ಕಟ್ಟಡದ ತ್ಯಾಜ್ಯ ಬಳಸಿ ಸಂಸದರಿಗಾಗಿ 400 ಹೊಸ ಫ್ಲಾಟ್‍ಗಳ ನಿರ್ಮಾಣ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜೂ.16-ಕಟ್ಟಡ ತ್ಯಾಜ್ಯಗಳನ್ನು ಬಳಸಿ ಸಂಸದರಿಗಾಗಿ ದೆಹಲಿಯ ಪ್ರತಿಷ್ಠಿತ ಲ್ಯುಟೆನ್ಸ್‍ನಲ್ಲಿ 400 ಹೊಸ ಫ್ಲಾಟ್‍ಗಳನ್ನು ನಿರ್ಮಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.  ಈಗಿರುವ ಹಳೆ ಪ್ಲಾಟ್‍ಗಳನ್ನು ಕೆಡವಿ ಆ ಸ್ಥಳದಲ್ಲಿ ಹೊಸ ಫ್ಲಾಟ್‍ಗಳನ್ನು ನಿರ್ಮಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ.

ಸಂಸತ್ ಭವನದ ಇಕ್ಕೆಲಗಳಲ್ಲಿರುವ ನಾರ್ತ್ ಅವಿನ್ಯೂ ಮತ್ತು ಸೌತ್ ಅವಿನ್ಯೂದಲ್ಲಿ 400 ಹೊಸ ಫ್ಲಾಟ್‍ಗಳು ತಲೆ ಎತ್ತಲಿವೆ. ಸುಮಾರು 60 ವರ್ಷಗಳಷ್ಟು ಹಳೆಯದಾದ ಫ್ಲಾಟ್‍ಗಳನ್ನು ಉರುಳಿಸಿ ಆ ಸ್ಥಳದಲ್ಲಿ ಹೊಸ ಕಟ್ಟಡಗಳನ್ನು ನಿರ್ಮಿಸಲಾಗುವುದು ಎಂದು ಕೇಂದ್ರ ಲೋಕೋಪಯೋಗಿ ಇಲಾಖೆ(ಸಿಪಿಡಬ್ಲ್ಯುಡಿ) ಮಹಾ ನಿರ್ದೇಶಕ ಪ್ರಭಾಕರ್ ಸಿಂಗ್ ತಿಳಿಸಿದ್ದಾರೆ.

ಸ್ವಾತಂತ್ರ್ಯ ಲಭಿಸಿದ ನಂತರ ನಾರ್ತ್ ಅವಿನ್ಯೂ ಮತ್ತು ಸೌಥ್ ಅವಿನ್ಯೂಗಳಲ್ಲಿ ಸಂಸದರಿಗಾಗಿ ಫ್ಲಾಟ್‍ಗಳನ್ನು ನಿರ್ಮಿಸಲಾಗಿತ್ತು. ಅದು ಈಗ ತುಂಬಾ ಹಳೆಯದಾಗಿರುವುದರಿಂದ ಅವುಗಳನ್ನು ಸಂಪೂರ್ಣವಾಗಿ ಕೆಡವಿ ಆ ಸ್ಥಳದಲ್ಲಿ ಅತ್ಯಾಧುನಿಕ 400 ಪ್ಲಾಟ್‍ಗಳನ್ನು ನಿರ್ಮಿಸಲು ಕೇಂದ್ರ ಸರ್ಕಾರದಿಂದ ಆದೇಶ ಬಂದಿದೆ ಎಂದು ಅವರು ವಿವರಿಸಿದ್ಧಾರೆ.

ನಾವು ಇದಕ್ಕಾಗಿ ಕಟ್ಟಡ ನಿರ್ಮಾಣ ತ್ಯಾಜ್ಯಗಳನ್ನು ಬಳಸುತ್ತೇವೆ. ಧ್ವಂಸಗೊಳಿಸುವ ಹಳೆಯ ಕಟ್ಟಡದ ಸಾಮಗ್ರಿಗಳನ್ನು ಪುನರ್ಬಳಕೆ ಸಂಸ್ಕøರಣೆಗೆ ಒಳಪಡಿಸಿ ನಂತರ ಬಳಸಲಾಗುವುದು ಎಂದು ಅವರು ತಿಳಿಸಿದ್ಧಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