ಬಿಗ್ ಬ್ರೇಕಿಂಗ್ : ರಾಜ್ಯದಲ್ಲಿ ಮತ್ತೆ 38 ಜನರಿಗೆ ಕೊರೋನಾ..! 353ಕ್ಕೇರಿದ ಸೋಂಕಿತರ ಸಂಖ್ಯೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಏ.17- ನಗರದಲ್ಲಿ ಪತ್ತೆಯಾಗುತ್ತಿರುವ ಕೊರೊನಾ ರೋಗಿಗಳ ಸೋಂಕಿನ ಮೂಲ ಪತ್ತೆಯಾಗದೇ ಇರುವ ಆತಂಕಕಾರಿ ಬೆಳವಣಿಗೆಯಾಗಿದ್ದು, ಬೆಂಗಳೂರು ಮಹಾನಗರ ಮೂರನೇ ಹಂತಕ್ಕೆ ತಲುಪಿದೆಯೇ ಎಂಬ ಚಿಂತೆ ಶುರುವಾಗಿದೆ. ರಾಜ್ಯಾದ್ಯಂತ ಇಂದು ಮಧ್ಯಾಹ್ನದವರೆಗೆ 38ಹೊಸ ಕೊರೊನಾ ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ.

ಅದರಲ್ಲಿ 9 ಪ್ರಕರಣಗಳ ಪೈಕಿ 6 ಪ್ರಕರಣಗಳಿಗೆ ಸೋಂಕಿನ ಮೂಲವೇ ಪತ್ತೆಯಾಗಿಲ್ಲ. ಮತ್ತೊಂದು ಪ್ರಕರಣದಲ್ಲಿ ಉಸಿರಾಟದ ಸಮಸ್ಯೆಯಿದ್ದ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದೆ. ಸಾಮಾನ್ಯವಾಗಿ ಎಲ್ಲಿಂದ , ಯಾರಿಗೆ ಸೋಂಕು ತಗುಲಿದೆ ಎಂಬ ಸ್ಪಷ್ಟತೆ ಇದ್ದರೆ ಅದನ್ನು ಎರಡನೇ ಹಂತದ ಸೋಂಕು ವಿಸ್ತರಣಾ ಕ್ರಮ ಎಂದು ಪರಿಗಣಿಸಲಾಗುತ್ತದೆ.

ಬೆಂಗಳೂರಿನಲ್ಲಿ ಇಂದು ಪತ್ತೆಯಾಗಿರುವ 55, 32, 23, 28, 21 ವರ್ಷದ ಪುರುಷರಲ್ಲಿ, 11 ವರ್ಷದ ಬಾಲಕಿಯಲ್ಲಿ ಸೋಂಕು ಪತ್ತೆಯಾಗಿದೆ. ಆದರೆ, ಇಷ್ಟು ಮಂದಿಗೂ ಯಾರಿಗೆ ಸೋಂಕು ತಗುಲಿದೆ ಎಂಬ ಮಾಹಿತಿ ಇಲ್ಲ. 64 ವರ್ಷದ ಮತ್ತೊಬ್ಬ ಮಹಿಳೆ ಉಸಿರಾಟದ ಸಮಸ್ಯೆ ಕಾರಣಕ್ಕಾಗಿ ಆಸ್ಪತ್ರೆಗೆ ಹೋದರೆ ಆಕೆಯಲ್ಲೂ ಸೋಂಕು ಇರುವುದು ದೃಢಪಟ್ಟಿದೆ. ಹೀಗಾಗಿ ಜನಸಾಮಾನ್ಯರ ಆತಂಕ ತೀವ್ರಗೊಂಡಿದೆ.

ಉಳಿದಂತೆ ಇಂದು ಪತ್ತೆಯಾಗಿರುವ ಸೋಂಕಿತರ ಪೈಕಿ ಮೈಸೂರು ಜಿಲ್ಲೆಯ ಪಾಲು ಹೆಚ್ಚಿದೆ. ರೋಗಿ ಸಂಖ್ಯೆ 52ರ ಸಂಪರ್ಕದಿಂದ ನಂಜನಗೂಡಿನ 50, 33, 33 ವರ್ಷದ ಮೂವರು ವ್ಯಕ್ತಿಗಳು ಸೋಂಕು ತಗುಲಿಸಿಕೊಂಡಿದ್ದಾರೆ.ರೋಗಿ ಸಂಖ್ಯೆ 273ರ ಸಂಪರ್ಕದಿಂದ ಮೈಸೂರಿನ 41 ವರ್ಷದ ಮಹಿಳೆಗೂ ಸೋಂಕು ಬಂದಿದೆ. 171 ಸಂಖ್ಯೆಯ ಸೋಂಕಿತನಿಂದ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ 25, 29, 45 ವರ್ಷದ ಮೂವರು ವ್ಯಕ್ತಿಗಳಿಗೆ ಸೋಂಕು ಅಂಟಿಕೊಂಡಿದೆ.

