4 ಮಂದಿ ಐಪಿಎಸ್ ಅಧಿಕಾರಿಗಳ ವರ್ಗಾವಣೆ, ದಕ್ಷಣಕನ್ನಡ ಜಿಲ್ಲೆಗೆ ರವಿಕಾಂತೇಗೌಡ

ಈ ಸುದ್ದಿಯನ್ನು ಶೇರ್ ಮಾಡಿ

Ravikante-Gowda--01

ಬೆಂಗಳೂರು. ಜ.20 : ರಾಜ್ಯ ಸರ್ಕಾರ ಶನಿವಾರ ನಾಲ್ಕು ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿದೆ. ಈ ವರೆಗೂ ಬೆಳಗಾವಿ ಜಿಲ್ಲೆಯ ಪೊಲೀಸ್ ವರಿಷ್ಟಧಿಕಾರಿಯಾಗಿದ್ದ ರವಿಕಾಂತೇಗೌಡ ಅವರನ್ನು ದಕ್ಷಣಕನ್ನಡ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ.ದಕ್ಷಿಣಕನ್ನಡಜಿಲ್ಲೆಯಎಸ್.ಪಿ ಯಾಗಿದ್ದ ಸುಧೀಂದ್ರಕುಮಾರ್‍ರೆಡ್ಡಿಅವರನ್ನು ಬೆಳಗಾವಿಗೆ ವರ್ಗಾವಣೆಗೊಳಿಸಲಾಗಿದೆ. ಕಳೆದ ಹಲವು ತಿಂಗಳಿನಿಂದ ದಕ್ಷಿಣಕನ್ನಡಜಿಲ್ಲೆಯಲ್ಲಿ ಕೋಮು ಗಲಭೆಉಂಟಾಗಿದೊಡ್ಡ ವಿವಾದವೇ ಸೃಷ್ಟಿಯಾಗಿತ್ತು. ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ಪೊಲೀಸ್ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಈ
ಜಿಲ್ಲೆಯಲ್ಲಿಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳ ಕಾರ್ಯವೈಖರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ಇಲ್ಲಿನಎಸ್‍ಪಿಯಾಗಿದ್ದ ಸುಧೀಂದ್ರಕುಮಾರ್‍ರೆಡ್ಡಿಯನ್ನುಎತ್ತಂಗಡಿ ಮಾಡಲಾಗಿದೆ.

ವರ್ಗವಣೆಗೊಂಡ ಅಧಿಕಾರಿಗಳು

ರವೀಕಾಂತ್‍ಗೌಡ- ಎಸ್.ಪಿ. ದಕ್ಷಣಕನ್ನಡ
ಸುಧೀಂದ್ರಕುಮಾರ್‍ರೆಡ್ಡಿ- ಎಸ್.ಪಿ ಬೆಳಗಾವಿ
ಕುಲ್‍ದೀಪ್‍ಕುಮಾರ್‍ಜೈನ್- ಎಸ್‍ಪಿ ವಿಜಯಪುರ
ಬಿ.ಎಂ. ಲಕ್ಷ್ಮೀ ಪ್ರಸಾದ್- ಎಸ್‍ಪಿ ನಕ್ಸಲ್ ನಿಗ್ರಹದಳ(ಎಎನ್‍ಎಪ್)

Facebook Comments

Sri Raghav

Admin