4ನೇ ಹಾಗೂ ಅಂತಿಮ ಟೆಸ್ಟ್ ಗೆ ಮಳೆ ಅಡ್ಡಿ

ಈ ಸುದ್ದಿಯನ್ನು ಶೇರ್ ಮಾಡಿ

Rain

ಪೋರ್ಟ್ ಆಫ್ ಸ್ಪೇನ್,ಆ.19– ನಾಯಕ ವಿರಾಟ್ ಕೊಹ್ಲಿ ನೇತೃತ್ವದ ಪ್ರವಾಸಿ ತಂಡ 2-0 ಅಂತರದಿಂದ ಅತಿಥೇಯರ ವಿರುದ್ಧ ಸರಣಿ ಗೆದ್ದಿದ್ದು, ವೇಸ್ಟ್ ಇಂಡೀಸ್ ವಿರುದ್ದ ನಡೆಯುತ್ತಿರುವ 4ನೇ ಹಾಗೂ ಅಂತಿಮ ಟೆಸ್ಟ್ನಲ್ಲಿ ಮೊದಲ ದಿನದಾಟ ಮಳೆಗೆ ಆಹುತಿಯಾಗಿದೆ.   ಇಲ್ಲಿನ ಕ್ವೀನ್ಸ್ಪಾರ್ಕ್ ಶಟಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 4ನೇ ಟೆಸ್ಟ್ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆತಿಥೇಯ ಪರ ಆರಂಭಿಕರಾಗಿ ಕಣಕ್ಕಿಳಿದ ಕ್ರೀಗ್ ಬ್ರಾಥ್ಲೆಟ್ ಹಾಗೂ ಲಿಯಾನ್ ಜಾನ್ಸನ್ ಜೋಡಿ ಆರಂಭದಲ್ಲಿ ಉತ್ತಮ ಬ್ಯಾಟಿಂಗ್ ಮಾಡಿದ್ದರೂ ತಂಡದ ಮೊತ್ತ 31 ರನ್ ಆಗಿದ್ದಾಗ ಇಶಾಂತ್ಗೆ ಜಾನ್ಸ್ಗೆ(9)ಗೆ ಕಾಚ್ ನೀಡಿದರು.

ಬ್ಯಾಟ್ಸ್ಮನ್ ಡಾರೇವ್ ಬ್ರಾವೊ(10) ಕ್ರೀಸ್ನಲ್ಲಿ ಹೆಚ್ಚು ಹೊತ್ತು ನಿಲ್ಲದೆ ಅಶ್ವಿನ್ ಬೌಲಿಂಗ್ಗೆ ಕ್ಲೀನ್ ಬೋರ್ಡ್ ಆದರು. ಜವಾಬ್ದಾರಿ ಆಟವಾಡಿದ ಬ್ರಾಥ್ವೇವ್ ಅಜೇಯ(32) ಹಾಗೂ ಸ್ಯಾಮ್ಯುಲ್ ಅಜೇಯ(4) ರನ್ಗಳಿಸಿದರು. ತಂಡದ ಮೊತ್ತ 22 ಓವರ್ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ ಮಳೆಯಿಂದ ಮೈದಾನದಲ್ಲಿ ನೀರು ತುಂಬಿಕೊಂಡಿತು. ಹೀಗಾಗಿ ಪಂದ್ಯ ಸ್ಥಗಿತಗೊಳಿಸಿ 2ನೇ ದಿನಕ್ಕೆ ಮುಂದೂಡಲಾಯಿತು.

Facebook Comments

Sri Raghav

Admin