ನಾಲ್ವರು ಕುಖ್ಯಾತ ಸರ-ಮನೆಗಳ್ಳರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Chaine-AND-Home-Robbers

ಬೆಂಗಳೂರು, ಆ.18- ರಾತ್ರಿ ವೇಳೆ ಮನೆ ಬಾಗಿಲು ಮುರಿದು ಚಿನ್ನಾಭರಣ ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿರುವ ಅಮೃತಹಳ್ಳಿ ಪೊಲೀಸರು 1.20 ರೂ.ಮೌಲ್ಯದ 45 ಗ್ರಾಂ ತೂಕದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಕೆ.ಆರ್ ಪುರಂನ ವಿಜಿನಾಪುರ ಸ್ಲಂ ನಿವಾಸಿ ಶೇಷಾದ್ರಿ (28), ದೇವಸಂದ್ರ ಮಸೀದಿ ರಸ್ತೆ ನಿವಾಸಿ ಕುಮಾರ್ (29) ಹಾಗೂ ವಿಜಿನಾಫುರ ನಿವಾಸಿ ಕುಮಾರ್ (26) ಬಂಧಿತ ಆರೋಪಿಗಳು. ಇವರ ಬಂಧನದಿಂದ ಎರಡು ಪ್ರಕರಣಗಳು ಬೆಳಕಿಗೆ ಬಂದಿದ್ದು, ಅವರಿಂದ 1.20 ಲಕ್ಷ ರೂ. ಮೌಲ್ಯದ 42 ಗ್ರಾಂ ತೂಕದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.

ಚಿಕ್ಕಜಾಲ ಪೊಲೀಸ್ ಠಾಣೆ
ಚಿಕ್ಕಜಾಲ ಪೊಲೀಸರು ಈರಣ್ಣ ಎಂಬಾತನನ್ನು ಬಂಧಿಸಿ 12 ಲಕ್ಷ ರೂ.ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಆಂಧ್ರಪ್ರದೇಶದ ಆನಂತಪುರ ಜಿಲ್ಲೆಯ ಅಮರಾಪುರ ತಾಲೂಕಿನ ಕಾಂಚಿಗುಂಟ ಗ್ರಾಮದ ಈರಣ್ವ (29) ಸರಗಳವು ಮಾಡುತ್ತಿದ್ದ. ಈತನನ್ನು ಬಂಧಿಸಿ ಮೂರು ಪ್ರಕರಣಗಳಿಗೆ ಸಂಬಂಧಿಸಿ ಒಟ್ಟು 12.5 ಲಕ್ಷ ರೂ.ಮೌಲ್ಯದ 500 ಗ್ರಾಂ ತೂಕದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸಂಪಿಗೆಹಳ್ಳಿ
ಕುಖ್ಯಾತ ಸರಗಳ್ಳನನ್ನು ಬಂಧಿಸಿರುವ ಸಂಪಿಗೆಹಳ್ಳಿ ಪೊಲೀಸರು, 1.25 ಲಕ್ಷ ರೂ.ಮೌಲ್ಯದ 42 ಗ್ರಾಂ ತೂಕದ ಚಿನ್ನದ ಒಡವೆಗಳನ್ನು ವಶಪಡಿಸಿಕೊಂಡಿದ್ದಾರೆ.
ಗೋವಿಂದಪುರ ಕ್ರಾಸ್ ಹನೀಫಿಯಾ ಮಸೀದಿ ಹಿಂಭಾಗದ ನಿವಾಸಿ ಸೈಯದ್ ಇಮ್ರಾನ್ ಬಂಧಿತ ಆರೋಪಿ.  ಈತನನ್ನು ಬಂಧಿಸಿದ ಪೊಲೀಸರು, ಸಂಪಿಗೆಹಳ್ಳಿ ಮತ್ತು ಬಾಗಲೂರು ಪೊಲೀಸ್  ಠಾಣಾ ವ್ಯಾಪ್ತಿಗಳಲ್ಲಿ ನಡೆದ ಪ್ರಕರಣಗಳಿಗೆ ಸಂಬಂಧಿಸಿ 1.25 ಲಕ್ಷ ರೂ.ಮೌಲ್ಯದ 42 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

Facebook Comments

Sri Raghav

Admin