ಎತ್ತಿನಗಾಡಿ ಕೆರೆಗೆ ಉರುಳಿ ಬಿದ್ದು ಒಂದೇ ಕುಟುಂಬದ ನಾಲ್ವರು ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ, ಜೂ.1-ಏರಿ ಮೇಲೆ ಹೋಗುತ್ತಿದ್ದ ಎತ್ತಿನಗಾಡಿ ಜಾರಿ ಕೆರೆಗೆ ಬಿದ್ದು ಒಂದೇ ಕುಟುಂಬದ ನಾಲ್ವರು ಮೃತಪಟ್ಟಿರುವ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಉದ್ದೂರು ಹೊಸಹಳ್ಳಿಯಲ್ಲಿ ನಡೆದಿದೆ.

ಮೃತಪಟ್ಟವರನ್ನು ರಾಜೇಗೌಡ(55) ಶಾಂತಮ್ಮ(45), ರುಚಿತಾ( 8), ಮತ್ತು ಧೃತಿ (5) ಎಂದು ಗುರುತಿಸಲಾಗಿದೆ. ನಿನ್ನೆ ರಾತ್ರಿ ಜೋರು ಮಳೆಯಾಗಿತ್ತು. ಕೆಸರಿನಿಂದ ತುಂಬಿದ್ದ ಏರಿಯ ರಸ್ತೆಯಲ್ಲಿ ಎತ್ತಿನಗಾಡಿಯಲ್ಲಿ ಹೋಗುತ್ತಿದ್ದಾಗ ಜಾರಿ ಬಿದ್ದಿದ್ದಾರೆ ಎಂದು ಹೇಳಲಾಗಿದೆ.

ಘಟನೆ ನಂತರ ನಾಲ್ವರು ಯಾರ ಕಣ್ಣಿಗೂ ಬೀಳದೇ ಇರುವುದರಿಂದ ಆತಂಕ ಹೆಚ್ಚಾಗಿತ್ತು. ಪೊಲೀಸರು ಸ್ಥಳಕ್ಕೆ ಆಗಮಿಸಿ ಶೋಧ ನಡೆಸಿದಾಗ ನಾಲ್ವರೂ ಮೃತಪಟ್ಟಿರುವುದು ಖಚಿತವಾಗಿದೆ.

ಎತ್ತಿನ ಗಾಡಿಯಲ್ಲಿ ಆಲೂಗಡ್ಡೆ ತುಂಬಿಕೊಂಡು ಬಿತ್ತನೆಗೆ ಮಾಡಲು ಹೋಗುತ್ತಿದ್ದಾಗ ಘಟನೆ ನಡೆದಿದೆ. ಶುಕ್ರವಾರ ದಿನ ಮಳೆ ಸುರಿದ ಹಿನ್ನೆಲೆಯಲ್ಲಿ ರಸ್ತೆ ಗೊಜ್ಜೆಯಾಗಿತ್ತು ಎಂದು ತಿಳಿದುಬಂದಿದೆ.  ಈ ಸಂಬಂಧ ಹಳ್ಳಿಮೈಸೂರುನಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments