4 ವರ್ಷಗಳ ಹಿಂದೆ ಜೈಲಿನಿಂದ ಪರಾರಿಯಾಗಿದ್ದ ಎಸ್ಕೇಪ್ ಶಂಕರ ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

arrested

ಬೆಂಗಳೂರು, ಮೇ 20– ಜೈಲಿನಿಂದ ಪರಾರಿಯಾಗಿದ್ದ ಎಸ್ಕೇಪ್ ಶಂಕರನನ್ನು ಪೊಲೀಸರು ಬಂಧಿಸಿದ್ದಾರೆ.  ಕಳೆದ ನಾಲ್ಕು ವರ್ಷಗಳ ಹಿಂದೆ 20 ಕೈದಿಗಳನ್ನು ವೈದ್ಯಕೀಯ ಪರೀಕ್ಷೆಗೆಂದು ವಿಕ್ಟೋರಿಯಾ ಆಸ್ಪತ್ರೆಗೆ ಕರೆತಂದಿದ್ದಾಗ ಶೌಚಾಲಯಕ್ಕೆ ಹೋಗಬೇಕೆಂದು ಹೇಳಿ ತಪ್ಪಿಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.  ಅಂದಿನಿಂದಲೂ ವೇಷ ಬದಲಿಸಿಕೊಂಡು ತಲೆ ಮರೆಸಿಕೊಂಡಿದ್ದ ಎಸ್ಕೇಪ್ ಶಂಕರನನ್ನು ಮೈಸೂರು ರಸ್ತೆಯ ಗೋಪಾಲನ್ ಮಾಲ್‍ನಲ್ಲಿ ಬಂಧಿಸಲಾಗಿದೆ.



ಗೋಪಾಲನ್ ಮಾಲ್‍ಗೆ ಬಂದಿದ್ದ ಶಂಕರ್‍ನ ಫೋಟೋವನ್ನು ದೂರದಿಂದ ತೆಗೆದ ಕ್ರೈಂ ಸಿಬ್ಬಂದಿಯೊಬ್ಬರು ಹಿರಿಯ ಅಧಿಕಾರಿಗಳಿಗೆ ಕಳಿಸಿದ್ದಾರೆ. ಹಿರಿಯ ಅಧಿಕಾರಿಗಳು ಆ ಫೋಟೋವನ್ನು ಜೈಲ್ ಸೂಪರಿಂಟೆಂಡೆಂಟ್ ಕೃಷ್ಣಕುಮಾರ್‍ಗೆ ಕಳುಹಿಸಿದ್ದಾರೆ. ಎಸ್ಕೇಪ್ ಶಂಕರನಿಗೂ, ಫೋಟೋಗೂ ಸಾಮ್ಯತೆ ಇದ್ದ ಹಿನ್ನೆಲೆಯಲ್ಲಿ ಆತನನ್ನು ವಶಕ್ಕೆ ಪಡೆಯುವಂತೆ ಸೂಚಿಸಿದ್ದಾರೆ.   ಬ್ಯಾಟರಾಯನಪುರ ಹಾಗೂ ಆರ್‍ಆರ್ ನಗರ ಠಾಣೆ ಪೊಲೀಸರು ಎಸ್ಕೇಪ್ ಶಂಕರನನ್ನು ಬಂಧಿಸಿ ಮತ್ತೆ ಜೈಲಿಗೆ ಅಟ್ಟಿದ್ದಾರೆ.

2001ರಲ್ಲಿ ಈತ ಉದ್ಯಮಿಯೊಬ್ಬರ ಪುತ್ರನನ್ನು ಅಪಹರಿಸಿದ್ದ. 2004ರಲ್ಲಿ ಆರೋಪಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. 2011ರಲ್ಲಿ ಪೆರೋಲ್ ಮೇಲೆ ಹೊರಬಂದು ವಾಪಸ್ ಜೈಲಿಗೆ ಹೋಗಿರಲಿಲ್ಲ. ಆಗ ಮತ್ತೆ ಆತನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin