ಭಾರತಕ್ಕೆ ಒಲಿಯುವುದೇ ಸರಣಿ..?

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಡಿ.11- ಭಾರತ ಹಾಗೂ ವೆಸ್ಟ್‌ಇಂಡೀಸ್ ವಿರುದ್ಧ ನಡೆಯುತ್ತಿರುವ ಟ್ವೆಂಟಿ-20 ಸರಣಿ ಯಾರ ಪಾಲಾಗುತ್ತದೆ ಎಂಬ ಪ್ರಶ್ನೆಗೆ ವಾಂಖೆಡೆ ಕ್ರೀಡಾಂಗಣ ಸಾಕ್ಷಿಯಾಗಲಿದೆ. ಮೂರು ಪಂದ್ಯಗಳ ಸರಣಿಯಲ್ಲಿ ಭಾರತ ಹಗೂ ವೆಸ್ಟ್‌ಇಂಡೀಸ್ ತಲಾ ಒಂದೊಂದು ಪಂದ್ಯಗಳನ್ನು ಗೆದ್ದಿರುವುದರಿಂದ ಕಪ್ ಎತ್ತಿ ಹಿಡಿಯಲು ಎರಡು ತಂಡಗಳ ನಾಯಕರಾದ ವಿರಾಟ್ ಕೊಹ್ಲಿ ಹಾಗೂ ಕಿರಾನ್ ಫೋಲಾರ್ಡ್ ಅವರು ಕಾತರದಿಂದಿದ್ದಾರೆ.

ಎರಡು ತಂಡಗಳಲ್ಲೂ ಬಲಿಷ್ಠ ಬ್ಯಾಟ್ಸ್‍ಮನ್‍ಗಳು ಹಾಗೂ ಬೌಲರ್‍ಗಳಿದ್ದರೂ ಕೂಡ ಯುವ ಸೈನ್ಯವನ್ನೇ ಮೆಚ್ಚಿಕೊಂಡಿರುವ ವಿರಾಟ್ ಕೊಹ್ಲಿ ಪಡೆಯು ಫೀಲ್ಡಿಂಗ್‍ನಲ್ಲಿ ವೆಸ್ಟ್‍ಇಂಡೀಸ್‍ಗಿಂತ ಕಳಪೆಯಾಗಿದೆ.

ಎರಡನೆ ಪಂದ್ಯದಲ್ಲೂ ಕಳಪೆ ಫೀಲ್ಡಿಂಗ್‍ನಿಂದಲೇ ಸರಣಿ ಗೆಲ್ಲುವನ್ನು ಕೈಚೆಲ್ಲಿರುವ ವಿರಾಟ್ ಕೊಹ್ಲಿ ಪಡೆ ಮುಂಬೈನಲ್ಲಿ ಫೀಲ್ಡಿಂಗ್‍ನತ್ತ ಚಿತ್ತ ಹರಿಸಿ ಚಾಂಪಿಯನ್ಸ್ ಆಗುವುದೇ ಎಂಬುದನ್ನು ಕಾದು ನೋಡಬೇಕಾಗಿದೆ.

Facebook Comments