ಉಡುಗೊರೆ ನೆಪದಲ್ಲಿ 4.49 ಲಕ್ಷ ವಂಚನೆ
ಹುಬ್ಬಳ್ಳಿ,ನ.4-ಫೇಸ್ಬುಕ್ ಮೂಲಕ ಪರಿಚಯವಾದ ವ್ಯಕ್ತಿಯೊಬ್ಬ ಧಾರವಾಡ ಜಿಲ್ಲೆಯ ರಾಮನಗರ ನಿವಾಸಿ ರಾಜಶೇಖರ ನವಲೂರ ಅವರಿಗೆ ಲಂಡನ್ನಿಂದ ಉಡುಗೊರೆ ಕಳುಹಿಸಿರುವುದಾಗಿ ನಂಬಿಸಿ ಅವರಿಂದ 4.49 ಲಕ್ಷ ವರ್ಗಾವಣೆ ಮಾಡಿಸಿಕೊಂಡು ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
ರಾಜಶೇಖರ ಅವರ ತಾಯಿಯ ಫೇಸ್ಬುಕ್ ಖಾತೆಯಿಂದ ಪರಿಚಯವಾದ ವ್ಯಕ್ತಿ, ಲಂಡನ್ನಿಂದ ಗಿಫ್ಟ್ ಬಂದಿದೆ ಎಂದು ನಂಬಿಸಿ ವಿದೇಶಿ ಹಣ ಭಾರತದ ರೂಪಾಯಿಗೆ ಬದಲಾಯಿಸಲು, ತೆರಿಗೆ ಹಾಗೂ ಇತರ ಶುಲ್ಕವೆಂದು ಹಂತ ಹಂತವಾಗಿ ಬ್ಯಾಂಕ್ ಖಾತೆ, ಫೋನ್ ಪೇ ಮೂಲಕ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಹುಬ್ಬಳ್ಳಿ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಕೂಟಿ ಖರೀದಿಯಲ್ಲಿ ಮೋಸ:
ಒಎಲ್ಎಕ್ಸ್ನಲ್ಲಿ ಮಾರಾಟಕ್ಕಿಟ್ಟಿದ್ದ ಸ್ಕೂಟಿ ಖರೀದಿಸಲು ಮುಂದಾದ ಗದಗ ರಸ್ತೆ ಶಾಲಿನಿ ಪಾರ್ಕ್ ನಿವಾಸಿ ಕೃಷ್ಣಮಂಜರಿ ಕಲಾಲ ಅವರು, ಅನ್ಲೈನ್ನಲ್ಲಿ 21ಸಾವಿರ ಕಳೆದುಕೊಂಡಿದ್ದಾರೆ. ಸ್ಕೂಟಿ ಖರೀದಿಸಲೆಂದು ಒಎಲ್ಎಕ್ಸ್ನಲ್ಲಿ ಕೃಷ್ಣಮಂಜರಿ ಮೊಬೈಲ್ ಸಂಪರ್ಕಿಸಿದ್ದಾರೆ. ಈ ವೇಳೆ 21 ಸಾವಿರ ಕಳೆದುಕೊಂಡು ಮೋಸಹೋಗಿದ್ದಾರೆ.