ಇಂದು ರದ್ದಾದ 370, 35ಅ ವಿಧಿಗಳು ಏನು ಹೇಳುತ್ತವೆ..? ನೀವು ತಿಳಿದುಕೊಳ್ಳಲೇಬೇಕಾದ ಸತ್ಯ ಇಲ್ಲಿದೆ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಶ್ರೀನಗರ, ಆ.5- ಇನ್ನೆಷ್ಟು ದಿನ ಸಹಿಸಿಕೊಳ್ಳುವುದು, ಇನ್ನೆಷ್ಟು ಸೈನಿಕರನ್ನು ಕಳೆದುಕೊಳ್ಳುವುದು, ತಾಳ್ಮೆಗೂ ಮಿತಿ ಇಲ್ಲವೇ ಎಂದು ಪ್ರಶ್ನಿಸಿಕೊಳ್ಳುತ್ತೇವೆ. ಆದರೆ, ವಾಸ್ತವ ಸಂಗತಿ ಏನು ಎಂಬುದನ್ನು ತಿಳಿದು ಜಾಣ ನಡೆ ಅನುಸರಿಸಿದರೆ ಕ್ರಾಂತಿಗಿಂತ ಚಾಣಾಕ್ಷ ನೀತಿಯೇ ಉತ್ತಮ ಎನ್ನಬಹುದು.

ನಮ್ಮ ದುರದೃಷ್ಟವೋ ಏನೋ, ಇಡೀ ಭಾರತಕ್ಕೆ ಒಂದು ಕಾನೂನು. ಆದರೆ ಕಾಶ್ಮೀರಕ್ಕೆ ಅದು ಅನ್ವಯಿಸುವುದಿಲ್ಲ. ನಾವು ಪೂಜಿಸುವ, ಪಾಲಿಸುವ ಸಂವಿಧಾನವೂ ಕೂಡ ಅವರಿಗಿಲ್ಲ. ಸ್ವಾತಂತ್ರ್ಯ ಪೂರ್ವದಲ್ಲಿ ಅಂದು ಮಾಡಿದ ತಪ್ಪು ಈಗಿನವರೆಗೂ ಶಾಪವಾಗಿ ಕಾಡುತ್ತಲೇ ಇದೆ. ಅದೇ ವಿಶೇಷ 370 ಮತ್ತು 371ನೇ ಪರಿಚ್ಛೇದ.

ಕಾಶ್ಮೀರದಲ್ಲಿ ದಿನನಿತ್ಯ ನಡೆಯುತ್ತಿರುವ ರಕ್ತಪಾತಕ್ಕೆ ಕಾರಣ ನಮ್ಮ ನೆರೆಯ ಸೈತಾನ ಪಾಪಿ ಪಾಕಿಸ್ತಾನ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೂ ನಾವು ಅವರ ಮನಃಪರಿವರ್ತನೆಗೆ ಸತತ ಶ್ರಮಿಸಿ ಸ್ನೇಹದ ಹಸ್ತಕ್ಕೆ ಕೊನೆಯವರೆಗೂ ಹಂಬಲಿಸಿದರೂ ನಮಗೆ ಸಿಗುವುದು ಮಾತ್ರ ಪ್ರತಿಯೊಬ್ಬ ಭಾರತೀಯನ ಮನಸ್ಸು ಹಿಂಡುವ ಪೈಶಾಚಿಕ ಕೃತ್ಯಗಳು.

ನಾವು ಕಾಶ್ಮೀರಕ್ಕೆ ಕೊಡುತ್ತಿರುವುದು ಇಡೀ 29 ರಾಜ್ಯಗಳಿಂದ ಸಂಗ್ರಹಿಸುವ ತೆರಿಗೆಯ ಸುಮಾರು ಶೇ.10ರಷ್ಟು ಹಣ. ಉಚಿತ ಆಹಾರ ಸಾಮಗ್ರಿಗಳು, ಅಲ್ಲಿನ ನಿವಾಸಿಗಳಿಗೆ ಭರಪೂರ ಸವಲತ್ತುಗಳು ಮತ್ತು ಸೇಬು ಬೆಳೆಯುವುದು, ಪ್ರವಾಸೋದ್ಯಮ ಬಿಟ್ಟರೆ ಅವರಿಗೆ ಬೇರೆ ಯಾವ ಆದಾಯವೂ ಇಲ್ಲ.

# ಇದನ್ನೆಲ್ಲ ಸ್ಥಗಿತಗೊಳಿಸಿದರೆ ಬುದ್ಧಿ ಬರಬಹುದೇ ?
ನೆರೆಯ ಪಾಕಿಸ್ತಾನ ಅಮಾಯಕ ಯುವ ಸಮುದಾಯವನ್ನು ಧರ್ಮದ ಹೆಸರಿನಲ್ಲಿ ಮನಃಪರಿವರ್ತನೆ ಮಾಡಿ ಅವರಿಗೆ ಹಣದ ಆಮಿಷವೊಡ್ಡುವುದನ್ನು ತಡೆಯಬೇಕು. ಸಮಾನ ನಾಗರಿಕತ್ವ ಬರಬೇಕು. ಕಾಶ್ಮೀರದಲ್ಲೂ ಕೂಡ ನಮ್ಮ ದೇಶದ ಯಾವುದೇ ಭಾಗದ ಪ್ರಜೆ ಭೂಮಿ ಖರೀದಿ ಸೇರಿದಂತೆ ವ್ಯಾಪಾರ ವಹಿವಾಟು ಮಾಡುವಂತಾಗಬೇಕು.

