4 ಕೋಟಿರೂ.ಗಳಿಗೂ ಹೆಚ್ಚಿನ ಮೊತ್ತಕ್ಕೆ ಹರಾಜಾದ ಮಹಾತ್ಮಗಾಂಧಿ ಸ್ಟ್ಯಾಂಪ್
ಲಂಡನ್, ಏ.20-ರಾಷ್ಟ್ರಪಿತ ಮಹಾತ್ಮಗಾಂಧಿ ಅವರ ಭಾವಚಿತ್ರ ಇರುವ ನಾಲ್ಕು ಜೊತೆ ಅಪರೂಪದ ಅಂಚೆಚೀಟಿಗಳು ಇಂಗ್ಲೆಂಡ್ನಲ್ಲಿ 5,00,000 ಪೌಂಡ್ಗಳಿಗೆ (4 ಕೋಟಿರೂ.ಗಳಿಗೂ ಹೆಚ್ಚು) ಹರಾಜು ಆಗಿದೆ. ಭಾರತೀಯ ಯಾವುದೇ ಅಂಚೆ ಚೀಟಿ ಈವರೆಗೆ ಇಷ್ಟು ದೊಡ್ಡ ಮೊತ್ತಕ್ಕೆ ಹರಾಜು ಆಗಿಲ್ಲ ಎಂದು ಅದನ್ನು ಮಾರಾಟ ಮಾಡಿದವರು ಹೇಳಿದ್ದಾರೆ. 1948ರ ಗಾಂಧಿ ಅಂಚೆ ಚೀಟಿಯಲ್ಲಿ 13 ಮಾತ್ರ ಈಗ ಚಲಾವಣೆಯಲ್ಲಿವೆ. 10 ರೂಪಾಯಿಗಳ ಪರ್ಪಲ್ ಬ್ರೌನ್ ಅಂಡ್ ಲೇಕ್ ಸರ್ಮಿಸ್ ಸ್ಟ್ಯಾಂಪ್ ಇದಾಗಿದೆ.
ನಾಲ್ಕು ಜೊತೆ ವಿರಳ ಅಂಚೆ ಚೀಟಿಯನ್ನು ಆಸ್ಟ್ರೇಲಿಯಾದ ಖಾಸಗಿ ಅಂಚೆ ಕಚೇರಿ ಸಂಗ್ರಹಕರೊಬ್ಬರಿಗೆ ಅತ್ಯಧಿಕ ಬೆಲೆಗೆ ಮಾರಾಟ ಮಾಡಲಾಗಿದೆ ಎಂದು ಇಂಗ್ಲೆಂಡ್ ಮೂಲದ ಡೀಲರ್ ಸ್ಟ್ಯಾನ್ಲಿ ಗಿಬ್ಬೊನ್ಸ್ ಹೇಳಿದ್ದಾರೆ. ಗಾಂಧಿ ಆಳೆತ್ತರದ ಚಿತ್ರವನ್ನು ಪ್ರತಿಬಿಂಬಿಸುವ ಈ ಅಂಚೆ ಚೀಟಿ ಅತ್ಯಂತ ಅಪರೂಪದ್ದು ಮತ್ತು ಮೌಲ್ಯಯುತವಾದುದು ಎಂದು ಬಣ್ಣಿಸಲಾಗಿದೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS