4 ಕೋಟಿ ರೂ.ಮೌಲ್ಯದ 14 ಕೆಜಿ ಚಿನ್ನ ಲೂಟಿ ಮಾಡಿದ ಖತರ್ನಾಕ್ ಜೋಡಿ..!

ಈ ಸುದ್ದಿಯನ್ನು ಶೇರ್ ಮಾಡಿ

COUPLE-bOBBERY

ಅಹಮದಾಬಾದ್, ನ.27-ಮಹಿಳೆಯೊಬ್ಬಳೂ ಸೇರಿದಂತೆ ಮಾರಕಾಸ್ತ್ರಗಳೊಂದಿಗೆ ಸಜ್ಜಾಗಿದ್ದ ಇಬ್ಬರು ದರೋಡೆಕೋರರು ಖಾಸಗಿ ಸಂಸ್ಥೆಯೊಂದಕ್ಕೆ ನುಗ್ಗಿ ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ 4 ಕೋಟಿ ರೂ. ಮೌಲ್ಯದ 14.2 ಕೆಜಿ ಚಿನ್ನದ ಗಟ್ಟಿಗಳನ್ನು ಲೂಟಿ ಮಾಡಿ ಪರಾರಿಯಾಗಿರುವ ಸಿನಿಮೀಯ ಘಟನೆ ಗುಜರಾತ್‍ನ ಮಿತಖಾಲಿ ಬಳಿ ನಡೆದಿದೆ.  ದರೋಡೆಕೋರರ ಆಕ್ರಮಣದಿಂದ ಸೋನ್‍ಪಾಲ್ ಶರ್ಮ ಮತ್ತು ಸತೀಶ್‍ಪಾಲ್ ಚೌಹಾಣ್ ಎಂಬ ಇಬ್ಬರು ಗಾರ್ಡ್‍ಗಳಿಗೆ ಗಾಯಗಳಾಗಿವೆ. ಈ ಸಂಬಂಧ ವಸಂತ್ ವಿಹಾರ್ ಸೊಸೈಟಿಯಲ್ಲಿರುವ ಎಸ್‍ಐಎಸ್ ಕ್ಯಾಷ್ ಸರ್ವಿಸ್ ಪ್ರೈವೇಟ್ ಲಿಮಿಟೆಡ್‍ನ ಅಧಿಕಾರಿ ಅಮಿತ್ ಮಿಶ್ರಾ ನವರಂಗ್‍ಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

https://www.youtube.com/watch?v=RdBh0tLVU0o

ಮುಖಕ್ಕೆ ಬಟ್ಟೆ ಸುತ್ತಿಕೊಂಡು ಕಬ್ಬಿಣದ ಸರಳು ಮತ್ತು ಸುತ್ತಿಗೆಗಳೊಂದಿಗೆ ಶನಿವಾರ ಮುಂಜಾನೆ ಸಂಸ್ಥೆಯೊಳಗೆ ನುಗ್ಗಿದ ಇಬ್ಬರು ದರೋಡೆಕೋರರು ಗಾರ್ಡ್‍ಗಳ ಮೇಲೆ ಹಲ್ಲೆ ನಡೆಸಿ ಭದ್ರತಾ ಕಪಾಟಿನಲ್ಲಿದ್ದ ಚಿನ್ನದ ಗಟ್ಟಿಗಳಿದ್ದ ಪೆಟ್ಟಿಗಳನ್ನು ಲೂಟಿ ಮಾಡಿ ಪರಾರಿಯಾಗಿದ್ದಾರೆ. ಕಂಪನಿಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಕೃತ್ಯ ದಾಖಲಾಗಿದ್ದು, ದರೋಡೆಕೋರರಲ್ಲಿ ಒಬ್ಬಳು ಮಹಿಳೆ ಇರುವುದು ದೃಢಪಟ್ಟಿದೆ.   ಈ ಜಿಲ್ಲೆಯಲ್ಲಿ ಸಕ್ರಿಯವಾಗಿರುವ ಬಂಟಿ-ಬಬ್ಲಿ ಎಂಬ ಕುಖ್ಯಾತ ದರೋಡೆಕೋರರ ಕೃತ್ಯ ಇದಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಅಲ್ಲದೇ ಈ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯ ಕೈವಾಡ ಇರಬಹುದು ಎಂಬ ಗುಮಾನಿಯೂ ಇದೆ. ದರೋಡೆಕೋರರ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆಯನ್ನು ತೀವ್ರಗೊಳಿಸಿದ್ದಾರೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin