ಹೋಳಿ ದುರಂತ : 4 ಮಕ್ಕಳು ಜಲಸಮಾಧಿ..!

ಈ ಸುದ್ದಿಯನ್ನು ಶೇರ್ ಮಾಡಿ

ಕೃಷ್ಣನಗರ್ (ಪ.ಪಂ.), ಮಾ.10- ಬಣ್ಣಗಳ ಹಬ್ಬ ಹೋಳಿ ಸಂಭ್ರಮಾಚರಣೆ ನಂತರ ಕೊಳದಲ್ಲಿ ಸ್ನಾನ ಮಾಡುತ್ತಿದ್ದ ನಾಲ್ಕು ಮಕ್ಕಳು ನೀರು ಪಾಲಾದ ದುರ್ಘಟನೆ ಇಂದು ಮಧ್ಯಾಹ್ನ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ ಸಂಭವಿಸಿದೆ.

ಮೃತಪಟ್ಟ ಮಕ್ಕಳು 9 ರಿಂದ 13 ವರ್ಷಗಳ ವಯೋಮಾನದವರು. ಇವರಲ್ಲಿ ಇಬ್ಬರು ಅವಳಿ ಮಕ್ಕಳು. ನಾಡಿಯಾ ಜಿಲ್ಲೆಯ ತಹೇರ್‍ಪುರ್ ಪೊಲೀಸ್ ಠಾಣೆ ವ್ಯಾಪ್ತಿಯ ಚಮಾಲ್‍ಡಂಗಾ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ.

ಗ್ರಾಮದಲ್ಲಿ ಇತರ ಮಕ್ಕಳೊಂದಿಗೆ ಹೋಳಿ ಆಚರಿಸಿಕೊಂಡ ನಾಲ್ವರು ಮಕ್ಕಳು ಹತ್ತಿರದಲ್ಲೇ ಇದ್ದ ಕೊಳದಲ್ಲಿ ಸ್ನಾನ ಮಾಡುತ್ತಿದ್ದಾಗ ಈ ದುರಂತ ಸಂಭವಿಸಿದೆ ಎಂದು ಪೆÇಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Facebook Comments