4ನೇ ಏಕದಿನ ಪಂದ್ಯದಲ್ಲಿ ಭಾರತಕ್ಕೆ ಸೋಲು : ಸಮಬಲ ಸಾಧಿಸಿದ ನ್ಯೂಜಿಲೆಂಡ್

ಈ ಸುದ್ದಿಯನ್ನು ಶೇರ್ ಮಾಡಿ

NZ

ರಾಂಚಿ.ಅ.26 : ರಾಂಚಿಯಲ್ಲಿಂದು ಭಾರತ-ನ್ಯೂಜಿಲೆಂಡ್ ನಡುವೆ ನಡೆದ ಏಕದಿನ ಸರಣಿಯ 4ನೇ ಪಂದ್ಯದಲ್ಲಿ ಭಾರತ ಹೀನಾಯವಾಗಿ ಸೋಲೊಪ್ಪಿಕೊಂಡಿದೆ. 19 ರನ್ ಗಳಿಂದ ಪಂದ್ಯವನ್ನು ಗೆಲ್ಲುವ ಮೂಲಕ  ನ್ಯೂಜಿಲೆಂಡ್ 5 ಪಂದ್ಯಗಳ ಏಕದಿನ ಸರಣಿಯಲ್ಲಿ 2-2 ಅಂತರದಲ್ಲಿ ಸಮಬಲ ಸಾಧಿಸಿದೆ.

ನ್ಯೂಜಿಲೆಂಡ್ ನೀಡಿದ್ದ 261 ರನ್ ಗಳ ಸವಾಲನ್ನು ಬೆನ್ನಟ್ಟಿದ ಭಾರತ ಉತ್ತಮ ಆರಂಭ ಪಡೆದುಕೊಂಡರೂ ನಂತರ ಒಬ್ಬರ ನಂತರ ಒಬ್ಬರು ಪೆವಿಲಿಯನ್ ಹಾದಿ ಹಿಡಿದು ನಿರಾಸೆ ಮೂಡಿಸಿದರು. ಆರಂಭಿಕರಾಗಿ ಬಂದ ರಹಾನೆ (57), ರೋಹಿತ್ ಶರ್ಮಾ(11) ಉತ್ತಮ ಮೊತ್ತ ಕಲೆಹಾಕುವಲ್ಲಿ ವಿಫಲರಾದರು. ನಂತರ ಬಂದ ಭರವಸೆಯ ಆಟಗಾರ ವಿರಾಟ್ ಕೊಹ್ಲಿ ಕೂಡ 45 ರನ್ ಗಳಿಸಿ ಔಟಾದರು.  ನಾಯಕ ಧೋನಿ(11), ಮನಿಷ್ ಪಾಂಡೆ(12) ರನ್ ಗಳಿಸಲಷ್ಟೇ ಶಕ್ತರಾದರು.. ನಂತರ ಬಂದ ಅಕ್ಷರ್ ಪಟೇಲ್(38) ಮತ್ತು ಅಮಿತ್ ಮಿಶ್ರಾ ಗೆಲುವಿನ ಭರವಸೆ ಮೂಡಿಸಿದರಾದರೂ ಕೊನೆಯ ಗಳಿಗೆಯಲ್ಲಿ 15 ರನ್ ಗಳಿಸಿದ್ದ ಪಾಂಡೆ ಔಟಾಗುವ ಮೂಲಕ ಗೆಲುವಿನ ಆಸೆ ಹುಸಿಯಾಯಿತು. ಧವಲ್ ಕುಲಕರ್ಣಿ (25) , ಉಮೇಶ್ ಯಾದವ್(7) ಗಳಿಸಿದರೆ, ಜಾದವ್ ಡಕ್ ಔಟ್ ಆಗುವ ಮೂಲಕ ಭಾರತದ ಸೋಲನ್ನು ಧೃಡಪಡಿಸಿದರು.

ಈ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ನ್ಯೂಜಿಲೆಂಡ್ ಅಗ್ರ ಕ್ರಮಾಂಕದ ಆಟಗಾರರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಉತ್ತಮ ಆರಂಭ ಪಡೆದು ನಿಗದಿತ 50 ಓವರ್’ನಲ್ಲಿ 7ವಿಕೆಟ್ ನಷ್ಟಕ್ಕೆ 260 ರನ್ ಗಳಿಸಿ ಭಾರತಕ್ಕೆ 261 ರನ್ ಗಳ ಟಾರ್ಗೆಟ್ ನೀಡಿತ್ತು.

ನ್ಯೂಜಿಲೆಂಡ್ ಪರ  ಮಾರ್ಟಿನ್ ಗಪ್ಟಿಲ್ 72, ಟಾಮ್ ಲಥಾಮ್ 39, ಕೇನ್ ವಿಲಿಯಮ್ಸನ್ 41, ರಾಸ್ ಟೇಲರ್ 35, ಜೇಮ್ಸ್ ನಿಶಾಮ್ 6, ಜಾನ್ ವಾಟ್ಲಿಂಗ್ 14, ಅಯಂಟನ್ ಡೆವಿಚ್ 11, ಮಿಷೆಲ್ ಸ್ಯಾಂಟನರ್ ಅಜೇಯ 17, ಟಿಮ್ ಸೌಥಿ ಅಜೇಯ 9 ರನ್ ಗಳಿಸಿ 260 ಕಲೆಹಾಕಿದರು. ಭಾರತದ ಪರ ಬೌಲರ್ ಗಳಾದ ಅಮಿತ್ ಮಿಶ್ರಾ 2 , ಉಮೇಶ್ ಯಾದವ್, ಧವಳ್ ಕುಲಕರ್ಣಿ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್ ತಲಾ ಒಂದು ವಿಕೆಟ್ ಪಡೆದರು.

ಈ ಮೂಲಕ ಸರಣಿಯಲ್ಲಿ  ಸಮಬಲ ಸಾಧಿಸಿದ ಕಿವಿಸ್ ಪಡೆ ಅ.29 ರಂದು ವಿಶಾಖಪಟ್ಟಣಂನಲ್ಲಿ ನಡೆಯುವ 5ನೇ ಹಾಗೂ ಅಂತಿಮ ಪಂದ್ಯದಲ್ಲಿ ಗೆಲ್ಲುವ  ಆತ್ಮ ವಿಶ್ವಾಸ ಹೆಚ್ಚಿಸಿಕೊಂಡಿದೆ.

ಸಂಕ್ಷಿಕ್ತ ಸ್ಕೋರ್ :

New Zealand 260/7 (50.0 ov)

India 241 (48.4 ov)

ನ್ಯೂಜಿಲೆಂಡ್ ಸ್ಕೋರ್ :
ನ್ಯೂಜಿಲೆಂಡ್ : 50 ಓವರ್ 260/7
ಮಾರ್ಟಿನ್ ಗುಪ್ಟಿಲ್ 72
ಕೇನ್ ವಿಲಿಯಮ್ಸನ್ 41
ಟಾಮ್ ಲಾಥಾಮ್ 39
ರಾಸ್ ಟೇಲರ್ 35
ಜೇಮ್ಸ್ ನಿಶಾಮ್ 6
ಜಾನ್ ವಾಟ್ಲಿಂಗ್ 14
ಅಯಂಟನ್ ಡೆವಿಚ್ 11
ಮಿಷೆಲ್ ಸ್ಯಾಂಟನರ್17 (ಅಜೇಯ)
ಟಿಮ್ ಸೌಥಿ ಅಜೇಯ 9(ಅಜೇಯ)
ಭಾರತ :
ರಹಾನೆ – 57
ರೋಹಿತ್ ಶರ್ಮಾ – 11
ವಿರಾಟ್ ಕೊಹ್ಲಿ ಕೂಡ – 45
ಧೋನಿ – 11
ಮನಿಷ್ ಪಾಂಡೆ – 12
ಅಕ್ಷರ್ ಪಟೇಲ್ – 38
ಅಮಿತ್ ಮಿಶ್ರಾ – 14
ಕೇದಾರ್ ಜಾಧವ್ – 0
ಧವಲ್ ಕುಲಕರ್ಣಿ – 25
ಉಮೇಶ್ ಯಾದವ್ – 7

 

► Follow us on –  Facebook / Twitter  / Google+

Facebook Comments

Sri Raghav

Admin