ಕಾಶ್ಮೀರದ ಬದ್ಗಾಂ ಜಿಲ್ಲೆಯಲ್ಲಿ 4 ಲಷ್ಕರ್ ಉಗ್ರರ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

ಶ್ರೀನಗರ, ಮೇ 24- ಭಯೋತ್ಪಾದನೆ ಕೃತ್ಯಕ್ಕೆ ಸಂಚು ರೂಪಿಸುತ್ತಿದ್ದ ಪಾಕಿಸ್ತಾನ ಪೋಷಿತ ಲಷ್ಕರ್-ಎ-ತೈಬಾ(ಎಲ್‍ಇಟಿ) ಉಗ್ರಗಾಮಿ ಸಂಘಟನೆ ನಾಲ್ವರು ಉಗ್ರರನ್ನು ಭದ್ರತಾ ಪಡೆಗಳು ಕಾಶ್ಮೀರ ಕಣಿವೆಯಲ್ಲಿ ಬಂಸಿವೆ.

ಜಮ್ಮು-ಕಾಶ್ಮೀರದ ಬದ್ಗಾಂ ಜಿಲ್ಲೆಯಲ್ಲಿ ನಿನ್ನೆ ನಡೆದ ಈ ಕಾರ್ಯಾಚರಣೆಯಲ್ಲಿ ನಾಲ್ವರು ಭಯೋತ್ಪಾದಕರನ್ನು ಬಂಸಲಾಗಿದೆ. ಸೆರೆ ಹಿಡಿಯಲಾದ ಉಗ್ರಗಾಮಿಗಳಿಂದ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು, ಬುಲೆಟ್‍ಗಳಿರುವ ಮ್ಯಾಗಝೈನ್‍ಗಳು ಮತ್ತು ಸೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ.

ವಾಸಿಂ ಗ್ಯಾನಿ, ಫಾರೂಕ್ ಅಹಮದ್ ದರ್, ಮಹಮದ್ ಯಾಸಿನ್ ಮತ್ತು ಅಜರುದ್ಧೀನ್ ಮಿರ್ ಬಂದಿತ ಉಗ್ರಗಾಮಿಗಳು ಎಂದು ಉನ್ನತಾಕಾರಿಯೊಬ್ಬರು ತಿಳಿಸಿದ್ದಾರೆ.

ಈ ಉಗ್ರರು ಎಲ್‍ಟಿಇ ಸಂಘಟನೆಯ ನಿಕಟ ಸಹಚರರಾಗಿದ್ದು, ಬದ್ಗಾಂ ಸೇರಿದಂತೆ ವಿವಿಧೆಡೆ ದುಷ್ಕøತ್ಯಗಳನ್ನು ನಡೆಸಲು ಲಷ್ಕರ್ ಉಗ್ರಗಾಮಿಗಳಿಗೆ ಶಶ್ತ್ರಾಸ್ತ್ರಗಳು, ಹಣ, ಆಶ್ರಯ ಮತ್ತು ಕುತಂತ್ರಗಳನ್ನು ರೂಪಿಸಲು ನೆರವಾಗಿದ್ದರು.

Facebook Comments

Sri Raghav

Admin