ರೋಗಿ ಸಂಖ್ಯೆ 52ರ ಸಂಪರ್ಕದಿಂದಾಗಿ ನಂಜನಗೂಡಿನ 8 ಮಂದಿಗೆ ಕೊರೊನಾ ಸೋಂಕು ಬಂದಿದೆ. 22, 38, 38, 26, 28, 22, 29, 26 ವರ್ಷದ 8 ಮಂದಿ ಸೋಂಕಿಗೆ ತುತ್ತಾಗಿದ್ದಾರೆ.ದೆಹಲಿ ಪ್ರವಾಸ ಮಾಡಿ ಮಾ.28ರಂದು ವಾಪಸ್ ಬಂದಿದ್ದ ದಕ್ಷಿಣ ಕನ್ನಡ ಜಿಲ್ಲೆ ಉಪ್ಪಿನಂಗಡಿಯ 39 ವರ್ಷದ ವ್ಯಕ್ತಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.

ಇನ್ನು ಬೆಂಗಳೂರಿನಲ್ಲಿ ರೋಗಿ ಸಂಖ್ಯೆ 262ರ ಸಂಪರ್ಕದಿಂದ 6 ವರ್ಷದ ಬಾಲಕ, 25 ವರ್ಷದ ಮಹಿಳೆಗೆ ಕೊರೊನಾ ಹರಡಿದೆ.ದೆಹಲಿಯ ಜಮಾತೆ ಮರ್ಕಸ್ ಸಮಾವೇಶದಲ್ಲಿ ಭಾಗವಹಿಸಿ ಬಂದಿದ್ದ ವ್ಯಕ್ತಿಯ ಸಂಪರ್ಕದಿಂದಾಗಿ ಬೀದರ್ ಜಿಲ್ಲೆಯ 18 ವರ್ಷದ ಯುವಕನಿಗೆ ಸೋಂಕು ತಗುಲಿದೆ.

ವಿಜಯಪುರ ಜಿಲ್ಲೆಯಲ್ಲಿ ರೋಗಿ ಸಂಖ್ಯೆ 221ರ ಸಂಪರ್ಕದಿಂದಾಗಿ 6 ವರ್ಷದ ಬಾಲಕ ಮತ್ತು 28 ವರ್ಷದ ಮಹಿಳೆಗೆ ಸೋಂಕು ತಗುಲಿದೆ. ಬಳ್ಳಾರಿ ಜಿಲ್ಲೆ ಹೊಸಪೇಟೆಯಲ್ಲಿ ಸೋಂಕಿತರ ಸಂಖ್ಯೆ 89, 90, 91, 141 ಇವರ ಸಂಪರ್ಕದಿಂದಾಗಿ ಏಳು ಮಂದಿಗೆ ಸೋಂಕು ತಗುಲಿದ್ದು, ಅವರಲ್ಲಿ 39, 21, 48, 50, 24 ವರ್ಷದ ಪುರುಷರು, 68ವರ್ಷದ ಮಹಿಳೆ ಹಾಗೂ 10 ವರ್ಷದ ಬಾಲಕಿ ಸೇರಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ರೋಗಿ ಸಂಖ್ಯೆ 250ರ ಸಂಪರ್ಕದಿಂದಾಗಿ 9 ವರ್ಷದ ಬಾಲಕ, 20 ವರ್ಷದ ಯುವಕ, 36 ವರ್ಷದ ವ್ಯಕ್ತಿಗೆ ಸೋಂಕು ತಗುಲಿದೆ.
ರಾಜ್ಯದಲ್ಲಿ ಕೊರೊನಾ ಸೋಂಕಿನ ಹಾವಳಿ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಬಹಳಷ್ಟು ಮಂದಿಗೆ ಯಾವ ಮೂಲದಿಂದ ಸೋಂಕು ತಗುಲಿದೆ ಎಂಬುದೇ ಪತ್ತೆಯಾಗುತ್ತಿಲ್ಲ. ಈ ವೇಳೆ ರಾಜ್ಯ ಸರ್ಕಾರ ಲಾಕ್‍ಡೌನ್‍ನನ್ನು ಹಂತ ಹಂತವಾಗಿ ಸಡಿಲಗೊಳಿಸುವ ಮಾರ್ಗ ಸೂಚಿಗಳನ್ನು ರೂಪಿಸುತ್ತಿದೆ. ಇದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

Facebook Comments

Sri Raghav

Admin