4 ವರ್ಷ 9 ತಿಂಗಳು ಕಳೆದರೂ ಇನ್ನೂ ಟೇಕಾಪ್ ಆಗಿಲ್ಲ ಆಗಿಲ್ಲ ರಾಜ್ಯ ಸರ್ಕಾರ

ಈ ಸುದ್ದಿಯನ್ನು ಶೇರ್ ಮಾಡಿ

Cm-Session-Jagadish

ಬೆಂಗಳೂರು, ಫೆ.8- ರಾಜ್ಯ ಸರ್ಕಾರಕ್ಕೆ ನಾಲ್ಕವರ್ಷ 9 ತಿಂಗಳು ಕಳೆದರೂ ಇನ್ನೂ ಟೇಕಾಪ್ ಆಗಿಲ್ಲ. ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲ ವಿ.ಆರ್.ವಾಲಾ ಅವರು ಮಾಡಿರುವ ಭಾಷಣ ಸರ್ಕಾರದ ಸಾಧನಾ ಪುಸ್ತಕವಾಗಿದೆ ಎಂದು ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ವಿಧಾನಸಭೆಯಲ್ಲಿಂದು ಟೀಕಿಸಿದರು. ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಟಿವಿ ಮತ್ತು ಪತ್ರಿಕೆಗಳ ಜಾಹೀರಾತಿನಲ್ಲಿ ಮಾತ್ರ ಸರ್ಕಾರ ಟೇಕಾಪ್ ಆಗಿದೆ. ರಾಜ್ಯಪಾಲರ ಭಾಷಣ ಸಂಪ್ರದಾಯದಂತೆ ಸರ್ಕಾರವನ್ನು ಹೊಗಳಲಾಗಿದೆ. ಮುಂದಿನ ದೂರದೃಷ್ಟಿ ಭಾಷಣದಲ್ಲಿ ವ್ಯಕ್ತವಾಗಿಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿಲ್ಲದಿದ್ದರೂ ರಾಜ್ಯಪಾಲರ ಮೂಲಕ ಸರ್ಕಾರ ಸಹಭಾಶ್ ಗಿರಿ ಪಡೆದಿದೆ. ಆಡಳಿತದಲ್ಲಿ ಇದುವರೆಗೂ ಟೇಕಾಪ್ ಆಗಿಲ್ಲ ಎಂದು ಆರೋಪಿಸಿದರು.

ಕಳೆದ ನವೆಂಬರ್ ಅಂತ್ಯಕ್ಕೆ ಬಜೆಟ್ ಘೋಷಿತ ಅನುದಾನದಲ್ಲಿ 82 ಸಾವಿರ ಕೋಟಿ ರೂ. ಹಣ ಖರ್ಚು ಮಾಡಬೇಕಾಗಿತ್ತು. ಅಷ್ಟ ಹಣವನ್ನು ಕೇವಲ 3 ತಿಂಗಳಲ್ಲಿ ಹೇಗೆ ಖರ್ಚು ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು. ಕೃಷಿ ಇಲಾಖೆ ಶೇ.42.88, ನೀರಾವರಿ ಶೇ.35, ನಗರಾಭಿವೃದ್ಧಿ ಇಲಾಖೆ ಶೇ.37.55, ಲೋಕೋಪಯೋಗಿ ಶೇ.28.74, ಕೌಶಲ್ಯಾಭಿವೃದ್ಧಿ ಶೇ.36, ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಶೇ.23.19ರಷ್ಟು ಮಾತ್ರ ಸಾಧನೆ ಮಾಡಿದೆ. ಪರಿಣಾಮಕಾರಿಯಾಗಿ ಬಜೆಟ್ ಅನುದಾನ ಅನುಷ್ಠಾನ ಆಗುತ್ತಿಲ್ಲ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗಳಲ್ಲಿ ಪದೇ ಪದೇ ಅಧಿಕಾರಿಗಳ ವರ್ಗಾವಣೆ ನಡೆದರೆ ಉತ್ತಮ ಆಡಳಿತ ನೀಡಲು ಹೇಗೆ ಸಾಧ್ಯ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಬೆಂಗಳೂರು, ಫೆ.8- ವಿರೋಧ ಪಕ್ಷದ ನಾಯಕರು ಮಾತನಾಡುವಾಗ ಸಚಿವರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸದನದಲ್ಲಿ ಹಾಜರಿರಬೇಕು ಎಂಬುದನ್ನು ಒಪ್ಪುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಗೆ ತಿಳಿಸಿದ್ದರು.  ವಿರೋಧಪಕ್ಷದ ನಾಯಕ ಜಗದೀಶ್ ಶೆಟ್ಟರ್ ಅವರು ಮೊದಲ ಆಡಳಿತ ಪಕ್ಷದ ಸಾಲಿನಲ್ಲಿ ಸಚಿವರು ಹಾಜರಿಲ್ಲ ಎಂದು ಟೀಕಿಸಿದಾಗ. ಮಧ್ಯ ಪ್ರವೇಶಿಸಿದ ಸಿಎಂ ಮೇಲಿನಂತೆ ಉತ್ತರಿಸಿ. ಈ ಪರಿಪಾಠ ನಿಮ್ಮ ಕಾಲದಿಂದಲೂ ನಡೆದುಕೊಂಡು ಬಂದಿದೆ ಎಂದರು. ಶೆಟ್ಟರ್ ಅವರ ಆಕ್ಷೇಪಕ್ಕೆ ದನಿಗೂಡಿಸಿ ಶಾಸಕ ಸಿ.ಟಿ.ರವಿ, ದಿನ ಸಾಯೋರಿಗೆ ಅಳೋರ್ಯಾರು ಎಂಬಂತೆ ಆಗಿದೆ ಎಂದು ಛೇಡಿಸಿದರು.

ಮಾತು ಮುಂದುವರೆಸಿದ ಜಗದೀಶ್ ಶೆಟ್ಟರ್, ವಿರೋಧ ಪಕ್ಷದ ನಾಯಕರು ಮಾತನಾಡುವಾಗ ಸಂಬಂಧಪಟ್ಟ ಸಚಿವರು ಹಾಜರಿರಬೇಕು. ಪದೇ ಪದೇ ಈ ವಿಚಾರವನ್ನು ಪ್ರಸ್ಥಾಪಿಸುತ್ತಿದ್ದರೂ ಗಮನ ಹರಿಸದಿದ್ದರೆ ಹೇಗೆ. ಮುಖ್ಯಮಂತ್ರಿಗಳು ಸದನದಲ್ಲಿದ್ದಾರೆ. ಹೀಗಾಗಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ಮಾಡುವುದಾಗಿ ಹೇಳಿದರು.

Facebook Comments

Sri Raghav

Admin