4 ಲಕ್ಷಕ್ಕೆ ಮಗು ಮಾರಾಟ ಮಾಡುತ್ತಿದ್ದ ತಂದೆಯ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Babay

ಗದಗ, ಸೆ.25- ಹೆಣ್ಣು ಮಗು ಎಂಬ ಕಾರಣಕ್ಕೆ ಪಾಪಿ ತಂದೆಯೊಬ್ಬ ಹಸುಗೂಸನ್ನು ಮಾರಾಟ ಮಾಡಲು ಮುಂದಾದ ಘಟನೆ ತಾಲ್ಲೂಕಿನ ಹುಲಕೋಟೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಫಕೀರಪ್ಪ ಗುಂಜಾಳ ತನ್ನ 13 ದಿನದ ಹೆಣ್ಣು ಮಗುವನ್ನು ಪತ್ನಿಗೆ ತಿಳಿಯದಂತೆ ಎತ್ತಿಕೊಂಡು ಬಂದು 4 ಲಕ್ಷ ರೂ.ಗೆ ಮಾರಾಟ ಮಾಡಲು ಯತ್ನಿಸಿದ್ದಾನೆ. ಸುದ್ದಿ ತಿಳಿದ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಭಾರತಿ ಶೆಟ್ಟರ್ ಪೊಲೀಸರಿಗೆ ವಿಷಯ ತಿಳಿಸಿ ಮಗುವನ್ನು ರಕ್ಷಿಸಿ ಫಕೀರಪ್ಪನನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಈ ಸಂಬಂಧ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin