400ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ‘ಚಕ್ರವರ್ತಿ’ ಆರ್ಭಟ

ಈ ಸುದ್ದಿಯನ್ನು ಶೇರ್ ಮಾಡಿ

darshan
ಸ್ಯಾಂಡಲ್‍ವುಡ್‍ನ ಬಹು ನಿರೀಕ್ಷಿತವಾದ ಚಿತ್ರ ಬೆಳ್ಳಿ ಪರದೆ ಮೇಲೆ ಅಬ್ಬರಿಸಲು ಸಿದ್ಧವಾಗಿ ನಿಂತಿದೆ. ನಟ ಛಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಚಕ್ರವರ್ತಿ ನಾಳೆ ರಾಜ್ಯಾದ್ಯಂತ  400ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಗೆ ಬರುತ್ತಿದೆ. ಹಾಗೆಯೇ ಬಾಂಬೆ, ಚೆನ್ನೈ, ಆಂಧ್ರ ಹಾಗೂ ಕೇರಳ ರಾಜ್ಯದ ಕೆಲವು ಚಿತ್ರಮಂದಿರಗಳಲ್ಲೂ ಕೂಡ ಚಕ್ರವರ್ತಿ ಅಬ್ಬರಿಸಲಿದ್ದಾನೆ. ಚಕ್ರವರ್ತಿ ಚಿತ್ರದ ಬಿಡುಗಡೆಗೂ ಮುನ್ನ ಪತ್ರಕರ್ತರ ಮುಂದೆ ಬಂದ ಚಕ್ರವರ್ತಿ ಅಂಡ್ ಟೀಮ್, ಚಿತ್ರದ ಬಗ್ಗೆ ಹಲವಾರು ವಿಶೇಷ ಮಾಹಿತಿಗಳನ್ನು ಹಂಚಿಕೊಂಡಿದೆ.

ಬೆಂಗಳೂರಿನ ಖಾಸಗಿ ಹೋಟೆಲೊಂದರಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್, ನಾಯಕಿ ದೀಪಾ ಸನ್ನಿಧಿ, ಖಳನಟ ದಿನಕರ್ ತೂಗುದೀಪ್, ನಿರ್ದೇಶಕ ಚಿಂತನ್, ನಿರ್ಮಾಪಕ ಸಿದ್ದಾಂತ್, ನಟ ಆದಿತ್ಯ ಸೇರಿದಂತೆ ಚಿತ್ರತಂಡದ ಕಲಾವಿದರು ಮತ್ತು ತಂತ್ರಜ್ಞರು ಚಕ್ರವರ್ತಿಯ ವಿಭಿನ್ನತೆ ಮತ್ತು ವಿಶೇಷತೆಗಳನ್ನು ತಮ್ಮದೇಯಾದ ರೀತಿಯಲ್ಲಿ ಹಂಚಿಕೊಂಡರು.

darshan-78
ಮೊದಲು ಮಾತನಾಡಿದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್, ತಾನು ಇಲ್ಲಿಯವರೆಗೆ ಮಾಡಿದ 46 ಸಿನಿಮಾಗಳಿಗಿಂತ ಭಿನ್ನವಾದ ಸಿನಿಮಾ ಎಂಬುದರಲ್ಲಿ ಎರಡು ಮಾತಿಲ್ಲ. ಇದೇ ಮೊದಲ ಬಾರಿಗೆ ಒಂದೇ ಸಿನಿಮಾದಲ್ಲಿ ಮೂರು ಶೇಡ್‍ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಮೂರು ಕಾಲ ಘಟ್ಟದಲ್ಲಿ ಚಿತ್ರದ ಕಥೆ ಸಾಗುತ್ತದೆ. ಈ ಚಿತ್ರವು ಬಹಳ ಸೂಕ್ಷ್ಮವಾಗಿ ಸಿದ್ಧಪಡಿಸಿದಂತಹ ಚಿತ್ರ. ಖಂಡಿತ ಪ್ರತಿಯೊಬ್ಬರೂ ಈ ಚಿತ್ರವನ್ನು ಇಷ್ಟ ಪಡುತ್ತಾರೆ ಎಂಬ ನಂಬಿಕೆ ನನಗಿದೆ ಎಂದರು.ಚಿತ್ರದ ಪಾತ್ರದ ಬಗ್ಗೆ ಮಾತನಾಡಿದ ನಾಯಕ ನಟಿ ದೀಪಾ ಸನ್ನಿಧಿ, ಚಿತ್ರದಲ್ಲಿ ಮದ್ಯಮ ಕುಟುಂಬದ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಸಾರಥಿ ಚಿತ್ರದ ನಂತರ ಮತ್ತೊಮ್ಮೆ ದರ್ಶನ್ ಅವರೊಂದಿಗೆ ಅಭಿನಯಿಸುವ ಅವಕಾಶ ಸಿಕ್ಕಿರುವುದು ಖುಷಿ ನೀಡಿದೆ. ಚೌಕ ಸಿನಿಮಾವನ್ನು ಬಿಟ್ಟರೆ ಕಳೆದ ಎರಡು ವರ್ಷಗಳಿಂದ ಕನ್ನಡದಲ್ಲಿ ನಾನು ಅಭಿನಯಿಸಿದ ಯಾವ ಸಿನಿಮಾವೂ ರಿಲೀಸ್ ಆಗಿರಲಿಲ್ಲ. ಈಗ ಚಕ್ರವರ್ತಿ ದೊಡ್ಡ ರೀತಿಯಲ್ಲಿ ರಿಲೀಸ್ ಆಗುತ್ತಿದೆ.darshan-11
ರಿಲೀಸ್‍ಗೂ ಮೊದಲೇ ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿದ ಚಕ್ರವರ್ತಿ, ದೊಡ್ಡ ಹಿಟ್ ಆಗುತ್ತದೆ ಎಂಬ ನಂಬಿಕೆಯಿದೆ ಎಂದರು. ಇಲ್ಲಿಯವರೆಗೆ ನಿರ್ದೇಶಕನಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಿದ್ದ ದರ್ಶನ್ ಸೋದರ ದಿನಕರ್ ತೂಗುದೀಪ್ ಚಕ್ರವರ್ತಿ ಚಿತ್ರದಲ್ಲಿ ಖಳ ನಾಯಕ ನಟನಾಗಿ ಮೊದಲ ಬಾರಿಗೆ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ.

ಇದೇ ವೇಳೆ ಮಾತನಾಡಿದ ದಿನಕರ್ ತೂಗುದೀಪ್, ನಿರ್ದೇಶಕ ಚಿಂತನ್ ಒತ್ತಾಯದ ಮೇರೆಗೆ ವಿಲನ್ ಆಗಿ ಆ್ಯಕ್ಟ್ ಮಾಡುತ್ತಿದ್ದೇನೆ. ಇಲ್ಲಿಯವರೆಗೆ ತೆರೆಯ ಹಿಂದಿನ ನನ್ನ ಕೆಲಸಗಳನ್ನು ಜನ ಮೆಚ್ಚಿಕೊಂಡಿದ್ದಾರೆ. ಈಗ ತೆರೆಮುಂದೆ ಬರುತ್ತಿದ್ದೇನೆ, ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆ ಎಂಬ ಕುತೂಹಲವಿದೆ ಎಂದರು. ಇದೇ ಸಂದರ್ಭದಲ್ಲಿ ಹಾಜರಿದ್ದ ನಟ ಆದಿತ್ಯ, ನಿರ್ದೇಶಕ ಚಿಂತನ್, ನಿರ್ಮಾಪಕ ಸಿದ್ದಾಂತ್ ಸೇರಿದಂತೆ ಚಿತ್ರತಂಡದ ಸದಸ್ಯರು ಚಿತ್ರದ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು.

darshan-10
ಇನ್ನು ವಿಶೇಷ ಪಾತ್ರದಲ್ಲಿ ನಟ ಕುಮಾರ್ ಬಂಗಾರಪ್ಪ, ಚಾರುಲತ ಸೇರಿದಂತೆ ದೊಡ್ಡ ತಾರಾಬಳಗವೇ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಇದೇ ಮೊದಲ ಬಾರಿಗೆ ಸಿಂಗಲ್ ಸ್ಕ್ರೀನ್ ಸೇರಿದಂತೆ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲೂ ಕೂಡ ಮಧ್ಯರಾತ್ರಿ 12 ಗಂಟೆಯಿಂದಲೇ ಚಕ್ರವರ್ತಿ ಚಿತ್ರ ಅಬ್ಬರಿಸಲಿದೆಯಂತೆ. ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿರುವ ಅಭಿಮಾನಿಗಳ ಆಸೆ ಇಮ್ಮಡಿಗೊಂಡಂತಾಗಿದೆ. ಪ್ರೇಕ್ಷಕರು ಈ ಚಕ್ರವರ್ತಿಯನ್ನು ಯಾವ ರೀತಿ ಬರಮಾಡಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡ ಬೇಕಿದೆ.darshan-2

darshan-1

darshan-4

darshan-5

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin