375 ರ ಸಂಭ್ರಮದಲ್ಲಿ ಗಾಂಧಾರಿ ಬಳಗ

ಈ ಸುದ್ದಿಯನ್ನು ಶೇರ್ ಮಾಡಿ

Gandhaari

ಕಲರ್ಸ್ ಕನ್ನಡ ವಾಹಿನಿ ಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಗಾಂಧಾರಿ ಇದೀಗ 375 ಕಂತುಗಳನ್ನು ಯಶಸ್ವಿಯಾಗಿ ಪೂರೈಸಿದೆ. ಎಲ್ಲಾ ವರ್ಗಗಳ ಪ್ರೇಕ್ಷಕರ ಮನವನ್ನು ಗೆದ್ದು ಈಗ 400ನೇ ಕಂತನ್ನು ಪೂರೈಸುವಲ್ಲಿ ದಾಪುಗಾಲು ಹಾಕಿದೆ. ಲೋಕೇಶ್ ಕೃಷ್ಣ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಗಾಂಧಾರಿಯ ಯಶಸ್ಸಿನ ಸಂಭ್ರಮವನ್ನು ಇತ್ತೀಚೆಗೆ ಬೆಂಗಳೂರಿನ ಪಂಚತಾರಾ ಹೊಟೇಲ್‍ವೊಂದರಲ್ಲಿ ಆಚರಿಸಲಾಯಿತು. ಈ ದೈನಿಕ ಧಾರಾವಾಹಿ ಯಲ್ಲಿ ಕೆಲಸ ಮಾಡಿದ ಎಲ್ಲಾ ಕಲಾವಿದರು ಹಾಗೂ ತಂತ್ರಜ್ಞರು ಸೇರಿ ಈ ಸಂಭ್ರಮದಲ್ಲಿ ಪಾಲ್ಗೊಂಡು ತಮ್ಮ ಅನುಭವಗಳನ್ನು ಹಂಚಿಕೊಂಡರು. ಆನಂದ್ ಆಡಿಯೋದ ಮೋಹನ್ ಛಾಬ್ರಿಯಾ ಅವರ ನೇತೃತ್ವದ ಕೋಮಲ್ ಎಂಟರ್‍ಟೈನ್‍ಮೆಂಟ್ ಸಂಸ್ಥೆಯ ನಿರ್ಮಾಣದ ಮೊದಲ ಕಿರುತೆರೆ ಧಾರಾವಾಹಿಯಾಗಿ ಗಾಂಧಾರಿ ಮೂಡಿ ಬಂದಿದೆ.


ಮೋಹನ್ ಛಾಬ್ರಿಯಾ ಅವರ ಪುತ್ರ ಆನಂದ್ ಇದೀಗ ಸಂಸ್ಥೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದು, ಸಂಸ್ಥೆ ನಡೆದು ಬಂದ ಹಾದಿಯನ್ನು ಪತ್ರಿಕಾ ಗೋಷ್ಠಿಯಲ್ಲಿ ಸಂಕ್ಷಿಪ್ತ ವಾಗಿ ಹೇಳಿಕೊಂಡರು.   ಒಂದು ವರ್ಷ ಏಳು ತಿಂಗಳ ಕಾಲ ಸತತವಾಗಿ ಪ್ರದರ್ಶನ ಗೊಂಡ ಈ ಧಾರಾವಾಹಿ ಯಲ್ಲಿ ಜಗನ್ ಹಾಗೂ ಕಾವ್ಯಗೌಡ ದ್ವಿಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇನ್ನು ಉಳಿದಂತೆ ದೊಡ್ಡ ತಾರಾ ಬಳಗವನ್ನೇ ಹೊಂದಿ ರುವ ಈ ಧಾರಾವಾಹಿ ಪ್ರೇಕ್ಷಕರ ಮೆಚ್ಚುಗೆಯನ್ನು ಪಡೆದು ಮುನ್ನುಗ್ಗುತ್ತಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin