4 ಸಾಕಾಗಿಲ್ಲ ಅಂತ 5ನೇ ಮದುವೆಗೆ ರೆಡಿಯಾಗಿದ್ದ ಬಿಎಸ್‍ಎಫ್ ಯೋಧ ಅಂದರ್

ಈ ಸುದ್ದಿಯನ್ನು ಶೇರ್ ಮಾಡಿ

bsf--02

ಮೈಸೂರು, ಅ.23- ಈಗಾಗಲೇ ನಾಲ್ಕು ಮದುವೆಯಾಗಿದ್ದ ಯೋಧ ಐದನೇ ಮದುವೆಗೆ ಸಿದ್ಧನಾಗಿದ್ದಾಗ ಮೊದಲ ಪತ್ನಿಯ ಆಗಮನದಿಂದ ಜೈಲು ಸೇರಿದ್ದಾನೆ. ಕೆ.ಆರ್.ನಗರ ತಾಲ್ಲೂಕಿನ ಸಾಲಿಗ್ರಾಮ ಹೋಬಳಿಯ ಲಕ್ಕಿಕುಪ್ಪೆ ಗ್ರಾಮದ ನಿವಾಸಿ ಶಿವನಂಜಪ್ಪ(36) ಬಂಧಿತ ಯೋಧ.
ಹತ್ತು ವರ್ಷಗಳ ಹಿಂದೆ ವರಲಕ್ಷ್ಮಿ ಎಂಬಾಕೆಯನ್ನು ವಿವಾಹವಾಗಿದ್ದ ಶಿವನಂಜಪ್ಪ ತದನಂತರ ಈಕೆಗೆ ವರದಕ್ಷಿಣೆ ಕಿರುಕುಳ ನೀಡಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, ಈ ಪ್ರಕರಣ ನ್ಯಾಯಾಲಯದಲ್ಲಿದೆ.

ಜಮ್ಮುವಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಈತ ರಜೆ ಮೇಲೆ ಆಗಾಗ್ಗೆ ಬಂದು ವಿವಾಹ ಮಾಡಿಕೊಂಡು 20 ದಿನ ಇದ್ದು ವಾಪಸ್ ಮರಳುತ್ತಿದ್ದನು.
ಈ ರೀತಿ ಈಗಾಗಲೇ ನಾಲ್ಕು ಯುವತಿಯರನ್ನು ಮದುವೆ ಮಾಡಿಕೊಂಡು ಅವರಿಗೆ ಮೋಸ ಮಾಡಿದ್ದಾನೆ. ಇದೀಗ ಐದನೇ ಮದುವೆ ಮಾಡಿಕೊಳ್ಳಲು ಗೋಕುಲಂ ನಿವಾಸಿ ಹಾಲಿನ ವ್ಯಾಪಾರಿಹೊಬ್ಬರ ಪುತ್ರಿಯನ್ನು ವಿವಾಹವಾಗಲು ವಿಜಯನಗರದಲ್ಲಿನ ಯೋಗಾನರಸಿಂಹಸ್ವಾಮಿ ದೇವಾಲಯದಲ್ಲಿ ಸಿದ್ಧತೆಗಳು ನಡೆದಿದ್ದವು.

ಈ ವಿಷಯ ಮೊದಲ ಪತ್ನಿಗೆ ತಿಳಿದು, ತನ್ನ ಮದುವೆ ಫೋಟೋಗಳೊಂದಿಗೆ ತಂದೆಯೊಂದಿಗೆ ಆಗಮಿಸಿ ಮದುವೆಗೆ ತಯಾರಾಗಿದ್ದ ಯುವತಿಗೆ ಹಾಗೂ ಈಕೆಯ ಫೋಷಕರಿಗೆ ಶಿವನಂಜಪ್ಪನ ಅಸಲಿಬಣ್ಣ ತಿಳಿಸಿದ್ದಾರೆ. ತಕ್ಷಣ ಯುವತಿಯ ಚಿಕ್ಕಪ್ಪ ಮದುವೆಯನ್ನು ನಿಲ್ಲಿಸಿ ಈತನ ಮೋಸತನ ಅರಿತು ವಿಜಯನಗರ ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಈತನನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments

Sri Raghav

Admin