ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 3ನೇ ದಿನದ ಪ್ಯಾಕೇಜ್ ಹಂಚಿಕೆಯಲ್ಲಿ ಯಾರಿಗೆ ಏನೇನು ಸಿಕ್ತು..?

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ- ದೇಶಾದ್ಯಂತ ಲಾಕ್ ಡೌನ್ ಜಾರಿಯಾದ ನಂತರ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ರೈತರ ಕೃಷಿ ಚಟುವಟಿಕೆಗಳಿಗೆ ಸಹಕಾರ ನೀಡಲು ಕೇಂದ್ರ ಸರ್ಕಾರ ಇಂದು ಒಂದು ಲಕ್ಷ ಕೋಟಿ ರೂ. ಪ್ಯಾಕೇಜ್ ಘೋಷಣೆ ಮಾಡಿದೆ.  ಇಂದು ಆರ್ಥಿಕ ಪ್ಯಾಕೇಜ್‌ನ ಮೂರನೇ ಹಂತದ ವಿವರಣೆಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಂಚಿಕೊಂಡಿದ್ದು,ಪ್ರಮುಖವಾಗಿ ಕೃಷಿ ವಲಯದ ಯೋಜನೆಗಳ ಬಗ್ಗೆ ಅವರು ತಿಳಿಸಿದ್ದಾರೆ.

ಕೃಷಿಯಲ್ಲಿ ಆಡಳಿತಾತ್ಮಕ ಸುಧಾರಣೆಗಳ ಬಗ್ಗೆ ಪ್ರಸ್ತಾಪ ಮಾಡಲಾಗಿದ್ದು, ಮೂಲಸೌಕರ್ಯ, ಸಾಮರ್ಥ್ಯ ವೃದ್ಧಿ ಬಗ್ಗೆ 8 ತೀರ್ಮಾನಗಳು ಮತ್ತು ಸರ್ಕಾರ, ಆಡಳಿತಾತ್ಮಕ ಸುಧಾರಣೆಗಳ ಬಗ್ಗೆ 3 ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು
ಹೇಳಿದ್ದಾರೆ.

ಕೃಷಿ ಮೂಲಸೌಕರ್ಯ ವೃದ್ಧಿಗಾಗಿ 1 ಲಕ್ಷ ಕೋಟಿ ರೂ. ಮೂಲಸೌಕರ್ಯ ವೃದ್ಧಿಗಾಗಿ 1 ಲಕ್ಷ ಕೋಟಿ ನೀಡ್ತೇವೆ. ಕೃಷಿ ಉತ್ಪಾದಕ ಸಂಘಗಳು ಸೇರಿ ಕ್ಲಸ್ಟರ್ ಆಧಾರಿತ ಕೃಷಿಗೆ 10 ಸಾವಿರ ಕೋಟಿ ರೂ. ಕೃಷಿ ಉತ್ಪನ್ನಗಳ ಸಾಗಾಟಕ್ಕೆ 10 ಸಾವಿರ ಕೋಟಿ ರೂ. ವಿನಿಯೋಗಿಸಲಾಗುವುದು. 1 ಲಕ್ಷ ಕೋಟಿ ರೂಪಾಯಿ ಕೃಷಿ ಮೂಲ ಸೌಕರ್ಯಕ್ಕೆ ಮೀಸಲು. ಸಾವಯವ ಕೃಷಿ, ಹರ್ಬಲ್‌ ಕೃಷಿಕರಿಗೆ ನೆರವು ನೀಡ್ತೇವೆ. ವನ್ಯ ಸಂಪತ್ತು ಯೋಜನೆಗೂ ಹಣ ನೀಡಲಾಗುತ್ತೆ ಎಂದು ವಿವರ ನೀಡಿದರು.

ಕೋಲ್ಡ್ ಚೈನ್ ಮತ್ತು ಸುಗ್ಗಿಯ ನಂತರದ ನಿರ್ವಹಣಾ ಮೂಲಸೌಕರ್ಯಗಳನ್ನು ಹೊಂದಲು ಈ ನಿಧಿಯನ್ನು ಬಳಸಲಾಗುತ್ತದೆ. ಮೈಕ್ರೊ ಫುಡ್ ಎಂಟರ್‍ಪ್ರೈಸಸ್‍ಗಾಗಿ 10,000 ಕೋಟಿ ರೂ.ಗಳ ನಿಧಿಯನ್ನು ನಿಗದಿಪಡಿಸಲಾಗಿದೆ. ರಾಜ್ಯವಾರು ಉತ್ಪನ್ನಗಳನ್ನು ಉತ್ತೇಜಿಸುವ ಕ್ಲಸ್ಟರ್ ಆಧಾರಿತ ವಿಧಾನ ಅನುಸರಿಸಲಾಗುತ್ತದೆ.

ಉದಾಹರಣೆಗೆ, ಬಿಹಾರದ ಮಖಾನಾ, ಜಮ್ಮು ಮತ್ತು ಕಾಶ್ಮೀರದ ಕೇಸರಿ, ಉತ್ತರ ಪ್ರದೇಶದ ಮಾವು, ಆಂಧ್ರಪ್ರದೇಶದಲ್ಲಿ ಮೆಣಸಿನಕಾಯಿ, ಆಂಧ್ರಪ್ರದೇಶದಿಂದ ಅರಿಶಿನ ಬೆಳೆ ಸೇರಿದಂತೆ ಇತರ ರಾಜ್ಯಗಳ ಪೂರಕ ಕೃಷಿ ನಿರ್ವಹಣಾ ಮೂಲಸೌಕರ್ಯಗಳನ್ನು ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.

ಈಗಾಗಲೇ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಲ್ಲಿ ಒಟ್ಟು 18,700 ಕೋಟಿ ರೂ. ಹಣವನ್ನು ರೈತರಿಗೆ ನೀಡಲಾಗಿದೆ. ಫಸಲ್ ಭೀಮಾ ಯೋಜನೆಯ ಅಡಿ ಒಟ್ಟು 6,400 ರೂ. ಹಣವನ್ನು ಪಾವತಿಸಲಾಗಿದೆ ಎಂದು ಹೇಳಿದರು. ಔಷಧಿ ಗುಣವಿರುವ ಗಿಡಗಳ ಬೆಳವಣಿಗೆ ಉತ್ತೇಜನಕ್ಕೆ 4 ಸಾವಿರ ಕೋಟಿ ರೂಪಾಯಿ ಮೀಸಲು. ಗಂಗಾ ನದಿಯ ಎರಡೂ ಕಿನಾರೆಗಳಲ್ಲಿ ಔಷಧೀಯ ಸಸ್ಯಗಳ ಕೃಷಿಗೆ ಕ್ರಮ.

10 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಔಷಧೀಯ ಗಿಡಗಳ ಕೃಷಿಗೆ ಕ್ರಮ. ಜೇನು ಸಾಕಾಣಿಕೆಗೆ ಉತ್ತೇಜನ. ಇದರಿಂದ ಪರಿಸರ ಸಮತೋಲನಕ್ಕೂ ಪೂರಕ. ಇದಕ್ಕಾಗಿ 500 ಕೋಟಿ ರೂಪಾಯಿ ನಿಗದಿ ಮತ್ತು ಗ್ರಾಮೀಣ ಪ್ರದೇಶದ 2 ಕೋಟಿ ಜೇನು ಹುಳು ಸಾಕಾಣೆಗಾರರಿಗೆ ಪ್ರಯೋಜನವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಈಗಾಗಲೇ ಚಾಲ್ತಿಯಲ್ಲಿರುವ ಅಪರೇಷನ್ ಗ್ರೀನ್ ಯೋಜನೆಗೆ 500 ಕೋಟಿ ರೂಪಾಯಿಗಳ ಹೆಚ್ಚುವರಿ ನೆರವು. ಇದರಿಂದ ರೈತರು ಬೆಳೆದ ಕೃಷಿ ಉತ್ಪನ್ನಗಳ ಸಾಗಾಟ ಹಾಗೂ ಕೋಲ್ಡ್ ಸ್ಟೋರೇಜ್ ಸಂಗ್ರಹಕ್ಕೆ ಉತ್ತೇಜನ. ಸದ್ಯಕ್ಕೆ ಇದು ಪೈಲಟ್ ಅಧ್ಯಯನ ರೂಪದಲ್ಲಿರುತ್ತದೆ. ರೈತರು ಬೆಳೆದ ಶೀಘ್ರ ಹಾಳಾಗುವ ಕೃಷಿ ಉತ್ಪನ್ನಗಳನ್ನು ಕಾಪಾಡಲು ಮತ್ತು ಸೂಕ್ತ ಬೆಲೆಯಲ್ಲಿ ವಿಕ್ರಯಿಸಲು ಈ ಯೋಜನೆ ಉತ್ತೇಜನ ನೀಡುವುದು ಇದರ ಉದ್ದೇಶವಾಗಿದೆ.

ಅತ್ಯಗತ್ಯ ವಸ್ತುಗಳ ಕಾಯ್ದೆ, 1955ರಿಂದ ಈ ಕಾಯ್ದೆ ಜಾರಿಯಲ್ಲಿದೆ, ಇದಕ್ಕೆ ತಿದ್ದುಪಡಿ ತರಲು ನಿರ್ಧಾರ. ಇದರಿಂದ ರೈತರು ಬೆಳೆದ ಬೆಲೆಗಳಿಗೆ ಉತ್ತಮ ಬೆಲೆ ಒದಗಿಸಲು ಕ್ರಮ. ಎಣ್ಣೆಕಾಳು, ಬೇಳೆ ಕಾಳು, ಆಲೂಗಡ್ಡೆ, ಈರುಳ್ಳಿ ಬೆಳೆಗಳಿಗೆ ಎಲ್ಲಾ ಕಾಲದಲ್ಲೂ ಉತ್ತಮ ಬೆಲೆ ಒದಗಿಸಲು ಇದು ಸಹಕಾರಿ ಎಂದು ಹೇಳಿದರು.

ರೈತರು ತಮ್ಮ ಬೆಲೆಯನ್ನು ಉತ್ತಮ ಬೆಲೆಗೆ ಮಾರಲು ಕೇಂದ್ರೀಯ ಕಾನೂನು ರೂಪಿಸಲು ಕ್ರಮ. ಇದರಿಂದ ರೈತರಿಗೆ ಅಂತರ್ ರಾಜ್ಯ ಮಾರಾಟಕ್ಕಿರುವ ನಿರ್ಬಂಧ ರದ್ದು, ಇ-ಮಾರಾಟ ವ್ಯವಸ್ಥೆಗೆ ಉತ್ತೇಜನ. ಇದರಿಂದಾಗಿ ರೈತರು ತಮ್ಮ ಉತ್ಪನ್ನಗಳನ್ನು ತಮ್ಮ ಇಚ್ಛೆಗೆ ಅನುಸಾರವಾಗಿ ಯಾರಿಗೆ ಬೇಕಾದರೂ ಮಾರಾಟ ಮಾಡಬಹುದಾಗಿದೆ. ಈಗಿರುವ ನಿರ್ಧಿಷ್ಟ ಪರವಾನಿಗೆದಾರರಿಗೆ ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲೇಬೇಕಾದ ಅನಿವಾರ್ಯತೆ ಈ ಕಾನೂನಿಂದ ದೂರವಾಗಲಿದೆ ಎಂದು ಸಚಿವರು ವಿವರ ಒದಗಿಸಿದರು ‌

ರೈತರು ತಮ್ಮ ಬೆಲೆಗಳನ್ನು ಸಗಟು ಬೆಲೆಗೆ ಮಾರಾಟ ಮಾಡಲು ಕಾನೂನಿನ ಚೌಕಟ್ಟು ರೂಪಣೆ. ಅತ್ಯಗತ್ಯ ವಸ್ತುಗಳ ಕಾಯ್ದೆ, 1955ರಿಂದ ಈ ಕಾಯ್ದೆ ಜಾರಿಯಲ್ಲಿದೆ, ಇದಕ್ಕೆ ತಿದ್ದುಪಡಿ ತರಲು ನಿರ್ಧಾರ.ಲಾಕ್ ಡೌನ್ ಅವಧಿಯಲ್ಲಿ ಕನಿಷ್ಟ ಬೆಂಬಲ ಬೆಲೆಯಲ್ಲಿ 74,300 ಕೋಟಿ ರೂಪಾಯಿಗಳ ಉತ್ಪನ್ನಗಳ ಖರೀದಿ.ಹಾಲು ಮತ್ತು ಹಾಲಿನ ಉತ್ಪನ್ನಗಳ ಬೇಡಿಕೆ ಲಾಕ್ ಡೌನ್ ಅವಧಿಯಲ್ಲಿ ಕುಸಿತ ಕಂಡಿದ್ದ ಕಾರಣ 560 ಲಕ್ಷ ಲೀಟರ್ ಹಾಲನ್ನು ನಾವು ಖರೀದಿಸಿದ್ದೇವೆ ಮತ್ತು ಈ ಮೂಲಕ ದೇಶದ ಹೈನುಗಾರರ ಕೈಗೆ ಈ ಹಣ ನೇರವಾಗಿ ಸಿಗಲಿದೆ.

# ‘ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ’ : 
ಕೊರೊನಾ ಲಾಕ್ ಡೌನ್‌ನಿಂದಾಗಿ ಮತ್ಸ್ಯೋದ್ಯಮಕ್ಕೂ ತೊಂದರೆ ಉಂಟಾಗಿದೆ. ಮೀನುಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೀನುಗಾರರಿಗೆ ನೆರವಾಗಲು ‘ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ’ ಜಾರಿಗೆ ಬರಲಿದೆ.ಸರ್ಕಾರ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯನ್ನು ಜಾರಿಗೆ ತರಲಿದೆ. ಮತ್ಸ್ಯೋದ್ಯಮಕ್ಕೆ ಉತ್ತೇಜನ ನೀಡಲು ಸರ್ಕಾರ ಬದ್ಧವಾಗಿದೆ. ಮತ್ಸ್ಯೋದ್ಯಮಕ್ಕೆ ಸಂಬಂಧಿಸಿದ ಚಟುವಟಿಕೆಗೆ 11 ಸಾವಿರ ಕೋಟಿ ರೂ. ಗಳನ್ನು ಮೀಸಲಾಗಿಡಲಾಗುತ್ತದೆ ಎಂದು ವಿವರಿಸಿದರು.

ಬಂದರುಗಳ ಮೂಲಸೌಕರ್ಯ ಅಭಿವೃದ್ಧಿ, ಉದ್ಯಮದ ಆಧುನೀಕರಣ, ಉತ್ಪಾದನೆ, ಉತ್ಪಾದನಾ ಸಾಮರ್ಥ್ಯ ಹೆಚ್ಚಳ, ಮಾರುಕಟ್ಟೆ ಅಭಿವೃದ್ಧಿ ಸೇರಿದಂತೆ ಮೀನುಗಾರರು ಮತ್ತು ಮೀನುಗಾರಿಕೆಗೆ ಸಂಬಂಧಿಸಿದ ಕಾರ್ಯಗಳ ನಿರ್ವಹಣೆಗೆ ಆದ್ಯತೆ ನೀಡಲಾಗುತ್ತದೆ” ಎಂದು ಹಣಕಾಸು ಸಚಿವರು ಹೇಳಿದರು.

ಹೊಸ ಉಪಕ್ರಮಗಳಿಂದ ಮುಂದಿನ ಐದು ವರ್ಷಗಳಲ್ಲಿ ಮೀನು ಉತ್ಪಾದನಾ ಸಾಮರ್ಥ್ಯ 70 ಲಕ್ಷ ಟನ್‌ಗಳಿಗೆ ಏರಿಕೆಯಾಗಲಿದೆ. 55 ಲಕ್ಷ ಜನರಿಗೆ ಉದ್ಯೋಗ ದೊರೆಯಲಿದ್ದು, 1 ಲಕ್ಷ ಕೋಟಿಯಷ್ಟು ರಫ್ತು ಹೆಚ್ಚಾಗಲಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.

ಮೀನುಗಾರಿಕೆ ನಿಷೇಧ ಇರುವ ಸಂದರ್ಭದಲ್ಲಿ ಮೀನುಗಾರರಿಗೆ ನೆರವಾಗಲು ವೈಯಕ್ತಿಕ ಮತ್ತು ದೋಣಿ ವಿಮೆಗಳನ್ನು ಜಾರಿಗೆ ತರಲಾಗುತ್ತದೆ. ಮೀನುಗಾರರು ಕೃಷಿಯೊಡನೆಯೂ ಅವಿನಾಭಾವ ಸಂಬಂಧ ಹೊಂದಿದ್ದಾರೆ” ಎಂದರು.

# ರಾಗಿಗೆ ಇನ್ಮುಂದೆ ಗ್ಲೋಬಲ್ ಬ್ರ್ಯಾಂಡಿಂಗ್ : 
ಕರ್ನಾಟಕದಲ್ಲಿ ರಾಗಿ ಬೆಳೆಯ ಬಗ್ಗೆ ಪ್ರಸ್ತಾಪಿಸಿದ ನಿರ್ಮಲಾ ಸಾವಯವ ಪದ್ಧತಿಯಲ್ಲಿ ರಾಗಿ ಬೆಳೆಯಲು ಪ್ರೋತ್ಸಾಹ ನೀಡಲಾಗುವುದು ಎಂದರು.  ಕರ್ನಾಟಕದ ರಾಗಿಗೆ ಇನ್ಮುಂದೆ ಗ್ಲೋಬಲ್ ಬ್ರ್ಯಾಂಡಿಂಗ್ ಮುಕುಟ. ಬ್ರ್ಯಾಂಡಿಂಗ್ ಮೂಲಕ ಆಹಾರ ಉತ್ಪನ್ನಗಳ ಮಾರಾಟಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ.

ಪಶುಸಂಗೋಪನೆ ಮೂಲ ಸೌಕರ್ಯ ಅಭಿವೃದ್ಧಿಗಾಗಿ 15 ಸಾವಿರ ಕೋಟಿ ರೂಪಾಯಿ ನೆರವು ನೀಡಲಾಗುವುದು. ಎಲ್ಲ ಪಶುಗಳಿಗೆ ಶೇ. 100 ರಷ್ಟು ರೋಗ ನಿರೋಧಕ ಲಸಿಕೆ ನೀಡಲಾಗುತ್ತದೆ. 1.5 ಕೋಟಿ ಹಸು ಮತ್ತು ಎಮ್ಮೆಗಳಿಗೆ ರೋಗ ನಿರೋಧಕ ಲಸಿಕೆ ನೀಡಲಾಗಿದೆ. ಒಟ್ಟಾರೆ, 53 ಕೋಟಿ ಜಾನುವಾರಗಳಿಗೆ ಲಸಿಕೆ ಹಾಕಲಾಗುವುದು. ಲಸಿಕೆ ಹಾಕಲು 13,343 ಕೋಟಿ ನೀಡಲಾಗುವುದು. 15,000 ಕೋಟಿ ರೂ. ಹೈನುಗಾರಿಕೆ ಮೂಲಸೌಕರ್ಯಕ್ಕೆ ಮೀಸಲು ಇಡಲಾಗಿದೆ.

# ಔಷಧೀಯ ಸಸ್ಯಗಳ ಕೃಷಿಗೆ ಉತ್ತೇಜನ : 
ಔಷಧೀಯ ಸಸ್ಯಗಳ ಮಾರಾಟದಿಂದ 5 ಸಾವಿರ ಕೋಟಿ ರೂಪಾಯಿ ಆದಾಯದ ನಿರೀಕ್ಷೆ. ಔಷಧೀಯ ಸಸ್ಯಗಳ ಕೃಷಿ ಉತ್ತೇಜನಕ್ಕೆ 4 ಸಾವಿರ ಕೋಟಿ ರೂಪಾಯಿ ಅನುದಾನ ಕೊಡಲಾಗಿದೆ.ಜೇನಿನಿಂದ ಉತ್ಪತ್ತಿಯಾಗುವ ಮೇಣದ ರಫ್ತು ಕಡಿಮೆ ಮಾಡಲು ಸರ್ಕಾರದ ಯತ್ನ. ಈ ಮೂಲಕ ಮಹಿಳೆಯರಿಗೆ ಜೇನಿನ ಮೇಣದಿಂದ ಉದ್ಯೋಗ ಮತ್ತು ಆದಾಯ ಹೆಚ್ಚಳಕ್ಕೆ ಒತ್ತು. ಜೇನು ಸಾಕಾಣಿಕೆಗೆ 500 ಕೋಟಿ ರೂಪಾಯಿ ಮೀಸಲು .

ನಿರ್ಮಲಾ ಸೀತಾರಾಮನ್ ಇಂದು 1.63 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್ ಘೋಷಿಸಿದ್ದಾರೆ. ಇನ್ನೂ 1.89 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್ ಘೋಷಣೆ ಬಾಕಿ‌ ಇದೆ. ಹೀಗಾಗಿ ನಾಳೆಯೂ ನಿರ್ಮಲಾ ಸೀತಾರಾಮನ್ ರಿಂದ ಪ್ಯಾಕೇಜ್ ಘೋಷಣೆ ಮುಂದುವರಿಯಲಿದೆ. ಇನ್ನೂ ಸೇವಾ ವಲಯಕ್ಕೆ ಪ್ಯಾಕೇಜ್ ಘೋಷಿಸಿಲ್ಲ‌. ವಾರಾಂತ್ಯದಲ್ಲಿ ಸೇವಾ ವಲಯಕ್ಕೆ ಪ್ಯಾಕೇಜ್ ಘೋಷಣೆ ನಿರೀಕ್ಷೆಯಿದೆ.

ಕೋವಿಡ್-19ನಿಂದ ಉಂಟಾದ ಸಂಕಷ್ಟಕ್ಕೆ ಪರಿಹಾರವಾಗಿ ಪ್ರಧಾನಿ ಮೋದಿ 20 ಲಕ್ಷ ಕೋಟಿ ರೂಪಾಯಿಗಳ ಆರ್ಥಿಕ ಪ್ಯಾಕೇಜ್ ಘೋಷಿಸಿದ್ದರು.

Facebook Comments

Sri Raghav

Admin