3,871 ಕೋಟಿ ರೂ. ಬ್ಯಾಂಕ್ ಸಾಲ ವಂಚನೆ ಆರೋಪ : ಆರ್‍ಇಐ ಆಗ್ರೋ ಅಧ್ಯಕ್ಷ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

CBI--01

ನವದೆಹಲಿ, ಮೇ 5- ರಾಷ್ಟ್ರೀಕೃತ ಬ್ಯಾಂಕುಗಳಿಂದ ಕೋಟ್ಯಂತರ ರೂ.ಗಳ ಸಾಲ ಪಡೆದು ಉದ್ಯಮಿಗಳು ವಂಚಿಸುತ್ತಿರುವ ಪ್ರಕರಣಗಳು ವ್ಯಾಪಕವಾಗಿ ಹೆಚ್ಚಾಗುತ್ತಿವೆ. 3,871 ಕೋಟಿ ರೂ.ಗಳ ಬ್ಯಾಂಕ್ ಸಾಲ ವಂಚನೆ ಆರೋಪದ ಮೇಲೆ ಆರ್‍ಇಐ ಆಗ್ರೋ ಕಂಪೆನಿ ಅಧ್ಯಕ್ಷ ಸಂಜಯ್ ಜುನ್ಹುನ್ವಾಲಾ ಈಗ ಕೇಂದ್ರೀಯ ತನಿಖಾದಳ ಸಿಬಿಐ ಅತಿಥಿಯಾಗಿದ್ದಾರೆ.  ಈ ಹಿಂದೆ ಸಂಯುಕ್ತ ಅರಬ್ ಗಣರಾಜ್ಯ(ಯುಎಇ) ಸಂಜಯ್ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಹೊರಡಿಸಿತ್ತು. ವಿದೇಶದಿಂದ ಮರಳುತ್ತಿದ್ದ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.ಇದೇ ಕಂಪೆನಿಯ ಇನ್ನೊಬ್ಬ ಮುಖ್ಯಸ್ಥ ಮತ್ತು ಸಂಜಯ್ ಸಹೋದರ ಸಂದೀಪ್ ಜುನ್ಹುನ್ವಾಲಾ ಅವರನ್ನೂ ಸಹ ಬಂಧಿಸಲಾಗಿದೆ.ಕೊಲ್ಕತಾ ಮೂಲದ ಈ ಸಂಸ್ಥೆ ಜನಪ್ರಿಯ ಬ್ರಾಂಡ್ ಹೆಸರಿನಲ್ಲಿ ಬಾಸ್ಮತಿ ಅಕ್ಕಿಯನ್ನು ರಫ್ತು ಮಾಡುವ ವ್ಯವಹಾರ ನಡೆಸುತ್ತಿತ್ತು.  ಸಾಲ ವಂಚನೆ ಪ್ರಕರಣದ ಸಂಬಂಧ ಯುಕೋ ಬ್ಯಾಂಕ್ ನೇತೃತ್ವದ 14 ಬ್ಯಾಂಕುಗಳ ಒಕ್ಕೂಟ ಸಲ್ಲಿಸಿದ್ದ ದೂರಿನ ಅನ್ವಯ ಜುನ್ಹುನ್ವಾಲಾ ಸಹೋದರನನ್ನು ಬಂಧಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin