ಕಳೆದ 24 ಗಂಟೆಯಲ್ಲಿ 3.43 ಲಕ್ಷ ಮಂದಿಗೆ ಪಾಸಿಟಿವ್, 4000 ಸಾವು ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಮೇ.14-ಕಾಲಕ್ರಮೇಣ ಕೊರೊನಾ ಸೋಂಕು ಇಳಿಮುಖವಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ 3.43 ಲಕ್ಷ ಹೊಸ ಪ್ರಕರಣಗಳು ದಾಖಲಾಗಿವೆ. ನಿನ್ನೆಯಿಂದ 3,43,144 ಮಂದಿಗೆ ಸೋಂಕು ಕಾಣಿಸಿಕೊಂಡಿರುವುದರಿಂದ ದೇಶದ ಒಟ್ಟು ಸೋಂಕಿತರ ಸಂಖ್ಯೆ 2,40ಕೋಟಿ ಗಡಿ ದಾಟಿದೆ.

ಇದರ ಜತೆಗೆ ನಿನ್ನೆಯಿಂದ 4000 ಮಂದಿ ಮಹಾಮಾರಿಗೆ ಬಲಿಯಾಗುವ ಮೂಲಕ ಒಟ್ಟು ಸಾವನ್ನಪ್ಪಿದವರ ಸಂಖ್ಯೆ 2,62,317ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳಲ್ಲಿ ಉಲ್ಲೇಖವಾಗಿದೆ. ರಾಷ್ಟ್ರೀಯ ಚೇತರಿಕೆ ಪ್ರಮಾಣದಲ್ಲೂ ಗಣನೀಯ ಏರಿಕೆ ಕಂಡು ಬರುತ್ತಿದೆ. ಚೇತರಿಕೆ ಪ್ರಮಾಣ ಶೇ.83.50 ಹೆಚ್ಚಳಗೊಂಡಿರುವುದರಿಂದ ಸಕ್ರಿಯ ಸೋಂಕು ಪ್ರಕರಣ 37,04,893ಕ್ಕೆ ಸಿಮೀತಗೊಂಡಿದೆ.

2.40 ಕೋಟಿ ಮಂದಿ ಸೋಂಕಿತರಲ್ಲಿ ಈಗಾಗಲೇ ಎರಡು ಕೋಟಿಗೂ ಹೆಚ್ಚು ಮಂದಿ ಚೇತರಿಸಿಕೊಂಡು ಮನೆಗೆ ತೆರಳಿದ್ದಾರೆ.ಸೋಂಕಿನಿಂದ ಮರಣವನ್ನಪ್ಪುವವರ ಪ್ರಮಾಣ ಶೇ.109 ರಷ್ಟಿದೆ.

ಕಳೆದ ಆಗಷ್ಟ್‍ನಲ್ಲಿ ದೇಶದಲ್ಲಿ 20 ಲಕ್ಷ ಮಂದಿಗೆ ಸೋಂಕು ಕಾಣಿಸಿಕೊಂಡಿತ್ತು. ಈ ಸಂಖ್ಯೆ ದಿನೇ ದಿನೇ ದ್ವಿಗುಣಗೊಳ್ಳುತ್ತಿದ್ದು ಇದೀಗ ದೇಶದಲ್ಲಿ 2.40 ಕೋಟಿಗೂ ಹೆಚ್ಚು ಮಂದಿಗೆ ಸೋಂಕು ತಗುಲಿದೆ.

Facebook Comments

Sri Raghav

Admin