಾವಣೆಯಾದ ಒಟ್ಟು ಮತಗಳಲ್ಲಿ ಆರನೇ ಒಂದು ಭಾಗ(ಶೇ.16.64)ದಷ್ಟು ಮತ ಪಡೆಯಬೇಕು. ಆದರೆ ಈ 37 ಅಭ್ಯರ್ಥಿಗಳು ತೀವ್ರ ಕಳಪೆ ಸಾಧನೆಯಿಂದ ತಲಾ 25 ಸಾವಿರ ರೂ.ಗಳ ಠೇವಣಿ ಕಳೆದುಕೊಂಡಿದ್ದಾರೆ.

ಹಿಮಾಚಲ ಪ್ರದೇಶದ ಶಿಮ್ಲಾ, ಹಮೀರ್‍ಪುರ್, ಕಂಗ್ರಾ ಮತ್ತು ಮಂಡಿ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಈ ಕಳಪೆ ಸಾಧನೆ ಕಂಡುಬಂದಿದೆ. ಮತ್ತೊಂದು ಆಸಕ್ತಿಕರ ಸಂಗತಿ ಎಂದರೆ ನೋಟಾ (ಯಾರಿಗೂ ಮತವಿಲ್ಲ)ಪರ ಚಲಾವಣೆಯಾದ ಮತಗಳಿಗಿಂತಲೂ ಈ ಅಭ್ಯರ್ಥಿಗಳು ಕಡಿಮೆ ಮತ ಗಳಿಸಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