ಕಾಶ್ಮೀರದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸ್ಕೆಚ್ ಹಾಕಿದ್ದ ನಾಲ್ವರು ಜೈಷ್ ಉಗ್ರರ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

ಶ್ರೀನಗರ, ಮೇ 13-ಲಾಕ್‍ಡೌನ್ ವೇಳೆ ಕಾಶ್ಮೀರ ಕಣಿವೆಯಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗಲು ಸಂಚು ರೂಪಿಸುತ್ತಿರುವ ಪಾಕಿಸ್ತಾನ ಬೆಂಬಲಿತ ಉಗ್ರಗಾಮಿಗಳ ನಿಗ್ರಹಕ್ಕಾಗಿ ಭಾರತೀಯ ಭದ್ರತಾ ಪಡೆಗಳು ಬಿರುಸಿನ ಕಾರ್ಯಾಚರಣೆ ಮುಂದುವರಿಸಿವೆ.

ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಅವಂತಿಪುರದಲ್ಲಿ ಪಾಕಿಸ್ತಾನದ ನಿಷೇದಿತ ಜೈಷ್-ಎ-ಮಹಮದ್ (ಜೆಇಎಂ) ಭಯೋತ್ಪಾದನೆ ಸಂಘಟನೆಯ ನಾಲ್ವರು ಉಗ್ರರನ್ನು ಭದ್ರತಾ ಪಡೆಗಳು ನಿನ್ನೆ ಬಂಧಿಸಿವೆ.

ಬಂಧಿತರಿಂದ ಸ್ಫೋಟಕಗಳು, ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರಿಂದಾಗಿ ಕಣಿವೆ ಪ್ರಾಂತ್ಯದಲ್ಲಿ ನಡೆಯಲಿದ್ದ ಉಗ್ರರ ಮತ್ತೊಂದು ವಿಧ್ವಂಸಕ ಕೃತ್ಯವನ್ನು ಯೋಧರು ವಿಫಲಗೊಳಿಸಿದ್ದಾರೆ.

ಶಬೀರ್ ಅಹಮದ್ ಪ್ಯಾರೇ, ಶೀರಾಝ್, ಅಹಮದ್ ದರ್, ಶಫತ್ ಅಹಮದ್ ಮಿರ್ ಮತ್ತು ಇಶ್ಫಾಕ್ ಅಹಮದ್ ಶಾ ಬಂದಿತ ಜೈಷ್ ಆತಂಕವಾದಿಗಳು, ಇವರೆಲ್ಲರೂ ಅವಂತಿಪುರಾದ ಖೆರಿವ್‍ನ ಬಾತೇನ್ ಪ್ರದೇಶದ ನಿವಾಸಿಗಳು.

ಕಾಶ್ಮೀರ ಕಣಿವೆಯ ತ್ರಾಲ್, ಖ್ರೇವ್ ಸೇರಿದಂತೆ ಹಲವೆಡೆ ಜೈಷ್ ಉಗ್ರಗಾಮಿ ಸಂಘಟನೆಯ ಜÁಲ ವಿಸ್ತರಣೆಯಾಗಲು ಇವರೆಲ್ಲರೂ ನೆರವು ನೀಡಿದ್ದರು. ಭಯೋತ್ಪಾದಕರಿಗೆ ಬೇಕಾದ ಹಣ, ಆಶ್ರಯ, ಶಸ್ತ್ರಾಸ್ತ್ರಗಳು ಮತ್ತು ಇತರ ಮಾಹಿತಿಗಳನ್ನು ಇವರು ನೀಡಿ ವಿಧ್ವಂಸಕ ಕೃತ್ಯಗಳಿಗೆ ಕುಮ್ಮಕ್ಕು ನೀಡಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ.

Facebook Comments

Sri Raghav

Admin