ನಾಲ್ವರು ಆಪ್ ಶಾಸಕರ ವಿರುದ್ದ ಎಫ್‍ಐಆರ್

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಅ.29- ದೆಹಲಿಯಲ್ಲಿ ನೈರ್ಮಲ್ಯ ಕಾರ್ಯವನ್ನು ಖಾಸಗೀಕರಣಗೊಳಿಸಲು, ದಕ್ಷಿಣ ದೆಹಲಿ ಮಹಾನಗರ ಪಾಲಿಕೆಯ (ಎಸ್‍ಡಿಎಂಸಿ) ಸ್ಥಾಯಿ ಮಂಡಳಿ ಸಭೆಯಲ್ಲಿ ಪ್ರಸ್ತಾವನೆ ತರಲು ಯೋಜಿಸಲಾಗಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಆಪ್ ಪಕ್ಷದ ಶಾಸಕರ ವಿರುದ್ಧ ದೆಹಲಿ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.

ಭಾರತೀಯ ದಂಡ ಸಂಹಿತೆಯ ವಿವಿಧ ವಿಭಾಗಗಳಡಿ ಆಮ್ ಆದ್ಮಿ ಪಕ್ಷದ ಶಾಸಕರಾದ ಕುಲದೀಪ್ ಮೋನು (ಕೊಂಡ್ಲಿ), ರಾಖಿ ಬಿಡ್ಲಾನ್ (ಮಂಗೋಲ್ಪುರಿ), ಅಖಿಲೇಶ್ ತ್ರಿಪಾಠಿ (ಮಾಡೆಲ್ ಟೌನ್) ಮತ್ತು ರೋಹಿತ್ ಮಹ್ರೋಲಿಯಾ (ತಿರ್ಲೋಕ್‍ಪುರಿ) ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ.

ಮಧ್ಯ ದೆಹಲಿಯ ಸಿವಿಕ್ ಕೇಂದ್ರದಲ್ಲಿ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ನಿನ್ನೆ ಮಧ್ಯಾಹ್ನ 1 ಗಂಟೆಗೆ ಪ್ರಾರಂಭವಾದ ಪ್ರತಿಭಟನೆಯಲ್ಲಿ ಎಎಪಿ ಶಾಸಕರೊಂದಿಗೆ ಸುಮಾರು ಎರಡು ಸಾವಿರ ನೈರ್ಮಲ್ಯ ಕಾರ್ಮಿಕರು ಭಾಗವಹಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರತಿಭಟನಾಕಾರರು ರಸ್ತೆ ತಡೆ ನಡೆಸಲು ಮುಂದಾದಾಗ ಪೊಲೀಸರು ಅವರನ್ನು ನಿಯಂತ್ರಿಸಲು ಪ್ರಯತ್ನಿಸಿದ್ದರು. ಈ ವೇಳೆ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ಘರ್ಷಣೆ ಉಂಟಾಗಿ 9ಕ್ಕೂ ಹೆಚ್ಚು ಪೊಲೀಸರ ಮೇಲೆ ಗಾಯಗೊಂಡಿದ್ದಾರೆ. ಕಮಲಾ ಮಾರ್ಕೆಟ್ ಪ್ರದೇಶದ ಎಸಿಪಿ ಕೈ ಬೆರಳುಗಳು ಮುರದಿಹೋಗಿವೆ ಎಂದು ಹಿರಿಯ ಪೆÇಲೀಸ್ ಅಧಿಕಾರಿ ತಿಳಿಸಿದ್ದಾರೆ.

Facebook Comments