# ಪ್ರಮುಖ ಸಮಸ್ಯೆ ಏನು ?
370 ಮತ್ತು 371ನೇ ಪರಿಚ್ಛೇದಗಳನ್ವಯ ಕಾಶ್ಮೀರದವರನ್ನು ಬಿಟ್ಟು ಅಲ್ಲಿ ಬೇರೆಯವರು ಯಾರೂ ಉದ್ಯಮಗಳನ್ನು ಆರಂಭಿಸಬಾರದೆಂಬ ನಿಯಮವಿದೆ. ಇದರಿಂದಾಗಿ ಬಹುತೇಕ ಯುವ ಸಮುದಾಯ ನಿರುದ್ಯೋಗ ಸಮಸ್ಯೆ ಎದುರಿಸುವಂತಾಗುತ್ತದೆ. ಅವರಿಗೆ ದಿನಕ್ಕೆ 2 ರಿಂದ 3 ಸಾವಿರ ಸಿಕ್ಕರೆ ಸಾಕು ಜೀವನ ನಡೆಸುವ ಎಲ್ಲಾ ಸವಲತ್ತುಗಳು ಅಗ್ಗದ ಬೆಲೆಯಲ್ಲೇ ಸಿಗುತ್ತದೆ.

ದುಡಿಯುವ ಕೈಗಳಿಗೆ ಕೆಲಸ ಕೊಡದೆ ಇದ್ದರೆ, ಅವರು ಸೋಮಾರಿಗಳಾಗಿ ಹಣದ ಆಮಿಷಗಳಿಗೆ ಒಳಗಾಗಿ ದೇಶವಿರೋಧಿ ಕೃತ್ಯಗಳನ್ನು ಮಾಡುತ್ತಾರೆ. ಅದಕ್ಕೆ ತಾಜಾ ಉದಾಹರಣೆ 42 ಸಿಆರ್‍ಪಿಎಫ್ ಯೋಧರ ಹತ್ಯೆ ಎಂದು ಅಲ್ಲಿನ ಮೂಲ ಸಮಸ್ಯೆಯನ್ನು ಬಿಚ್ಚಿಟ್ಟಿದ್ದು ಅಲ್ಲಿನ ಒಬ್ಬ ವ್ಯಾಪಾರಿ.

ಭಾರತದ ಎಲ್ಲೆಡೆ ನಾವು ಮನೆ ತೆರಿಗೆ ಕಟ್ಟುತ್ತೇವೆ. ಸರ್ಕಾರದಿಂದ ನೀಡುವ ವಿದ್ಯುತ, ನೀರು ಸೇರಿದಂತೆ ಇನ್ನಿತರ ಮೂಲಭೂತಸೌಲಭ್ಯಗಳಿಗೆ ಸಾವಿರಾರು ರೂ. ಖರ್ಚು ಮಾಡುತ್ತೇವೆ. ಆದರೆ ಕಾಶ್ಮೀರಿಗಳಿಗೆ ಪುಕ್ಕಟೆಯಾಗಿ ವಿದ್ಯುತ್, ನೀರು, ಶಿಕ್ಷಣ ಸಿಗುತ್ತದೆ. ಅಲ್ಲಿ ಪುಂಡರ ಗುಂಪು ತೂರುತ್ತಾರೆ.

ಅದೆಷ್ಟೋ ಬಾರಿ ನನ್ನ ವಾಹನದ ಗಾಜು ಕೂಡ ಪುಡಿಪುಡಿಯಾಗಿದೆ ಎಂದು ಅಂತರ್ಜಾಲದಲ್ಲಿ ವೈರಲ್ ಆಗಿರುವ ಹರ್ಮೀತ್‍ಸಿಂಗ್ ಎಂಬ ವ್ಯಾಪಾರಿ ನೋವಿನ ಅಳಲುಗಳಿವು. ಈಗ ಹಿಂದೆ ರೂಪಿಸಿದ್ದ ದುರಂತ ಶಾಸನಕ್ಕೆ ನಾವೀಗ ಬೆಲೆ ತೆತ್ತುತ್ತಿದ್ದೇವೆ. ಈಗ ಅವರಿಲ್ಲ. ಕೇಂದ್ರ ಸರ್ಕಾರ ದಿಟ್ಟ ನಿರ್ಧಾರದಿಂದಾಗಿ ಈಗ
ಎಲ್ಲಾ ಪುಂಡಾಟಿಕೆಯನ್ನು ಮಟ್ಟ ಹಾಕಬೇಕು.

Facebook Comments