ದಾಖಲೆಯಿಲ್ಲದ 4.47 ಕೋಟಿ ವಶ..!

ಈ ಸುದ್ದಿಯನ್ನು ಶೇರ್ ಮಾಡಿ

ಹೈದರಾಬಾದ್,ಸೆ.2- ಮಾಜಿ ವಿಮಾ ವೈದ್ಯಕೀಯ ಸೇವೆಗಳ ನಿರ್ದೇಶಕಿ (ಐಎಂಎಸ್) ಹಾಗೂ ಮತ್ತೊಬ್ಬ ಅಧಿಕಾರಿಗೆ ಸೇರಿದ, ಸೂಕ್ತ ದಾಖಲೆಗಳಿಲ್ಲದ ಬರೋಬ್ಬರಿ 4.47 ಕೋಟಿ ರೂ.ಗಳನ್ನು ತೆಲಂಗಾಣದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ವಶಪಡಿಸಿಕೊಂಡಿದೆ.

ಐಎಂಎಸ್ ಮಾಜಿ ನಿರ್ದೇಶಕಿ ದೇವಿಕಾ ರಾಣಿಯ ಬಳಿಯಿದ್ದ ಸೂಕ್ತ ದಾಖಲೆ ಇಲ್ಲದ 3.75 ಕೋಟಿ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಜೊತೆಗೆ ವಾಣಿಜ್ಯ ಮತ್ತು ವಸತಿ ಜಾಗವನ್ನು ಖರೀದಿಸಲು ಹೈದರಾಬಾದ್‍ನ ಸೈಬರಾಬಾದ್ ಪ್ರದೇಶದಲ್ಲಿ ರಿಯಲ್ ಎಸ್ಟೇಟ್ ಕಂಪನಿಯೊಂದರಲ್ಲಿ ಹೂಡಿಕೆ ಮಾಡಿದ್ದ ಇಎಸ್‍ಐ ಫಾರ್ಮಸಿಸ್ಟ್ ನಾಗಲಕ್ಷ್ಮಿಗೆ ಸೇರಿದ್ದ 72 ಲಕ್ಷ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸಿಬಿ ತಿಳಿಸಿದೆ.

ಈ ಇಬ್ಬರು ಸೂಕ್ತ ದಾಖಲೆಗಳಿಲ್ಲದೆ ಆರು ವಸತಿ ಫ್ಲ್ಯಾಟ್‍ಗಳ ಖರೀದಿಗಾಗಿ ಹಣ ಹೂಡಿಕೆ ಮಾಡಿದ್ದರು. ಇದರಿಂದ ಸುಮಾರು 15,000 ಚದರ ಅಡಿ ವಾಣಿಜ್ಯ ಜಾಗವನ್ನು ತಮ್ಮ ಕುಟುಂಬದ ಹೆಸರಿನಲ್ಲಿ ಖರೀದಿಸಲು ಹೂಡಿಕೆ ಮಾಡಿದ್ದರು. ದೇವಿಕಾ ರಾಣಿ ಸಹ 22 ಲಕ್ಷ ಹೂಡಿಕೆ ಮಾಡಿದ್ದರು ಎಂದು ತಿಳಿದುಬಂದಿದೆ.

ಆಸ್ತಿಯನ್ನು ಖರೀದಿಸಲು ಚೆಕ್ ಮತ್ತು ಆನ್‍ಲೈನ್ ವರ್ಗಾವಣೆಯ ಮೂಲಕ ಪಾವತಿಸಲಾಗಿದ್ದ 2.29 ಕೋಟಿ ಮೊತ್ತವನ್ನು ಸಹ ಗುರುತಿಸಲಾಗಿದೆ.

Facebook Comments